
ನ್ಯೂಯಾರ್ಕ್, ಅ.10: ಹಾರ್ವರ್ಡ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಹಾಗೂ ಭಾರತದ ಅತಿದೊಡ್ಡ ಆನ್‌ಲೈನ್ ಮಾರುಕಟ್ಟೆ ತಾಣ ‘ಸ್ನಾಪ್‌ಡೀಲ್’ನ ಸಹಸಂಸ್ಥಾಪಕ ಸೇರಿದಂತೆ ನಾಲ್ವರು ಭಾರತೀಯರ ಹೆಸರನ್ನು ತನ್ನ 40ವರ್ಷಗಳಿಗಿಂತ ಕಡಿಮೆ ವಯಸ್ಸಿನ 40 ಮಂದಿ ಪ್ರಭಾವಿ ಉದ್ಯಮಿಗಳ ಪಟ್ಟಿಯಲ್ಲಿ ‘ಫಾರ್ಚೂನ್’ ನಿಯತಕಾಲಿಕ ಪ್ರಕಟಿಸಿದೆ.
ಸೇವಾಸಂಸ್ಥೆ ಯೂಬರ್‌ನ ಸಹ ಸಂಸ್ಥಾಪಕ 38ರ ಹರೆಯದ ಟ್ರಾವಿಸ್ ಕ್ಯಾಲನಿಕ್ ಹಾಗೂ ಸಮುದಾಯದಿಂದ ನಡೆಸಲ್ಪಡುವ ಅತಿಥಿ ಸತ್ಕಾರ ಸೇವಾಸಂಸ್ಥೆ ಏರ್‌ಬಿನ್ಬ್‌ನ ಸಿಇಒ 33ರ ಹರೆಯದ ಬ್ರಿಯಾನ್ ಚೆಸ್ಕಿ ಫಾರ್ಚೂನ್‌ನ 2014ರ ‘40ರ ಹರೆಯದ ಕೆಳಗಿನ 40 ಮಂದಿ ಪ್ರಭಾವಿ ಉದ್ಯಮಿಗಳ ಪಟ್ಟಿ’ಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.
ಫೇಸ್‌ಬುಕ್‌ನ ಸ್ಥಾಪಕ ಹಾಗೂ ಸಿಇಒ 30ರ ಹರೆಯದ ಮಾರ್ಕ್ ಝುಕರ್‌ಬರ್ಗ್ ಎರಡನೆಯ ಸ್ಥಾನ ಹಾಗೂ ಇಟಲಿಯ ಯುವ ಪ್ರಧಾನಿ ಮಾಟೆವೊ ರೆಂಝಿ(39) ಮೂರನೆ ಸ್ಥಾನ ಗಳಿಸಿದ್ದಾರೆ.
ಹಾರ್ವರ್ಡ್ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕ ರಾಜ್ ಚೆಟ್ಟಿ(16ನೆ ಸ್ಥಾನ),ಮೈಕ್ರೋಮ್ಯಾಕ್ಸ್‌ನ ಸಹಸಂಸ್ಥಾಪಕ ಹಾಗೂ ಸಿಇಒ ರಾಹುಲ್‌ಶರ್ಮಾ(21ನೆ ಸ್ಥಾನ), ಸ್ನಾಪ್‌ಡೀಲ್‌ನ ಸಹಸಂಸ್ಥಾಪಕ ಹಾಗೂ ಸಿಇಒ ಕುನಾಲ್ ಬಹಲ್(25ನೆ ಸ್ಥಾನ) ಹಾಗೂ ಟ್ವಿಟರ್‌ನ ಪ್ರಧಾನ ಸಮಾಲೋಚಕಿ ಹಾಗೂ ಕಂಪೆನಿಯ ಕಾರ್ಯನಿರ್ವಾಹಕ ಮಂಡಳಿಯಲ್ಲಿರುವ ಏಕೈಕ ಮಹಿಳೆ ವಿಜಯಾ ಗದ್ದೆ(28) ಫಾರ್ಚೂನ್‌ನ ಪಟ್ಟಿಯಲ್ಲಿ ಹೆಸರಿಲಾಗಿರುವ ಭಾರತೀಯರಾಗಿದ್ದಾರೆ.
ವಾಟ್ಸ್‌ಆ್ಯಪ್‌ನ ಸಹಸಂಸ್ಥಾಪಕ ಹಾಗೂ ಸಿಇಒ ಜಾನ್ ಕೌಮ್(5ನೆ ಸ್ಥಾನ),ಯಾಹೂವಿನ ಸಿಇಒ ಮಾರಿಸಾ ಮೇಯರ್(6ನೆ ಸ್ಥಾನ), ನ್ಯೂಯಾರ್ಕ್ ಸ್ಟಾಕ್ ಎಕ್ಸ್‌ಚೇಂಜ್‌ನ ಅಧ್ಯಕ್ಷ ಟಾಮ್ ಫಾರ್ಲೆ(7ನೆಸ್ಥಾನ) ಹಾಗೂ ಟ್ವಿಟರ್‌ನ ಸಹಸಂಸ್ಥಾಪಕ ಹಾಗೂ ಸಿಇಒ ಜ್ಯಾಕ್ ಡಾರ್ಸಿ(11ನೆ ಸ್ಥಾನ) ಕೂಡಾ ಫಾರ್ಚೂನ್‌ನ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ.