Uncategorized

ಮಂಗಳೂರಿನಲ್ಲಿ ಡಿಸೆಂಬರ್ 19ರಿಂದ 22ರವರೆಗೆ ಲ್ಯಾಂಡ್ ಟ್ರೇಡ್ಸ್ ಪ್ರಾಪರ್ಟಿ ಶೋ….

Pinterest LinkedIn Tumblr

ಮಂಗಳೂರು : ಸ್ಮಾರ್ಟ್‌ಸಿಟಿ’ ಎಂಬ ಪ್ರತಿಷ್ಠೆಯ ಬಿರುದಾಂಕಿತ ಮಂಗಳೂರು ಈಗ ಜಾಗತಿಕ ಮನ್ನಣೆ ಮತ್ತು ವಿಶ್ವಮಟ್ಟದ ಜೀವನ ಶೈಲಿಯನ್ನು ಅಂತರ್ಗತ ಮಾಡಿಕೊಂಡಿದೆ. ಈ ಹೊಸತನದ ಬದಲಾವಣೆಗೆ ಸ್ಪಂದಿಸುತ್ತಾ, ಮಂಗಳೂರಿನ ಪ್ರಮುಖ ಪ್ರಾಪರ್ಟಿ ಡೆವೆಲಪರ್ ಲ್ಯಾಂಡ್ ಟ್ರೇಡ್ಸ್ ಸಂಸ್ಥೆಯು, ಹೊಸ ತಲೆಮಾರಿನ ಆಶಯಕ್ಕೆ ಅನುಗುಣವಾದ ನೂತನ ಪರಿಕಲ್ಪನೆಯ ಜೀವನ ಶೈಲಿಯ(Life style)ಅಪಾರ್ಟ್‌ಮೆಂಟ್‌ಗಳ ಸರಣಿಯನ್ನು ಅನುಷ್ಠಾನಗೊಳಿಸಿದೆ.

ಈ ಎಲ್ಲಾ ವಿನೂತನ ಯೋಜನೆಗಳ ವಿವರಗಳನ್ನು ಗ್ರಾಹಕರಿಗೆ ಒಂದೇ ಸೂರಿನಡಿ ಒದಗಿಸಲು ಡಿಸೆಂಬರ್ 19 ರಿಂದ 22 ರವರೆಗೆ (ನಾಲ್ಕು ದಿನ) ಲ್ಯಾಂಡ್ ಟ್ರೇಡ್ಸ್ ಪ್ರಾಪರ್ಟಿ ಶೋ ಏರ್ಪಡಿಸಲಾಗಿದೆ ಎಂದು ಲ್ಯಾಂಡ್ ಟ್ರೇಡ್ಸ್‌ನ ಮಾಲಕ ಕೆ.ಶ್ರೀನಾಥ್ ಹೆಬ್ಬಾರ್ ತಿಳಿಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಮಂಗಳೂರಿನ ಬಲ್ಮಠದ ಕಲೆಕ್ಟರ್‍ಸ್ ಗೇಟ್ ಬಳಿಯ ಲ್ಯಾಂಡ್ ಟ್ರೇಡ್ಸ್‌ನ ವಾಣಿಜ್ಯ ಹೆಗ್ಗುರುತು – ಮೈಲ್‌ಸ್ಟೋನ್-25 ವಾಣಿಜ್ಯ ಸಂಕೀರ್ಣದಲ್ಲಿ ಜರಗುವ ಈ ಮೇಳವು ಲ್ಯಾಂಡ್‌ಟ್ರೇಡ್ಸ್ ಬಿಲ್ಡರ್‍ಸ್ ಆಂಡ್ ಡೆವೆಲಪರ್‍ಸ್‌ನ ಯಶಸ್ವೀ 30 ವರ್ಷಗಳ ಆಚರಣೆಯು ಆಗಲಿದೆ ಎಂದರು.

