ಕರ್ನಾಟಕ

ಕಲಬುರ್ಗಿ: ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಸಂಪುಟ ಸಭೆಗೆ ಮುತ್ತಿಗೆ ಯತ್ನ

Pinterest LinkedIn Tumblr

pvec29Nov14klb11

ಕಲಬುರ್ಗಿ:  ‘ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ ಹಾಗೂ ಕಳಂಕಿತ ಸಚಿವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿ’ ಬಿಜೆಪಿ, ‘ಕಬ್ಬಿನ ಬಾಕಿ ಹಣವನ್ನು ಒಂದೇ ಕಂತಿನಲ್ಲಿ ಪಾವತಿಸಬೇಕು ಎಂದು ಆಗ್ರಹಿಸಿ’ ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರು ಇಲ್ಲಿನ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಶುಕ್ರವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಗೆ ಮುತ್ತಿಗೆ ಹಾಕಲು ಯತ್ನಿಸಿದರು.

ಸರ್ದಾರ್ ವಲ್ಲಭಭಾಯ್‌ ಪಟೇಲ್ ಮಾರ್ಗವಾಗಿ ಮಿನಿ ವಿಧಾನಸೌಧಕ್ಕೆ ತೆರಳುತ್ತಿದ್ದ ಬಿಜೆಪಿ ಮುಖಂಡರಾದ  ರೇವು ನಾಯಕ ಬೆಳಮಗಿ, ಸುನಿಲ್ ವಲ್ಯಾಪುರೆ, ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ, ಅಮರನಾಥ್ ಪಾಟೀಲ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ ಸೇರಿದಂತೆ 100ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆ ಮಾಡಿದರು.

ಬಾಕಿ ಪಾವತಿಗೆ ಆಗ್ರಹ: ಕಬ್ಬಿನ ಕಬ್ಬಿನ ಬಾಕಿ ಹಣವನ್ನು ಒಂದೇ ಕಂತಿನಲ್ಲಿ ಪಾವತಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾ­ಯಿಸಿ ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಟಿದ್ದ ರೈತರನ್ನು ಪೊಲೀ­ಸರು ಮಾರ್ಗ ಮಧ್ಯೆಯೇ ತಡೆ­ದರು. ಇದರಿಂದ ರೈತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

ಸ್ಥಳಕ್ಕೆ ಬಂದ ಸಕ್ಕರೆ ಸಚಿವ ಎಚ್.­ಎಸ್.­­ಮಹದೇವ­ಪ್ರಸಾದ್, ‘ಮೂರು ದಿನಗಳಲ್ಲಿ ಕಾರ್ಖಾನೆ ಆರಂಭಿಸು­ವಂತೆ ಹಾಗೂ ಬಾಕಿ ಹಣವನ್ನು ಪಾವತಿಸು­ವಂತೆ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗಳಿಗೆ ಸೂಚಿಸಲಾಗಿದೆ. ಇನ್ನುಳಿದ ಬೇಡಿಕೆಗಳ ಬಗ್ಗೆ ರೈತ ಪ್ರತಿನಿಧಿ­ಗಳು ಹಾಗೂ ಕಾರ್ಖಾನೆ ಮಾಲೀಕ­ರೊಂದಿಗೆ ವಾರ­ದಲ್ಲಿ ಸಭೆ ಕರೆದು ತೀರ್ಮಾನಿಸ­ಲಾಗು­ವುದು’ ಎಂದು ಭರವಸೆ ನೀಡಿದರು.

ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಮುಖಂಡ­ರಾದ ಧರ್ಮರಾಜ ಸಾಹು, ರಮೇಶ ಹೂಗಾರ, ಶರಣಕುಮಾರ ಬಿಲ್ಲಾಡ ಇತರರು ಇದ್ದರು.

Write A Comment