ಕರಾವಳಿ

ಚಿನ್ನದಂಗಡಿ ಮಾಲಕನಿಗೆ ಚೂರಿ ಇರಿತ; ಪೂರ್ವ ದ್ವೇಷದ ಶಂಕೆ

Pinterest LinkedIn Tumblr

knife

ಉಡುಪಿ: ಉಡುಪಿಯ ಜ್ಯುವೆಲ್ಲರಿ ಅಂಗಡಿ ಮಾಲಕರೋರ್ವರಿಗೆ ಚೂರಿಯಿಂದ ಇರಿದು ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದಿದ್ದು ಇದೊಂದು ಪ್ರ್‍ವ ದ್ವೇಷಕ್ಕಾಗಿ ನಡೆಸಿದ ಕ್ರತ್ಯ ಎನ್ನಲಾಗಿದೆ.

ಘಟನೆ ವಿವರ: ಉಡುಪಿಯ ಜ್ಯುವೆಲ್ಲರಿ ಅಂಗಡಿ ಮಾಲಕ ಲಕ್ಷ್ಮಣ್‌ ಶೇಟ್‌ ಅವರು ರಾತ್ರಿ 7.45ರ ವೇಳೆಗೆ ತಮ್ಮ ಜ್ಯುವೆಲ್ಲರಿ ಅಂಗಡಿಯೊಳಗಿದ್ದಾಗ ಹೆಲ್ಮೆಟ್‌ ಧರಿಸಿದ ವ್ಯಕ್ತಿಯೋರ್ವ ಬಂದು ಆಭರಣವೊಂದನ್ನು ತೋರಿಸಲು ಹೇಳಿದ. ತುಳುವಿನಲ್ಲಿ ಮಾತನಾಡುತ್ತಿದ್ದ  ಈತ ಅದನ್ನು ಖರೀದಿಸದೇ ಹಾಗೆಯೇ ವಾಪಸ್ಸಾಗಿದ್ದಾನೆ. ಅನಂತರ ಸ್ವಲ್ಪ ಸಮಯ ಬಿಟ್ಟು ಮತ್ತೆ ಬಂದ ಆತ ಅಂಗಡಿಯೊಳಕ್ಕೆ ನುಗ್ಗಿ ಚೂರಿಯಿಂದ ಲಕ್ಷ್ಮಣ್‌ ಶೇಟ್‌ ಅವರನ್ನು ಕೊಲ್ಲುವ ರೀತಿಯಲ್ಲಿ ಮುನ್ನುಗ್ಗಿದ. ಆಗ ಶೇಟ್‌ ಅವರು ಕೈಯನ್ನು ಅಡ್ಡ ಹಿಡಿದರು. ಪರಿಣಾಮವಾಗಿ ಅವರ ಕೈಗೆ ಚೂರಿ ತಾಗಿ ಗಾಯವಾಗಿದೆ.

ಆರೋಪಿಯು ಕೂಡಲೇ ಹೊರಗೆ ಓಡಿ ಬೈಕ್‌ನಲ್ಲಿ ಕಾದು ಕುಳಿತಿದ್ದ ಇನ್ನೋರ್ವನ ಜತೆ ಪರಾರಿಯಾಗಿದ್ದಾನೆ. ಪೂರ್ವದ್ವೇಷದಿಂದ ಹತ್ಯೆ ಮಾಡಲು ಪ್ರಯತ್ನಿಸಿರಬಹುದೆಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

Write A Comment