ಅಪಾರ್ಟ್‌ಮೆಂಟ್ಸ್ ಖರೀದಿಸ ಬಯಸುವ ಗ್ರಾಹಕರು ಬೆಳಿಗ್ಗೆ 10 ರಿಂದ ಸಂಜೆ7ರ ತನಕ ಯಾವುದೇ ಸಮಯದಲ್ಲಿ ಈ ಮೇಳಕ್ಕೆ ಭೇಟಿ ನೀಡಬಹುದು ಮತ್ತು ನೂತನ ಯೋಜನೆಗಳಲ್ಲಿನ ಖರೀದಿಗೆ ಆಕರ್ಷಕ ಕೊಡುಗೆಗಳನ್ನು ಪಡೆಯಬಹುದು. ವೈಯಕ್ತಿಕ ಅಪಾರ್ಟ್‌ಮೆಂಟ್ ಖರೀದಿಗೆ ಸ್ಥಳದಲ್ಲೇ ಕೊಡುಗೆ. ಪ್ರತೀ ಬುಕಿಂಗ್‌ನಲ್ಲಿ ಚಿನ್ನದ ನಾಣ್ಯ, ಶೂನ್ಯ ಜೆ.ಎಸ್.ಟಿ.ಗಳನ್ನು ಆಯ್ದ ಯೋಜನೆಗಳಲ್ಲಿ ಮತ್ತು ಗೃಹ ಸಾಲದಲ್ಲಿ ಶೂನ್ಯ ನಿರ್ವಹಣಾ ಶುಲ್ಕದ ಸೌಲಭ್ಯಗಳನ್ನು ಗ್ರಾಹಕರು ಪಡೆಯಬಹುದು.

ಲ್ಯಾಂಡ್ ಟ್ರೇಡ್ಸ್ ಮೇಳದಲ್ಲಿರುವ ಹೋಂ ಲೋನ್ ಕೌಂಟರ್‌ಗಳ ಮೂಲಕ ಅರ್ಹ ಖರೀದಿದಾರರಿಗೆ ಮುಂಗಡ ಮತ್ತು ಸ್ಥಳದಲ್ಲೇ ಮಂಜೂರಾತಿಯ ಅವಕಾಶವಿದೆ. ಐದು ಪ್ರಮುಖ ಬ್ಯಾಂಕ್‌ಗಳಾದ ಕರ್ನಾಟಕ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್ ಮತ್ತು ಐ.ಸಿ.ಐ.ಸಿ.ಐ ಬ್ಯಾಂಕ್ ಈ ಮೇಳದಲ್ಲಿ ಭಾಗವಹಿಸಲಿವೆ.

“ಬಲಿಷ್ಠ ಮತ್ತು ಪುನಶ್ಚೇತನಗೊಂಡ ಆರ್ಥಿಕತೆ, ಆದಾಯ ಮಟ್ಟದ ಹೆಚ್ಚಳ, ಗೃಹಸಾಲಕ್ಕೆ ಕಡಿಮೆ ಬಡ್ಡಿ ದರಗಳು ಮುಂದಿನ ವರ್ಷಗಳಲ್ಲಿ ರಿಯಲ್ ಎಸ್ಟೇಟ್ ಮಾರುಕಟ್ಟೆಗೆ ವರದಾಯಕವಾಗಲಿದೆ. ವಿಶೇಷವಾಗಿ ಯುವಜನತೆಯ ಆಶೋಕ್ತರಗಳ ಆಧುನಿಕ ಲಕ್ಸುರಿ ಸೌಲಭ್ಯಗಳ ಪರಿಕಲ್ಪನೆಯ, ಅಪಾರ್ಟ್‌ಮೆಂಟ್ ಯೋಜನೆಗಳ ಸಮಗ್ರ ಮಾಹಿತಿಗಳನ್ನು ಲ್ಯಾಂಡ್ ಟ್ರೇಡ್ಸ್ ಪ್ರಾಪರ್ಟಿ ಶೋ ಹೊಂದಿರುತ್ತದೆ. ಅತೀ ಸವಾಲುಗಳಿಂದ ಕೂಡಿರುವ ಈ ವ್ಯವಹಾರೋದ್ಯಮ ಕ್ಷೇತ್ರದಲ್ಲಿ 30 ಸಾರ್ಥಕ ವರ್ಷಗಳನ್ನು ನಮ್ಮ ಸಂಸ್ಥೆಯು ಹೊಂದಿರುವುದಕ್ಕೆ, ಅಪಾರ ಬೆಂಬಲ ನೀಡುತ್ತಿರುವ ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸಲು ಕೂಡಾ ಈ ಮೇಳದ ಆಯೋಜನೆ ಆಗಿದೆ” ಎಂದು ಕೆ.ಶ್ರೀನಾಥ್ ಹೆಬ್ಬಾರ್ ವಿವರ ನೀಡಿದರು.

