ಕನ್ನಡ ವಾರ್ತೆಗಳು

ರಾಷ್ಟ್ರ ಮಟ್ಟದ ಕಾರ್ಯಾಗಾರ ‘ಸೈನ್ಸ್ ಇನ್ ಆ್ಯಕ್ಷನ್’ ಉದ್ಘಾಟನೆ.

Pinterest LinkedIn Tumblr

nationl_level_workshop_1

ಮಂಗಳೂರು,ಜ.09: ಬಾಹ್ಯಾಕಾಶ ತಂತ್ರಜ್ಞಾನ ವಿಜ್ಞಾನ ಕ್ಷೇತ್ರ ಮಾತ್ರವಲ್ಲದೆ ಸಾಮಾನ್ಯರ ಜನಜೀವನದಲ್ಲೇ ಮಹತ್ತರ ಬದಲಾವಣೆಯನ್ನು ತಂದಿದೆ ಎಂದು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ಪ್ರೊ.ಯು.ಆರ್.ರಾವ್ ಹೇಳಿದ್ದಾರೆ. ನಗರದ ಬೆಂದೂರ್‌ನಲ್ಲಿರುವ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗಾಗಿ ವಿಜ್ಞಾನ ಕುರಿತ ರಾಷ್ಟ್ರ ಮಟ್ಟದ ಕಾರ್ಯಾಗಾರ ‘ಸೈನ್ಸ್ ಇನ್ ಆ್ಯಕ್ಷನ್’ ಉದ್ಘಾಟಿಸಿ ಅವರು ಗುರುವಾರ ದಿಕ್ಸೂಚಿ ಭಾಷಣ ನೀಡಿದರು.

nationl_level_workshop_2 nationl_level_workshop_3nationl_level_workshop_4

ಬಾಹ್ಯಾಕಾಶದಲ್ಲಿರುವ ಕೃತಕ ಉಗ್ರಹಗಳ ನೆರವಿನಿಂದ ಶಿಕ್ಷಣ, ಆರ್ಥಿಕ ವಹಿವಾಟು, ಕೃಷಿ ಕ್ಷೇತ್ರಗಳ ನಿರ್ವಹಣೆ ಸಾಧ್ಯವಾಗಿದೆ ಹಾಗೂ ಸಂವಹನ ಮಾಧ್ಯಮ ಉಪಗ್ರಹಗಳಿಂದಾಗಿ ಅಮೋಘ ಬದಲಾವಣೆ ಕಂಡಿದೆ ಎಂದು ಅವರು ಹೇಳಿದರು.

1750ರಲ್ಲಿ ಒಟ್ಟು ದೇಶೀಯ ಉತ್ಪನ್ನ ಪ್ರಪಂಚದ ಉತ್ಪಾದನೆಯ ಶೇ.25ರಷ್ಟಿದ್ದರೆ, ಬಳಿಕದ ದಿನಗಳಲ್ಲಿ ಇಳಿಮುಖ ಕಂಡು ಪ್ರಸ್ತುತ ಕೇವಲ ಶೇ. 2.5ರಷ್ಟಿದೆ ಎಂದು ಹೇಳಿದ ಅವರು, ಬಾಹ್ಯಾಕಾಶ ತಂತ್ರಜ್ಞಾನದ ಮೂಲಕ ಕೃಷಿ ಉತ್ಪನ್ನ ಅಭಿವೃದ್ಧಿಗೊಳಿಸಲು ಸಾಧ್ಯ ಎಂದು ಅವರು ತಿಳಿಸಿದರು. ಬಾಹ್ಯಾಕಾಶ ತಂತ್ರಜ್ಞಾನ ಅಭಿವೃದ್ಧಿಗೊಳ್ಳುತ್ತಾ ಸಾಗುತ್ತಿದ್ದು, ಮುಂದಿನ ದಿನದಲ್ಲಿ ಮಂಗಳ ಅಥವಾ ಚಂದ್ರನಲ್ಲಿಂದ ಸಂಪನ್ಮೂಲ ವಸ್ತುಗಳನ್ನು ಭೂಮಿಗೆ ತರಲು ಸಾಧ್ಯವಾಗಬಹುದು ಎಂದು ಅವರು ಹೇಳಿದರು.

