ಕನ್ನಡ ವಾರ್ತೆಗಳು

ಇ-ಮೈಲ್‌ ಐಡಿ ಹ್ಯಾಕ್‌ ಮಾಡಿ 30 ಸಾವಿರ ರೂ. ವಂಚನೆ

Pinterest LinkedIn Tumblr

hacker_0_1_0_0

ಉಡುಪಿ : ಇ-ಮೈಲ್‌ ಐಡಿ ಹ್ಯಾಕ್‌ ಮಾಡಿ 30 ಸಾವಿರ ರೂ. ವಂಚಿಸಿದ ಪ್ರಕರಣದ ಕುರಿತು ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು ಚನ್ನಪಟ್ಟಣದ ಹೊನ್ನೇಗೌಡ ಅವರು ದೂರು ನೀಡಿದವರು. ಗುರುಗಳಾದ ಡಾ| ಪ್ರಮೋದ್‌ ಕುಮಾರ್‌ ಅವರ ಇ-ಮೈಲ್‌ ಐಡಿಯಿಂದ ಡಿ. 8ರ ಬೆಳಗ್ಗೆ 11.56ಕ್ಕೆ ‘ನಾನು ತುಂಬಾ ಕಷ್ಟದಲ್ಲಿದ್ದೇನೆ ನಾನು ಕಳುಹಿಸುವ ಅಕೌಂಟ್‌ ನಂಬರಿಗೆ ಅಗತ್ಯವಾಗಿ ಹಣ ಕಳುಹಿಸು’ ಎನ್ನುವ ಸಂದೇಶವೊಂದು  ಇ-ಮೈಲ್‌ಗೆ ಬಂದಿರುತ್ತದೆ.

ಸಂದೇಶ ನಿಜವೆಂದು ನಂಬಿ ಆದಿತ್ಯಾ ಶರ್ಮ ಎನ್ನುವವರ ಎಸ್‌ಬಿಐ ಬ್ಯಾಂಕ್‌ ಖಾತೆಗೆ 30 ಸಾವಿರ ರೂ. ಜಮಾ ಮಾಡಿದ ಬಳಿಕ ಮೋಸದ ಅರಿವಾಗಿತ್ತು. ಆದಿತ್ಯಾ ಶರ್ಮ ಮತ್ತು ಯಾರೋ ಅಪರಿಚಿತ ವ್ಯಕ್ತಿಗಳು ಸೇರಿಕೊಂಡು ಇ-ಮೈಲ್‌ ಐಡಿ ಹ್ಯಾಕ್‌ ಮಾಡಿ ಹಣವನ್ನು ವರ್ಗಾವಣೆ ಮಾಡುವಂತೆ ಸುಳ್ಳು ಸಂದೇಶ ರವಾನಿಸಿ ಮೋಸ ಮಾಡಿರುವುದಾಗಿದೆ ಎಂದು ಹೊನ್ನೇಗೌಡ ದೂರಿನಲ್ಲಿ ತಿಳಿಸಿದ್ದಾರೆ.

Write A Comment