ರಾಷ್ಟ್ರೀಯ

ಅಕ್ರಮ ಸಂಬಂಧ ಮುಚ್ಚಿ ಹಾಕಲು ಪತಿಯನ್ನೇ ಫಿನಿಶ್ ಮಾಡಿದ ಪತ್ನಿ

Pinterest LinkedIn Tumblr

_Murder_weapon

ಮುಜಫರ್ ನಗರ: ಹಲವು ಸಂಶಯಗಳಿಗೆ ಕಾರಣವಾಗಿದ್ದ ಇಲ್ಲಿನ ಶ್ರೀಮಂತ ರೈತನೊಬ್ಬನ ಹತ್ಯೆ ಪ್ರಕರಣವನ್ನು ಬೇಧಿಸಿರುವ ಭೋರಾಕಾಲಾ ಪೊಲೀಸರು ಆತನ ಪತ್ನಿ ಹಾಗೂ ಸಹೋದರನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.

2014 ನವೆಂಬರ್ 15 ರಂದು ತನ್ನ ಜಮೀನಿಗೆ ತೆರಳುತ್ತಿದ್ದ ಬೋರಾ ಖುರ್ದ್ ಗ್ರಾಮದ ನಿವಾಸಿ ಅಶ್ವಿನ್ ಶರ್ಮಾ ಎಂಬಾತನನ್ನು ಗುಂಡಿಟ್ಟು ಕೊಲೆ ಮಾಡಲಾಗಿತ್ತು. ಈ ಹತ್ಯೆಯನ್ನು ಉತ್ತರ ಪ್ರದೇಶದ ಭೂಗತ ಮಾಫಿಯಾದವರು ಮಾಡಿಸಿರಬಹುದೆಂದು ಮೊದಲು ಅನುಮಾನ ವ್ಯಕ್ತವಾಗಿತ್ತು. ಮೃತನ ಪತ್ನಿ ರೂನಾ ಅಲಿಯಾಸ್ ಡಾಲಿ ಸಹ ತನ್ನ ಪತಿಗೆ ಕೆಲವರಿಂದ ಬೆದರಿಕೆ ಇತ್ತೆಂದು ಸುಳ್ಳು ಹೇಳುವ ಮೂಲಕ ತನಿಖಾಧಿಕಾರಿಗಳ ದಿಕ್ಕು ತಪ್ಪಿಸಿದ್ದಳು.

ತೀವ್ರ ತನಿಖೆ ನಡೆಸಿದ ಪೊಲೀಸರು ತಿಂಗಳ ಬಳಿಕ ಅಶ್ವಿನ್ ಶರ್ಮಾನ ನೈಜ ಕೊಲೆಗಾರರನ್ನು ಬಂಧಿಸಿದ್ದು, ಇದರಲ್ಲಿ ಆತನ ಪತ್ನಿ ಡಾಲಿ ಹಾಗೂ ಸಹೋದರ ಸುಮಿತ್ ಕೈವಾಡವಿರುವುದು ಬಹಿರಂಗವಾಗಿದೆ. ತನ್ನ ಪತಿಯ ಸಹೋದರ ಸುಮಿತ್ ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಡಾಲಿ ತಮ್ಮಿಬ್ಬರ ಸಂಬಂಧದ ಬಗ್ಗೆ ಪತಿಗೆ ಅನುಮಾನ ಬಂದ ಕಾರಣ ಸುಮಿತ್ ನೊಂದಿಗೆ ಸೇರಿಕೊಂಡು ಆತನನ್ನೇ ಗುಂಡಿಟ್ಟು ಮುಗಿಸಿದ್ದಾಳೆ.

Write A Comment