Uncategorized

ಸಂಸ್ಥೆ ಕಟ್ಟುವುದು ಸುಲಭ, ನಡೆಸುವುದು ಕಷ್ಟ : ರಜತ ಮಹೋತ್ಸವ ಸಂಭ್ರಮದಲ್ಲಿ ಡಾ.ಎಂಎನ್,ಆರ್

Pinterest LinkedIn Tumblr

ಮಂಗಳೂರು : . ಸಂಸ್ಥೆ ಕಟ್ಟುವುದು ಸುಲಭ, ನಡೆಸುವುದು ಕಷ್ಟ, 2 ಸಾವಿರದಿಂದ 3ಸಾವಿರ ಜನ ರಿಕ್ಷಾ ಚಾಲಕರಿಗೆ ಸಾಲ ನೀಡಿ ಅವರನ್ನು ಸ್ವಂತ ಮಾಲಕರನ್ನಾಗಿ ಮಾಡಿದ ಈ ಸಂಸ್ಥೆಯನ್ನು ನಾನು ಹಾರ್ಧಿಕವಾಗಿ ಅಭಿನಂದಿಸುತ್ತೇನೆ ಎಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್,ನಿ ಇದರ ಅಧ್ಯಕ್ಷರಾದ ಡಾ| ಎಂ. ಎನ್, ರಾಜೇಂದ್ರ ಕುಮಾರ್ ಹೇಳಿದರು.

ದುಡಿಯುವ ಮನಸ್ಸು ಮತ್ತು ಸಾಧಿಸುವ ಛಲ ಇರುವ ಸಾವಿರಾರು ಕಿರು ಕಸುಬುದಾರರಿಗೆ ನೆರವಿನ ಹಸ್ತಚಾಚುವ ಮೂಲಕ ಜನಸಾಮಾನ್ಯರಿಗೂ ಬದುಕು ಕಟ್ಟುವ ಭರವಸೆ ನೀಡಿದ ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘ (ನಿ)ದ ರಜತ ಮಹೋತ್ಸವ ಸಂಭ್ರಮದಲ್ಲಿ ಪಾಲ್ಗೊಂಡ ಅವರು, ಬೆಳ್ಳಿಹಬ್ಬ ಸಂಭ್ರಮಾಚರಣೆ ಅಂಗವಾಗಿ ನಿರ್ಮಿಸಿದ ಸಂಘದ ನೂತನ ಕಟ್ಟಡದ ಉದ್ಘಾಟನೆ ನೆರೆವೇರಿಸಿ ಮಾತನಾಡಿದರು.

ಇದೇ ವೇಳೆ ಸಂಸ್ಥೆಗೆ ವೈಯಕ್ತಿಕವಾಗಿ 5ಲಕ್ಷ ರೂಪಾಯಿ ಚೆಕ್ ಅನ್ನು ಎಂ. ಎನ್, ರಾಜೇಂದ್ರ ಕುಮಾರ್ ನೀಡಿದರು.

ದೀಪ ಬೆಳಗಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿದ ಮಂಗಳೂರು ಮೇಯರ್ ಜಯಾನಂದ ಅಂಚನ್ ಅವರು ಮಾತನಾಡಿ, ಸಂಸ್ಥೆ ಮಂಗಳೂರಿನ ಇತಿಹಾಸದಲ್ಲೇ ದಾಖಲೆ ನಿರ್ಮಿಸಿದೆ. ಸಾಕಷ್ಟು ಬಡ ಕುಟುಂಬಗಳಿಗೆ, ಸಾಲ ನೀಡಿ ಉತ್ತಮ ಸೇವೆ ನೀಡಿದೆ. ಜೊತೆಗೆ ಸಂಸ್ಥೆ ಮುಂದಕ್ಕೆ ಉತ್ತಮ ಸಂಸ್ಥೆಯಾಗಿ ರಾಜ್ಯ ಮಟ್ಟದಲ್ಲಿ ಬೆಳಗಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ.ಶಾಂತಾರಾಮ ಶೆಟ್ಟಿ ಅಚರು ಸೇಫ್ ಲಾಕರ್ ಅನ್ನುಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಂಸ್ಥೆ ರಾಮ ಕ್ಷತ್ರಿಯ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿ, ಉಜ್ವಲ ಆಗಿ ಬೆಳೆದು 400 ಕೋಟಿ ಗಿಂತಲೂ ಹೆಚ್ಚು ವ್ಯವಹಾರ ನಡೆಸಿ, ರಿಕ್ಷಾ ಚಾಲಕರಿಗೆ ,ಸಣ್ಣ ಸಣ್ಣ ಉದ್ದಿಮೆದಾರರಿಗೆ ಸಹಾಯ ಹಸ್ತ ನೀಡಿ ಉತ್ತಮ ಸಂಸ್ಥೆಯಾಗಿ ಬೆಳೆದಿದೆ. ಸಂಸ್ಥೆ ಇಂದು ಸಾವಿರಾರು ಮಂದಿಗೆ ತಮ್ಮ ಸ್ವಂತ ಕಾಲ ಮೇಲೆ ನಿಲ್ಲುವಂತೆ ಮಾಡಿರುವುದು ನಿಜಕ್ಕೂ ಹೆಮ್ಮೆಯ ವಿಷಯ ಎಂದರು.

