Uncategorized

ಬೆಸೆಂಟ್ ರಾಷ್ಟ್ರೀಯ ಪ್ರೌಢಶಾಲೆಯಲ್ಲಿ ಸಡಗರದ ಪ್ರಾರಂಭೋತ್ಸವ

Pinterest LinkedIn Tumblr

ಮಂಗಳೂರು : ಬೆಸೆಂಟ್ ರಾಷ್ಟ್ರೀಯ ಪ್ರೌಢಶಾಲೆ ( ಕನ್ನಡ ಮಾಧ್ಯಮ ) ಯ ಶಾಲಾ ಪ್ರಾರಂಭೋತ್ಸವ ವು ಬುಧವಾರ ವಿಶಿಷ್ಟ ರೀತಿಯಲ್ಲಿ ಜರಗಿತು.

ವಿಧ್ಯಾರ್ಥಿಗಳು ದೀಪ ಬೆಳಗಿಸುವ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದರು. ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ತ್ರಿವೆಣಿಯವರು ಸ್ವಾಗತಿಸಿ ಪ್ರಸ್ತಾವನೆಗೈದರು. ಬೆಸೆಂಟ್ ರಾಷ್ಟ್ರೀಯ ಪ್ರೌಢಶಾಲೆಯ ಕನ್ನಡ ಮಾಧ್ಯಮದಲ್ಲಿ ಉಚಿತ ಶಿಕ್ಷಣ ಹಾಗೂ ಉಚಿತ ವಾಹನ ಸೌಲಭ್ಯವನ್ನು ನೀಡಲಾಗುತ್ತದೆ. ಶಿಕ್ಷಣ ಇಲಾಖೆಯ ಹೊಸ ಮಾರ್ಗಸೂಚಿಯಂತೆ ಈ ಶೈಕ್ಷಣಿಕ ವರ್ಷವನ್ನು ನಿರಂತರ ಚಟುವಟಿಕೆ ಸಹಿತಾ ಗುಣತ್ಮಾಕ ಶೈಕ್ಷಣಿಕ ವರ್ಷವನ್ನಾಗಿ ಮಾಡುವುದು ಜೊತೆಗೆ ವಿದ್ಯಾರ್ಥಿಗಳ ಏಳಿಗಾಗಿ ನಿರಂತರ ಶ್ರಮಿಸುವುದಾಗಿ ಅವರು ಹೇಳಿದರು.

ಕಾರ್ಯಕ್ರಮದಲ್ಲಿ ವಿಧ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಬರೆಯುವ ಹಾಗೂ ಓದುವ ಪುಸ್ತಕಗಳನ್ನು ವಿತರಿಸಲಾಯಿತು. ಜೊತೆಗೆ ಕಳೆದ ಸಾಲಿನ ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ನೆನಪಿಸಿ ಅಭಿನಂದನೆ ಸಲ್ಲಿಸಲಾಯಿತು. ವಿಶ್ವಪರಿಸರ ದಿನ, ಬಾಲಕಾರ್ಮಿಕರ ವಿರೋಧಿ ದಿನ, ವಿಶ್ವ ಪ್ರಕೃತಿ ಸಂರಕ್ಷಣಾ ದಿನ, ಸ್ವಾತಂತ್ರ್ಯ ದಿನ, ರಾಷ್ಟ್ರೀಯ ಕ್ರೀಡಾ ದಿನ ಮುಂತಾದ ವಿಶಿಷ್ಠ ದಿನಗಳನ್ನು ಕಡ್ಡಾಯವಾಗಿ ಆಚರಣೆ ಮಾಡುವಂತೆ ಸರಕಾರ ಸೂಚನೆ ನೀಡಿರುವ ಬಗ್ಗೆ ವಿಧ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.

ಶಾಲೆಯ ಸಂಚಾಲಕ ಶ್ಯಾಮ್ ಸುಂದರ್ ಕಾಮಾತ್, ಶೈಕ್ಷಣಿಕ ಮಾರ್ಗದರ್ಶಕರಾದ ಶ್ರೀಮತಿ ಲಲಿತಾ.ಜಿ. ಮಲ್ಯ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಮಾಲತಿ, ಉಪಾಧ್ಯಕ್ಷ ಸದಾನಂದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಗೀತಾ ಶಿಕ್ಷಕಿ ರಾಜೇಶ್ವರಿ ಕುಲಾಲ್ ಪ್ರಾರ್ಥನೆಗೈದರು. ಕನ್ನಡ ಅಧ್ಯಪಕ ಪ್ರಶಾಂತ್ ಕುಮಾರ್ ರೈ ಶೈಕ್ಷಣಿಕ ವರ್ಷದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ನೋರ್ಬಟ್ ಎಫ್ ಮಿರಾಂದ ಕಾರ್ಯಕ್ರಮ ನಿರೂಪಿಸಿದರು. ಅಶೋಕ್ ಎಸ್. ಲಮಣಿ. ವಂದಿಸಿದರು.

Comments are closed.