ಮನೋರಂಜನೆ

ದೀಪಿಕಾಳೊಂದಿಗಿನ ಅಫೇರ್ ಒಪ್ಪಿಕೊಂಡ ಮಲ್ಯ ಪುತ್ರ; ಡೇಟಿಂಗ್ ಮಾಡಿದ್ದು ನಿಜ

Pinterest LinkedIn Tumblr

padu

ವಿಜಯ್ ಮಲ್ಯ ಪುತ್ರ ಸಿದ್ದಾರ್ಥ್ ಮಲ್ಯ ಕೊನೆಗೂ ತಮ್ಮ ಮತ್ತು ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯೊಂದಿಗಿನ ಸಂಬಂಧದ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಕೆಲ ಕಾಲ ತಾನು ದೀಪಿಕಾರೊಂದಿಗೆ ಡೇಟಿಂಗ್ ಮಾಡಿದ್ದು ನಿಜ ಎಂದಿರುವ ಅವರು, ದೀಪಿಕಾ ಈಗಲೂ ನನ್ನ ಒಳ್ಳೆಯ ಗೆಳತಿ ಎಂದಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದ ವೇಳೆ ಮುಕ್ತವಾಗಿ ತಮ್ಮ ಅನಿಸಿಕೆ ಹಂಚಿಕೊಂಡಿರುವ ಸಿದ್ದಾರ್ಥ್ ಮಲ್ಯ, ಐಪಿಎಲ್ ಪಂದ್ಯಗಳ ವೇಳೆ ತಮ್ಮ ತಂಡದ ಪರವಿದ್ದ ದೀಪಿಕಾ ಪಡುಕೋಣೆ ಮತ್ತು ತಾವು ಸಹಜವಾಗಿ ಅತ್ಮೀಯರಾದೆವು. ನಂತರ ಡೇಟಿಂಗ್ ಕೂಡಾ ಮಾಡಿದ್ದು ಆದರೆ ಅದು ಹೆಚ್ಚು ಕಾಲ ಮುಂದುವರಿಯಲಿಲ್ಲ ಎಂದಿದ್ದಾರೆ.

ಕೆಲ ವರ್ಷಗಳ ಹಿಂದೆ ಬಾಲಿವುಡ್ ನಟ ರಣಬೀರ್ ಕಪೂರ್ ನೊಂದಿಗೆ ಅತ್ಯಂತ ಅತ್ಮೀಯರಾಗಿದ್ದ ದೀಪಿಕಾ ಪಡುಕೋಣೆ, ನಂತರ ಆ ಸಂಬಂಧ ಮುರಿದು ಬಿದ್ದ ಮೇಲೆ ತಮ್ಮ ಹೊಸ ಗೆಣೆಕಾರರ ಕುರಿತು ಬಾಯಿ ಬಿಡುತ್ತಿರಲಿಲ್ಲ. ತಮ್ಮ ಈಗಿನ ಬಾಯ್ ಫ್ರೆಂಡ್ ರಣವೀರ್ ಸಿಂಗ್ ಕುರಿತು ದೀಪಿಕಾ ಪಡುಕೋಣೆ ತುಟಿ ಬಿಚ್ಚಿಲ್ಲ.

ಮಲ್ಯ ಪುತ್ರ ತಮ್ಮಿಬ್ಬರ ನಡುವೆ ಈ ಹಿಂದೆ ಇದ್ದ ಸಂಬಂಧವನ್ನು ರಣವೀರ್ ಸಿಂಗ್ ಜೊತೆ ಈಗ ತಾನು ಹಾಯಾಗಿ ಓಡಾಡಿಕೊಂಡಿರುವಾಗ ಬಹಿರಂಗಪಡಿಸಬೇಕಾದ ಅವಶ್ಯಕತೆ ಏನಿತ್ತು ಎಂದು ಅತ್ಮೀಯರ ಬಳಿ ಹೇಳಿಕೊಂಡಿದ್ದಾರೆನ್ನಲಾಗಿದೆ. ಸಿದ್ದಾರ್ಥ್ ಮಲ್ಯ ತಮ್ಮ ಸಂದರ್ಶನದಲ್ಲಿ ನಟಿ ಅನುಷ್ಕಾ ಶರ್ಮಾರೊಂದಿಗೆ ಈ ಹಿಂದೆ ತಾವು ರೋಮ್ಯಾನ್ಸ್ ಮಾಡಿರುವುದಾಗಿ ಹರಡಿದ್ದ ವದಂತಿಗಳನ್ನು ಖಡಾಖಂಡಿತವಾಗಿ ನಿರಾಕರಿಸಿದ್ದು, ಆಕೆಯನ್ನು ತಾವು ಎರಡು ಬಾರಿ ಅದೂ ದೀಪಿಕಾ ಪಡುಕೋಣೆಯೊಂದಿಗೆ ಭೇಟಿ ಮಾಡಿದ್ದಾಗಿ ಹೇಳಿದ್ದಾರೆ.

Write A Comment