Uncategorized

“ವಿದ್ಯಾರ್ಹತೆ ಮತ್ತು ನೋಂದಣಿ ಇಲ್ಲದ ವಂಶಪಾರಂಪರಿಕ ವೈದ್ಯರಿಗೆ ಉಚ್ಛನ್ಯಾಯಾಲಯ ಅನುಮತಿ”

Pinterest LinkedIn Tumblr

ಮಂಗಳೂರು: “ಕರ್ನಾಟಕ ಖಾಸಗಿ ವೈದ್ಯಕೀಯ ಅಧಿನಿಯಮ 2007ರಂತೆ ನಿಗದಿತ ವಿದ್ಯಾರ್ಹತೆ ಮತ್ತು ನೋಂದಣಿ ಇಲ್ಲದೆ ವೈದ್ಯಕೀಯ ವೃತ್ತಿ ನಡೆಸದಂತೆ ಸರ್ಕಾರ ಪ್ರಕಟಿಸಿದ ಅಧಿಸೂಚನೆಯ ವಿರುದ್ಧ ಕಳೆದ 12 ವರ್ಷಗಳಿಂದ ನಿರಂತರ ಹೋರಾಟಕ್ಕೆಸ್ಪಂದಿಸಿ ಕರ್ನಾಟಕ ರಾಜ್ಯ ಉಚ್ಛ ನ್ಯಾಯಲಯ ಆದೇಶ ಪ್ರಕಟಿಸುವ ಮೂಲಕ ವೈದ್ಯ ವೃತ್ತಿ ನಿರ್ವಹಿಸಲು ನೀಡಿದೆ. ಇದಕ್ಕಾಗಿ ನ್ಯಾಯಲಯವನ್ನು ಸಂಘಟನೆ ಅಭಿನಂದಿಸುತ್ತದೆ” ಎಂದು ಅನುಭವಿ ಮತ್ತು ವಂಶಪಾರಂಪರಿಕ ವೈದ್ಯರ ಸಂಘದ ಪ್ರಧಾನ ಸಂಯೋಜಕ ಬಿ.ಎಸ್. ಚಂದ್ರು ಹೇಳಿದರು.
.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, “ದೇಶದ ಯಾವುದೇ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಲ್ಲೂ ಜಾರಿಯಾಗದ ಕಾಯ್ದೆ ಕರ್ನಾಟಕ ರಾಜ್ಯದಲ್ಲಿ ಮಾತ್ರ ಜಾರಿಯಾಗಿರುವುದು ಸಾವಿರಾರು ಅನುಭವಿ ಪಾರಂಪರಿಕ ವೈದ್ಯರ ಜೀವನಾಧಾರಕ್ಕೆ ಸಮಸ್ಯೆಯಾದ ಹಿನ್ನಲೆಯಲ್ಲಿ ಸಂವಿಧಾನದ ಆರ್ಟಿಕಲ್ 14, 19 ಮತ್ತು 21ರ ಅವಕಾಶಗಳನ್ನು ಮತ್ತು ಲೋಕಸಭೆ ದೇಶವ್ಯಾಪ್ತಿ ಇರುವ ಲಕ್ಷಾಂತರ ನಿಗದಿತವಿದ್ಯಾರ್ಹತೆಯಿಲ್ಲದ ವೈದ್ಯರನ್ನು ಗುರುತಿಸಿ ಅನುಮೋದಿಸಿ, ನೊಂದಣಿ ನೀಡುವಂತೆ ಸುಮಾರು 6 ಬಾರಿ ಚರ್ಚಿಸಿ ಆದೇಶ ಹೊರಡಿಸಿದ್ದರೂ ಈ ವರೆಗೆ ಕ್ರಮ ಕೈಗೊಂಡಿರಲಿಲ್ಲ. ಇದರ ವಿರುದ್ಧ ವೈದ್ಯರ ರಿಟ್ ಅರ್ಜಿ ಸಂಖ್ಯೆ 51465/2019 ದಾಖಲಿಸಿದ್ದು ದಿನಾಂಕ 17/02/2023ರಂದು ರಾಜ್ಯ ಉಚ್ಛ ನ್ಯಾಯಾಲಯ ಆದೇಶ ಹೊರಡಿಸಿದೆ” ಎಂದರು.

