ಮನೋರಂಜನೆ

ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಿದ್ದು ಸರಿಯಾದ ನಿರ್ಧಾರ: ಸಾನಿಯಾ

Pinterest LinkedIn Tumblr

24sania

ಹೊಸದಿಲ್ಲಿ, ಅ.6: ‘‘ಏಷ್ಯನ್ ಗೇಮ್ಸ್‌ನಲ್ಲಿ ಎರಡು ಪದಕವನ್ನು ಜಯಿಸಿರುವುದು ಶ್ರೇಷ್ಠ ಅನುಭವ. ಗೇಮ್ಸ್‌ನಲ್ಲಿ ಭಾಗವಹಿಸಿದ ನನ್ನ ನಿರ್ಧಾರ ಸರಿಯಾಗಿತ್ತು’’ಎಂದು ಇತ್ತೀಚೆಗೆ ದಕ್ಷಿಣ ಕೊರಿಯಾದಲ್ಲಿ ಕೊನೆಗೊಂಡ ಏಷ್ಯಾಡ್‌ನಲ್ಲಿ ಚಿನ್ನ ಹಾಗೂ ಕಂಚಿನ ಪದಕವನ್ನು ಜಯಿಸಿದ್ದ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಝಾ ಅಭಿಪ್ರಾಯಪಟ್ಟಿದ್ದಾರೆ.

ಕೊರಿಯಾದ ಇಂಚೋನ್‌ನಲ್ಲಿ ಸಾನಿಯಾ ಅವರು ಸಾಕೇತ್ ಮೈನೇನಿ ಅವರೊಂದಿಗೆ ಚೈನೀಸ್ ಥೈಪೆಯ ಪೆಂಗ್ ಹಾಗೂ ಚಿಂಗ್ ಚಾನ್‌ರನ್ನು 6-4, 6-3 ಸೆಟ್‌ಗಳಿಂದ ಮಣಿಸಿ ಮಿಶ್ರ ಡಬಲ್ಸ್‌ನಲ್ಲಿ ಚಿನ್ನದ ಪದಕವನ್ನು ಜಯಿಸಿದ್ದರು. ಸಾನಿಯಾ ಸತತ ಮೂರನೆ ಬಾರಿ ಏಷ್ಯನ್ ಗೇಮ್ಸ್‌ನಲ್ಲಿ ಮಿಶ್ರ ಡಬಲ್ಸ್‌ನಲ್ಲಿ ಫೈನಲ್ ತಲುಪಿದ್ದರು. 2006ರಲ್ಲಿ ಲಿಯಾಂಡರ್ ಪೇಸ್‌ರೊಂದಿಗೆ ಚಿನ್ನದ ಪದಕವನ್ನು ಜಯಿಸಿದ್ದರು.2010ರಲ್ಲಿ ವಿಷ್ಣುವರ್ಧನ್ ಅವರೊಂದಿಗೆ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದರು. ಸಾನಿಯಾ ಈ ವರ್ಷದ ಗೇಮ್ಸ್‌ನಲ್ಲಿ ಪ್ರಾರ್ಥನಾ ಥಾಂಬರೆ ಅವರೊಂದಿಗೆ ಡಬಲ್ಸ್‌ನಲ್ಲಿ ಕಂಚಿನ ಪದಕವನ್ನು ಜಯಿಸಿದ್ದರು.

‘‘ನಾನು ಸರಿಯಾದ ಸಮಯಕ್ಕೆ ಎತ್ತರಕ್ಕೆ ತಲುಪಿದ್ದೇನೆ. ಗೇಮ್ಸ್‌ನಲ್ಲಿ ಚಿನ್ನ ಹಾಗೂ ಕಂಚಿನ ಪದಕ ಜಯಿಸಿದ್ದ ಕ್ಷಣ ಅನನ್ಯ. ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುವ ನನ್ನ ನಿರ್ಧಾರ ಸರಿಯಾಗಿತ್ತು. ಕಳೆದ 10 ವರ್ಷಗಳ ಪಯಣ ಸುದೀರ್ಘವಾಗಿತ್ತು. ಕಳೆದ ಎರಡು ತಿಂಗಳ ಸಾಧನೆ ಅತ್ಯುದ್ಭುತ’’ ಎಂದು ವರ್ಷದ ಕೊನೆಯ ಗ್ರಾನ್‌ಸ್ಲಾಮ್ ಟೂರ್ನಿ ಯುಎಸ್ ಓಪನ್‌ನಲ್ಲಿ ಬ್ರೆಝಿಲ್‌ನ ಬ್ರುನೊ ಸೊರೆಸ್ ಅವರೊಂದಿಗೆ ಡಬಲ್ಸ್ ಪ್ರಶಸ್ತಿಯನ್ನು ಜಯಿಸಿದ್ದ ಸಾನಿಯಾ ಹೇಳಿದ್ದಾರೆ.

Write A Comment