ಕರಾವಳಿ

ಶಾಲಾ ಕಾಲೇಜು ಪರಿಸರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಯಂತ್ರಣಕ್ಕೆ ಜಿ.ಪಂ.ಸಿಇಓ ಸಲಹೆ.

Pinterest LinkedIn Tumblr
drug_work_shop_1
ಮಂಗಳೂರು,ನ.1 : ತಂಬಾಕು ಸೇವನೆ ದುಷ್ಪರಿಣಾಮಗಳ ಬಗ್ಗೆ ತಿಳಿದುಕೊಂಡು ತಂಬಾಕು ಬಳಕೆಯನ್ನು ಸ್ವಯಂ ಆಗಿ ನಿಯಂತ್ರಣ ಮಾಡುವ ಅಗತ್ಯ ಇದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ತುಳಸಿ ಮದ್ದಿನೇನಿ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಅಧಿಕಾರಿಗಳಿಗಾಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ ತಂಬಾಕು ಬಳಕೆ ನಿಯಂತ್ರಣ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
drug_work_shop_2 drug_work_shop_3
ತಂಬಾಕು ಬೆಳೆ ಹಾಗೂ ಬಳಕೆಯನ್ನು ಏಕಾ‌ಏಕಿ ನಿಷೇಧಿಸಲು ಕಷ್ಟ. ಸುಮಾರು 70 ಲಕ್ಷ ಕುಟುಂಬ ತಂಬಾಕು ಕೃಷಿ ಮತ್ತು ಉದ್ಯಮವನ್ನು ಅವಲಂಬಿಸಿದೆ. ಏಕಾ‌ಏಕಿ ನಿಷೇಧ ಹೇರಿದರೆ ನಿರುದ್ಯೋಗಿಗಳಾಗುವ ಜನರಿಗೆ ತಕ್ಷಣ ಪರ್ಯಾಯ ವ್ಯವಸ್ಥೆ ಅಸಾಧ್ಯ. ತಂಬಾಕು ಉಪಯೋಗವನ್ನು ಕಡಿಮೆ ಮಾಡಿ ಬೇಡಿಕೆ ಕಡಿಮೆ ಮಾಡುವ ಮೂಲಕ ಇದನ್ನು ನಿಯಂತ್ರಿಸಬೇಕಿದೆ ಎಂದು ಅವರು ತಿಳಿಸಿದರು.
drug_work_shop_4 drug_work_shop_5
ಶಾಲಾ ಕಾಲೇಜು ಪರಿಸರ ಸೇರಿದಂತೆ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿರುವ ಗೂಡಂಗಡಿಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಯಥೇಚ್ಚವಾಗಿ ನಡೆಯುತ್ತಿದೆ ಇದರ ಬಗ್ಗೆ ನಿಯಂತ್ರಣ ಅಗತ್ಯ. ಪಾಲಿಕೆ ಅಧಿಕಾರಿಗಳು ಈ ಬಗ್ಗೆ ಮುತುವರ್ಜಿ ವಹಿಸಬೇಕು ಎಂದು ಅವರು ಸಲಹೆ ನೀಡಿದರು.
drug_work_shop_6
ಹಿಂದೆ ನಾವು ಶಾಲೆಗಳಿಗೆ ತೆರಳುತ್ತಿದ್ದ ಸಂದರ್ಭ ಸಿಗರೇಟು ಸೇವನೆಯ ಆನಂದ ಅನುಭವಿಸುವ ಜಾಹೀರಾತುಗಳು ಎಲ್ಲ ಪ್ರಮುಖ ಬೀದಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದವು. ಇಂತಹ ಜಾಹೀರಾತುಗಳಿಗೆ ನಿರ್ಬಂಧ ವಿಧಿಸಿರುವುದದಿಂದ ನಿಜಕ್ಕೂ ಪ್ರಯೋಜನವಾಗಿದೆ. ಸಣ್ಣ ವಯಸ್ಸಿನ ಮಕ್ಕಳಿಗೆ ಯಾವುದು ಸರಿ- ತಪ್ಪು ಎಂದು ನಿರ್ಧಾರ ಮಾಡುವ ಪ್ರಬುದ್ಧತೆ ಇರುವುದಿಲ್ಲ. ಈ ಸಂದರ್ಭ ಅವರ ಮೇಲೆ ಕೆಟ್ಟ ಪ್ರಭಾವ ಬೀಳದಂತೆ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.
ಮಂಗಳೂರು ಮಹಾ ನಗರ ಪಾಲಿಕೆಯ ಪ್ರಭಾರ ಆಯುಕ್ತ ಗೋಕುಲ್‌ದಾಸ್ ನಾಯಕ್, ತಂಬಾಕು ನಿಯಂತ್ರಣ ಘಟಕದ ರಾಜ್ಯ ಸಲಹೆಗಾರ ಡಾ.ಜಗನ್ನಾಥ, ಸಂಪನ್ಮೂಲ ವ್ಯಕ್ತಿ ಡಾ.ಚಂದ್ರ ಕಿರಣ್, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶಿವಕುಮಾರ್, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ರಾಮಕೃಷ್ಣ ರಾವ್ ಉಪಸ್ಥಿತರಿದ್ದರು.

 

Write A Comment