nationl_level_workshop_5 nationl_level_workshop_6 nationl_level_workshop_7 nationl_level_workshop_8 nationl_level_workshop_9

ಕಾಸರಗೋಡು ಸಿಪಿಸಿಆರ್‌ಐ ನಿರ್ದೇಶಕ ಡಾ.ಪಿ.ಚೌಡಪ್ಪ ಮಾತನಾಡಿ, ವೈಜ್ಞಾನಿಕ ಸಂಶೋಧನೆಯಿಂದಾಗಿ ಕೃಷಿ ಕ್ಷೇತ್ರದಲ್ಲಿ ವಿಫುಲ ಅವಕಾಶಗಳು ಇರುವುದರಿಂದ ಯುವ ಪೀಳಿಗೆ ಇತ್ತ ಗಮನ ಹರಿಸಬೇಕು ಎಂದರು.

ಹಿಂದೆ ಒಂದು ಎಕರೆ ಪ್ರದೇಶದಲ್ಲಿ 30 ಟನ್ ಬಾಳೆಹಣ್ಣು ಉತ್ಪಾದನೆ ಸಾಧ್ಯವಾಗಿದ್ದರೆ, ಪ್ರಸ್ತುತ ಅಂಗಾಂಶ ಕೃಷಿಯಿಂದಾಗಿ 60 ಟನ್ ಉತ್ಪಾದನೆ ಸಾಧ್ಯವಾಗಿದೆ ಎಂದು ಹೇಳಿದ ಅವರು, ಇದೇ ರೀತಿ ವಿಜ್ಞಾನದಿಂದಾಗಿ ಎಲ್ಲ ಕೃಷಿ ಉತ್ಪನ್ನದಲ್ಲೂ ಬದಲಾವಣೆಯಾಗಿದೆ ಎಂದರು.

nationl_level_workshop_10 nationl_level_workshop_11 nationl_level_workshop_12 nationl_level_workshop_13 nationl_level_workshop_14 nationl_level_workshop_18 nationl_level_workshop_19 nationl_level_workshop_20 nationl_level_workshop_21 nationl_level_workshop_22 nationl_level_workshop_23 nationl_level_workshop_24

ಪಿಲಿಕುಳ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಕೆ.ವಿ.ರಾವ್ ಅಧ್ಯಕ್ಷತೆ ವಹಿಸಿದ್ದರು. ಕೆನರಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀ ಅಧ್ಯಕ್ಷ ನಿಗಮ್ ಬಿ.ವಸಾನಿ ಮುಖ್ಯ ಅತಿಥಿಯಾಗಿದ್ದರು. ಪ್ರಿನ್ಸಿಪಾಲ್ ಸಿಸ್ಟರ್ ಪ್ರೊ.ಎಂ.ಸುಪ್ರಿಯಾ ಸ್ವಾಗತಿಸಿದರು. ಕಾರ್ಯಾಗಾರದ ಸಂಚಾಲಕ ಡಾ.ಎಚ್.ಜಯಂತ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಗೀತಾ ನಜ್ರತ್ ವಂದಿಸಿದರು.

ಕೇಂದ್ರ ಸರಕಾರದ ಬಯೋಟೆಕ್ನಾಲಜಿ ವಿಭಾಗ, ಕಾಲೇಜಿನ ವಿಜ್ಞಾನ ವಿಭಾಗ, ಕೆನರಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀ ಸಹಯೋಗದಲ್ಲಿ ಕಾರ್ಯಾಗಾರ ಆಯೋಜಿಸಲಾಗಿತ್ತು.

Write A Comment