ವೈದ್ಯರ ಬೇಡಿಕೆಗೆ ಸ್ಪಂದಿಸಿ ಡಾ|| ಸಂದರ್ಶನ ಸಮಿತಿ / ಸಂಪುಟ ಉಪಸಮಿತಿ ರಚನೆ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗದ ವರದಿಗಳನ್ನು ಅದಾರಿಸಿ ಸರ್ಕಾರ ಪ್ರಕಟಿಸಿರುವ ನ್ಯಾಯಲಯದ ಆದೇಶದಿಂದ ರಾಜ್ಯವ್ಯಾಪಿ ಅನುಭವಿ ಪಾರಂಪರಿಕ ವೈದ್ಯರು ನೆಮ್ಮದಿಯ ಜೀವನ ಸಾಗಿಸಲು ಅವಕಾಶ ದೊರೆತಂತಾಗಿದೆ.

ನ್ಯಾಯಲಯವು ಸರ್ಕಾರದ ಆದೇಶಗಳನ್ನು ಜಾರಿಗೊಳಿಸುವಾಗ ಅರ್ಜಿದಾರರ ಸಮಸ್ಯೆಗಳನ್ನು ಸ್ಪಂದಿಸಿ ಜಾರಿಗೊಳಿಸಬೇಕು ಕರ್ನಾಟಕ ಖಾಸಗಿ ವೈದ್ಯಕೀಯ ನಿಯಮ ಸೆಕ್ಷನ್ 3 ಸದಸ್ಯರ ನ್ನೊಳಗೊಂಡ ಜಿಲ್ಲಾ ಪ್ರಾಧಿಕಾರ 8 ವಾರಗಳಲ್ಲಿ ಮತ್ತು ಸರ್ಕಾರ ಅರ್ಜಿದಾರರ ಮನವಿಗೆ ಸ್ಪಂದಿಸಿ 4 ವಾರದೊಳಗೆ ತೀರ್ಮಾನ ಕೈಗೊಳ್ಳುವಂತೆ ಆದೇಶಿಸಿರುವುದು ವೈದ್ಯರಿಗೆ ಸಂದ ಶುಭ ಸಂದೇಶವಾಗಿದೆ.

ಅನುಭವಿ ಮತ್ತು ವಂಶಪಾರಂಪರಿಕ ವೈದ್ಯರ ಸಂಘದಲ್ಲಿ ವಿಶೇಷ ಅನುಭವ ಮತ್ತು ಜ್ಞಾನವನ್ನು ಹೊಂದಿರುವ ವೈದ್ಯರುಗಳಿದು ಎಲ್ಲೂ ಪರಿಹಾರ ಕಾಣದ ಬ್ಲ್ಯಾಕ್ ಫಂಗಸ್, ಹೆಚ್ ಐ ವಿ, ಕ್ಯಾನ್ಸರ್ ಇತರೆ ಅನೇಕ ಮಾರಕ ಕಾಯಿಲೆಗಳಿಗೆ ಔಷದ ನೀಡಿ ಗುಣಪಡಿಸಿದ ಅನೇಕ ಉದಾಹರಣೆ ಮತ್ತು ಸಾಕ್ಷಿಗಳಿವೆ” ಎಂದರು.

ಸಂಘಟನಾ ಕಾರ್ಯದರ್ಶಿ ಲೊಕೇಶ್ ಟೆಕಲ್ ಮಾತನಾಡಿ, “ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳಲ್ಲಿ ವಾಸಿಯಾಗದ ಖಾಯಿಲೆಗಳನ್ನು ವಂಶಪಾರಂಪರಿಕ ವೈದ್ಯರು ಗುಣಪಡಿಸಿದ ನಿದರ್ಶನಗಳಿವೆ. ಸಚಿವ ಲಕ್ಷ್ಮಣ ಸವದಿಯವರ ಚರ್ಮರೋಗಕ್ಕೂ ಔಷಧಿ ನೀಡಿದ್ದು ಅದರಿಂದ ಅವರು ಗುಣಮುಖರಾಗಿದ್ದಾರೆ” ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಅಯ್ಯಣ್ಣ ಗೌಡ, ಸಂಘಟನಾ ಕಾರ್ಯದರ್ಶಿ ಲೊಕೇಶ್ ಟೆಕಲ್, ಜಂಟಿ ಕಾರ್ಯದರ್ಶಿ ಕುಮಾರ್ ಕಾಟ್‌ ವಾ ಉಪಸ್ಥಿತರಿದ್ದರು

Comments are closed.