ಉಡುಪಿ: ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಎಂಡ್ ಪಾಯಿಂಟ್ ರೋಡ್ ಬಳಿ ಇರುವ ಅನಿರುಧ್ಧ ಅಪಾರ್ಟ ಮೆಂಟ್ ಕೆಳಗಡೆ ಪಾರ್ಕ್ ಮಾಡಿದ್ದ ಮೋಟಾರು ಬೈಕನ್ನು ಕಳ್ಳರು ಎಗರಿಸಿದ ಘಟನೆ ನಡೆದಿದೆ.
ಘಟನೆ ವಿವರ: ಮಂಗಳೂರು ಇಕ್ಲ ಪೋಸ್ಟ್ ಮಂಚಿಗದ್ದೆ ಮನೆ ನಿವಾಸಿ ವಸಂತ್ ಎನ್ನುವವರು ಮೋಟಾರು ಸೈಕಲ್ ನಂಬ್ರ ಕೆ ಎ 20- ಈಬಿ -1061 ಅಪಾರ್ಟ್ಮೆಂಟ್ ಕೆಳಗಡೆ ಪಾರ್ಕ್ ಮಾಡಿ ಹೋಗಿದ್ದರು. ಈ ಬೈಕ್ ಮೌಲ್ಯ 49,000/- ಆಗಿರುತ್ತದೆ ಎಂಬುದಾಗಿ ವಸಂತ ಸುವರ್ಣ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