ಲ್ಯಾಂಡ್ ಟ್ರೇಡ್ಸ್ ಪ್ರಸಕ್ತ ಯೋಜನೆಗಳು :

ಶಿವಭಾಗ್: ಕದ್ರಿ-ಮಲ್ಲಿಕಟ್ಟೆ ಬಳಿಯ ಎತ್ತರದ ಪ್ರದೇಶ ಶಿವಭಾಗ್ ಯೋಜನೆಯು 34 ಅಂತಸ್ತುಗಳ 142
ಅರಮನೆ ಸದೃಶ ಲಕ್ಷುರಿ ಹೋಮ್‌ಗಳ ಗಗನಚುಂಬಿ ರಮಣೀಯ ನಿಸರ್ಗ, ಅತ್ಯಾಧುನಿಕ ಸೌಲಭ್ಯ.
ಅಲ್ಲೂರ: ಬೆಂದೂರ್‌ವೆಲ್‌ನಲ್ಲಿ 32 ಅಂತಸ್ತುಗಳ ಗಗನಚುಂಬಿ ಯೋಜನೆ, 2 ಮತ್ತು 3 ಬಿ.ಹೆಚ್.
ಡುಪ್ಲೆಕ್ಸ್‌ಗಳ ಸಹಿತ 114 ಸೂಪರ್ ಡಿಲಕ್ಸ್ ಸಾಲಿಟೇರ್ (ವಾಸಕ್ಕೆ ಸಿದ್ಧ): ಹ್ಯಾಟ್‌ಹಿಲ್‌ನಲ್ಲಿ 32 ಅಂತಸ್ತುಗಳ 143 ಲಕ್ಷುರಿ ಅಪಾರ್ಟ್‌ಮೆಂಟ್ ಮತ್ತು ಡುಪ್ಲೆಕ್ಸ್‌ಗಳು ಅರಬೀ ಸಮುದ್ರದ ವಿಹಂಗಮ ನೋಟ. (ಪೂರ್ಣಗೊಂಡ ಈ ಯೋಜನೆಯಲ್ಲಿ ಕೆಲವೇ 2 ಬಿ.ಹೆಚ್.ಕೆ. ಲಭ್ಯವಿದೆ).
ನಕ್ಷತ್ರ: ಮಣ್ಣಗುಡ್ಡ, ಗಾಂಧೀನಗರದ ಪ್ರಶಾಂತ ಪರಿಸರದಲ್ಲಿ ಲಕ್ಷುರಿ ಅಪಾರ್ಟ್‌ಮೆಂಟ್‌ಗಳ ಯೋಜನೆ 6 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಕೆಲವೇ 2 ಬಿ.ಹೆಚ್.ಕೆ. ಮತ್ತು 4 ಬಿ.ಹೆಚ್.ಕೆ. ಲಭ್ಯ.
ಅದಿರ : ಉರ್ವ ಮಾರಿಗುಡಿ ಸಮೀಪ ರೆಸಿಡೆನ್ಸಿಯಲ್ ಮತ್ತು ಕಮರ್ಷಿಯಲ್ ಸಂಕೀರ್ಣ, ಆಧುನಿಕ
ಸೌಲಭ್ಯಗಳ 3 ಬಿ.ಹೆಚ್.ಕೆ. ಕಾಮತ್ ಗಾರ್ಡನ್: ಉಳ್ಳಾಲದ ಸುಂದರವಾದ ಹೊರ ವಲಯದಲ್ಲಿ 1.5 ಎಕರೆಯಲ್ಲಿ ಪೂರ್ಣ ಅಭಿವೃದ್ಧಿಗೊಂಡ 16 ಸ್ವತಂತ್ರ ಮನೆಗಳ ವಸತಿ ನಿವೇಶನಗಳು. ಹ್ಯಾಬಿಟ್ಯಾಟ್ ವನ್54 (ವಾಸಕ್ಕೆ ಸಿದ್ಧವಿದೆ): ದೇರೆಬೈಲ್‌ನಲ್ಲಿ ಸುಲಭ ದರದಲ್ಲಿ 154 ಅಪಾರ್ಟ್‌ಮೆಂಟ್‌ಗಳ
ಯೋಜನೆ. ಈ ಪೂರ್ಣಗೊಂಡ ಯೋಜನೆಯಲ್ಲಿ ಬೆರಳೆಣಿಕೆಯಷ್ಟು ಅಪಾರ್ಟ್‌ಮೆಂಟ್‌ಗಳು ಲಭ್ಯ.
ಎಮರಾಲ್ಡ್ ಬೇ (ಪೂರ್ಣ ಅಭಿವೃದ್ಧಿಗೊಂಡಿದೆ): ಸುರತ್ಕಲ್‌ನಲ್ಲಿ ಅರಬೀ ಸಮುದ್ರ ಕಿನಾರೆಯಲ್ಲಿ
ಮನರಂಜನಾ ಸೌಲಭ್ಯಗಳ ಸಹಿತ, ಸ್ವತಂತ್ರ ವಿಲ್ಲಾಗಳ ನಿರ್ಮಾಣಕ್ಕೆ ವಸತಿ ಬಡಾವಣೆ.