ಸಂಘದ ಅಧ್ಯಕ್ಷ ಹಾಗೂ ಮಾರ್ಗದರ್ಶಕ ಮಾಜಿ ಸಚಿವ ಶ್ರೀ ಜೆ. ಕೃಷ್ಣ ಪಾಲೆಮಾರ್ ಅವರಿಗೆ ಸಂಘದ ವತಿಯಿಂದ ಅಭಿನಂದನೆ

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಅದ್ಯಕ್ಷರಾದ ಕೃಷ್ಣ ಜೆ. ಪಾಲೆಮಾರ್ ಅವರು ಮಾತನಾಡಿ,, ಸಂಘದ ನೂತನ ಕಟ್ಟಡ ಆಗಬೇಕೆಂದು ಸರ್ವ ಸದಸ್ಯರ ಆಶಯವಾಗಿತ್ತು ಅಲ್ಲದೆ ಸ್ಮರಣೀಯ ರೀತಿಯ ಕಟ್ಟಡ ವಾಗಿರಬೇಕು ಎನ್ನುವ ಆಶಯ ಆಗಿತ್ತು.ಇದಕ್ಕೆ ನಮ್ಮ ಎಲ್ಲಾ ಸದಸ್ಯರು ಸಹಕಾರ ಮಾಡಿದ್ದಾರೆ ಅನ್ನುವುದು ಸಂತೋಷದ ವಿಷಯವಾಗಿದೆ. ಮಾತ್ರವಲ್ಲದೇ ಸದಸ್ಯರು 20% ಡಿವಿಡೆಂಡ್ ಅನ್ನು ನೀಡಿದ್ದು ವಿಶೇಷ ವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್, ಕರ್ನಾಟಕ ಬ್ಯಾಂಕ್ ನ ಆಡಳಿತ ನಿರ್ದೇಶಕ ಮಹಾಬಲೇಶ್ವರ ಎಂ. ಎಸ್‌. ಮಾಜಿ ಶಾಸಕರು ಜೆ. ಆರ್. ಲೋಬೊ ಭಾಗವಹಿಸಿದ್ದರು., ಹಿರಿಯರು ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ, ಇಂದು ಸಂಘದ ಸದಸ್ಯರು 25ವರ್ಷದಲ್ಲಿ ನೂತನ ಕಟ್ಟಡವನ್ನು ನಿರ್ಮಿಸಿದ್ದಾರೆ. ಮುಂದಕ್ಕೆ ಸಂಸ್ಥೆ ಶತಮಾನೋತ್ಸವ ಆಚರಿಸಲಿ ಎಂದು ಅಥಿತಿಗಳು ಶುಭ ಹಾರೈಸಿದರು.

