ಕುಂದಾಪುರ: ತಾಲೂಕಿನ ಹಲವೆಡೆಗಳಲ್ಲಿ ಗುರುವಾರ ಸಂಜೆ ಬಳಿಕ ಬಾರೀ ಸಿಡಿಲು-ಗುಡುಗು, ಮಿಂಚಿನ ಸಹಿತ ಮಳೆಯಾಗುತ್ತಿದ್ದು ದೀಪಾವಳಿ ಆಚರಣೆಗೆ ಅಡ್ಡಿಯಾಗಿದೆ.
ಸಂಜೆ 6.30 ರ ಸುಮಾರಿಗೆ ಆರಂಭಗೊಂಡ ಮಳೆ, ಬರಬರುತ್ತಾ ಜಾಸ್ಥಿಯಾಗಿದ್ದು ಗುಡುಗು-ಮಿಂಚುಗಳ ಸಮೇತ ಧಾರಕಾರ ಮಳೆ ಮುಂದುವರೆದಿತ್ತು.
ಹಬ್ಬಕ್ಕೆ ಅಡ್ಡಿ: ಇಂದು ಬಲಿಪಾಡ್ಯಮಿ ಪ್ರಯುಕ್ತ ಕರಾವಳಿ ಭಾಗದಲ್ಲಿ ಗದ್ದೆಗೆ ಹೂ ಹಾಗೂ ಇತರೇ ವಸ್ತುಗಳನ್ನು ಇಟ್ಟು ಪೂಜೆ ಸಲ್ಲಿಸಿ ಬಲೀಂದ್ರನನ್ನು ಪೂಜಿಸುವ ಸಂಪ್ರದಾಯವಿತ್ತು. ಆದರೇ ಎಡಬಿಡದೇ ಸುರಿದ ವರುಣ ಇದೆಲ್ಲದಕ್ಕೂ ವಿಘ್ನವುಂಟುಮಾಡಿದ್ದಾನೆ.
ಮನೆಯೆದುರು ಹಚ್ಚಿಟ್ಟ ಹಣತೆಗಳು ಗಾಳಿ ಹಾಗೂ ಮಳೆಗೆ ಆರಿದ್ದು, ಮನೆಗಳಲ್ಲಿ ತಂದಿಟ್ಟ ಸುಡ್ಡುಮದ್ದು-ಪಟಾಕಿಗಳು ಲಕೋಟೆಯಲ್ಲಿಯೇ ಉಳಿದಿದೆ. ಬಲೀಂದ್ರ ಪೂಜೆಗೆ ಮಾಡುವ ಸಲುವಾಗಿ ಕಾತುರದಿಂದ ಕಾಯುತ್ತಿದ್ದ ಜನ ಮಾತ್ರ ರಾತ್ರಿ ೯ ಗಂಟೆವರೆಗೂ ಮಳೆ ಕ್ಷೀಣವಾಗುವ ದಾರಿ ಕಾಯುವ ದೃಶ್ಯವೂ ಕಂಡು ಬಂದಿತ್ತು. ತುಳಸಿ ಪೂಜೆಯ ಆರಂಭದ ದಿನವೂ ಆಗಿದ್ದ ಕಾರಣ ತುಳಸಿ ಪೂಜೆ ಮಾಡುವುದಕ್ಕೂ ಕಷ್ಟವಾಗಿತ್ತು.
ಒಟ್ಟಿನಲ್ಲಿ ಹಬ್ಬದ ಮಜಾ ಮಳೆಯ ಕಾರಣಕ್ಕೆ ರಾಡಿಯಾಗಿದ್ದು ಮಾತ್ರ ಖುಷ್ ಆಗಿದ್ದ ಜನರಲ್ಲಿ ನಿರಾಸೆ ಮೂಡಿಸಿತ್ತು.