ಸಮಾರಂಭದಲ್ಲಿ ಲಕ್ಷ್ಮಣಾನಂದ ಸಹಕಾರ ಸಂಘದ ಸ್ಥಾಪಕ ಪ್ರವರ್ತಕರನ್ನು, ಠೇವಣಿದಾರರನ್ನು, ಕಟ್ಟಡ ನಿರ್ಮಾಣಕರ ಪ್ರವೀಣ್ ರನ್ನು,ಸಂಘದ ನಿರ್ದೇಶಕರನ್ನು,ಮತ್ತು ಎಂ.ಎನ್.ರಾಜೇಂದ್ರ ಕುಮಾರ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಮಾರಂಭದಲ್ಲಿ ನಿರ್ದೇಶಕ ಮಂಡಳಿ ಸರ್ವಶ್ರೀಗಳಾದ ರಾಮಚಂದ್ರ ಕೆ.ಎಸ್, ಜೆ.ಕೆ. ರಾವ್, ಪಿ. ಬಾಬು,ಬ್ಯಾಂಕಿನ ಸಿ ಇ ಒ, ಶಿವ ಪ್ರಸಾದ್,ಡಾ| ಜೆ. ರವೀಂದ್ರ, ಕೆ.ಎಸ್, ರಂಜನ್, ಶ್ರೀಮತಿ ವಾರಿಜಿ ಕೆ. ಡಾ| ಹೆಚ್. ಪ್ರಭಾಕರ್, ಡಾ. ಮಂಜುಳ ಎ. ರಾವ್, ಕೆ. ರವೀಂದ್ರ, ಜೈರಾಜ್ ಕೆ. ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಶ್ರೀಮತಿ ಸಂಧ್ಯಾ ದಿನೇಶ್ ರವರು ಪ್ರಾಥನೆಗೈದು, ದಿನೇಶ್ ರಾವ್,ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಮನೋಹರ್ ಪ್ರಸಾದ್ ನಿರೂಪಿಸಿದರು. ಜೆ. ಕೆ.ರಾವ್ ಧನ್ಯವಾದ ಅರ್ಪಿಸಿದರು.

ಸಾವಿರಾರು ಸಣ್ಣಪುಟ್ಟ ವೃತ್ತಿಬಾಂಧವರಿಗೆ ಸಾಲ ಸೌಲಭ್ಯ :

ಸಮಾಜದ ಉನ್ನತಿ ಮತ್ತು ಸಾಮಾನ್ಯ ಜನರಿಗೆ ಆರ್ಥಿಕ ನೆರವು ನೀಡುವ ಮಹತ್ತರ ಉದ್ದೇಶದಿಂದ ಮಾಜಿ ಸಚಿವ ಶ್ರೀ ಜೆ. ಕೃಷ್ಣ ಪಾಲೆಮಾರ್ ಅವರ ಮಾರ್ಗದರ್ಶನದಲ್ಲಿ 1997ರ ಡಿಸೆಂಬರ್ 7ರಂದು
ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘ (ನಿ)ವನ್ನು ಸ್ಥಾಪಿಸಲಾಯಿತು.

ವೃತ್ತಿ ಬದುಕಿನ ಆಸರೆ ಅರಸುವ ಶ್ರೀಸಾಮಾನ್ಯರಿಗೆ ಸಂಘವು ದಾರಿದೀಪವಾಗಿದೆ. ೨೫೦೦ಕ್ಕೂ ಮಿಕ್ಕಿ ರಿಕ್ಷಾ ಚಾಲಕರಿಗೆ ಸಾಲ ಸೌಲಭ್ಯವನ್ನು ಒದಗಿಸಿ ಮಾಲಕರನ್ನಾಗಿ ರೂಪಿಸಿದ ಸಂಘವು ಬೀದಿ ವ್ಯಾಪಾರಿಗಳು, ತರಕಾರಿ ಮಾರಾಟಗಾರರು ಮುಂತಾದ ಸಾವಿರಾರು ಸಣ್ಣಪುಟ್ಟ ವೃತ್ತಿಬಾಂಧವರಿಗೆ ಮೂಲ ಬಂಡವಾಳಕ್ಕಾಗಿ ಸಾಲ ನೀಡುವ ಮೂಲಕ ಸ್ವಾವಲಂಬಿ ಬದುಕಿಗೆ ಪ್ರೇರಣೆ ನೀಡಿದೆ. ಸಾಲ ಸಹಕಾರದೊಂದಿಗೆ ಗ್ರಾಹಕರಿಗೆ ಸೂಕ್ತ ವೃತ್ತಿ ಮಾರ್ಗದರ್ಶನ ಕೂಡಾ ಕಾಲಕಾಲಕ್ಕೆ ನೀಡಲಾಗುತ್ತಿದೆ.

ಸಂಘವು ಉಚಿತ ಕಣ್ಣು ತಪಾಸಣೆ ಶಿಬಿರ, ರಕ್ತದಾನ ಶಿಬಿರ, ಸದಸ್ಯರ ಮಕ್ಕಳಿಗೆ ಶಿಕ್ಷಣಕ್ಕೆ ಸಹಾಯ ಮತ್ತು ಹಲವು ಸಂಘ ಸಂಸ್ಥೆಗಳಿಗೆ ಸಹಾಯಧನ ನೀಡುವುದರ ಮೂಲಕ ಸಮಾಜ ಸೇವೆಗೂ ಬದ್ಧವಾಗಿದೆ.

Comments are closed.