ವಿನೂತನ ಯೋಜನೆ :

ಸ್ಮಾರ್ಟ್ ಸಿಟಿ ಸ್ಥಾನಮಾನದ ಜತೆಜತೆಯಲ್ಲಿ ವಿಶ್ವದರ್ಜೆಗೆ ಸಮನಾದ ಜೀವನ ಶೈಲಿಗೆ ಮಂಗಳೂರಿನ
ಸಂಕೀರ್ಣದ ಸುರಕ್ಷಾ ಜನತೆ ಆದ್ಯತೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಅಪಾರ್ಟ್‌ಮೆಂಟ್
ವಲಯದೊಳಗೆ 5-ಸ್ಟಾರ್ ಪರಿಸರ ನಿರ್ಮಾಣದ, ನೂತನ ಜೀವನ ಶೈಲಿಯ ಅಪಾರ್ಟ್‌ಮೆಂಟ್‌ಗಳ
ಯೋಜನೆಗೆ ಲ್ಯಾಂಡ್ ಟ್ರೇಡ್ ಮುಂದಾಗಿದೆ. ತನ್ಮೂಲಕ ಸಾಲಿಟೇರ್, ಅಲ್ಲೂರ, ಈಗ ಶಿವಭಾಗ್‌ನಂತಹ
ಅತ್ಯಾಧುನಿಕ ಗಗನಚುಂಬಿ ಸೌಧಗಳ ನಿರ್ಮಾಣಕ್ಕೆ ಲ್ಯಾಂಡ್ ಟ್ರೇಡ್ ಸ್ಫೂರ್ತಿ ಪಡೆಯಿತು. ರೆಸಾರ್ಟ್
ಸ್ವರೂಪದಂತ ಕ್ಲಬ್‌ಹೌಸ್, ಒಳಾಂಗಣ-ಹೊರಾಂಗಣ ಮನರಂಜನಾ ಮತ್ತು ಆರೋಗ್ಯವರ್ಧಕ ಸೌಲಭ್ಯಕ್ಕೆ ಮುಂದಾಯಿತು. ಈಜುಕೊಳ ಸುಸಜ್ಜಿತ ಜಿಮ್, ಸಾನಾ ಮತ್ತು ಜಕೂ, ಯೋಗ ಮತ್ತು ಧ್ಯಾನ
ಕೊಠಡಿ, ಕ್ರೀಡಾ ಸೌಲಭ್ಯ, ಮಕ್ಕಳ ಆಟದ ಅಂಗಣ ಇತ್ಯಾದಿ ಒದಗಿಸುತ್ತಾ ಬಂದಿದೆ.

ವಿಶ್ವಾಸದ ಪರಂಪರೆ : 37 ಯೋಜನೆ : ಸಂಸ್ಥೆಗೆ ಕ್ರಿಸಿಲ್ ಮಾನ್ಯತೆ :

ಲ್ಯಾಂಡ್ ಟ್ರೇಡ್ಸ್ – ಬಿಲ್ಡರ್ ಆ್ಯಂಡ್ ಡೆವೆಲಪರ್‌ ಸಂಸ್ಥೆಯನ್ನು ಕೆ.ಶ್ರೀನಾಥ್ ಹೆಬ್ಬಾರ್ ಅವರು
ಮಂಗಳೂರಿನಲ್ಲಿ 28,10,1992 ರಂದು ಸ್ಥಾಪಿಸಿದರು. ಮೊದಲ ತಲೆಮಾರಿನ ತರುಣ ಉದ್ಯಮಿ ಶ್ರೀನಾಥ್
ಅವರಿಗೆ ಇದು ಬಹುಕನಸುಗಳ ಸ್ಟಾರ್ಟ್ ಅಪ್ ಉದ್ಯಮ ಸಾಹಸವಾಗಿತ್ತು, ಮಂಗಳೂರಿನಲ್ಲಿ ವಸತಿ
ಬಡಾವಣೆಗಳ ಪರಿಕಲ್ಪನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಾ ಲ್ಯಾಂಡ್ ಟ್ರೇಡ್ಸ್ ಸಂಸ್ಥೆಯು2008 ರಲ್ಲಿ ಅಪಾರ್ಟ್‌ಮೆಂಟ್ ನಿರ್ಮಾಣಕ್ಕೆ ಮುಂದಾಯಿತು.

ಪ್ರಥಮ ಯೋಜನೆ ಬಲರದ ‘ಎಸ್ಟೋರಿಯಾ’ ಮಹತ್ವದ ಯಶಸ್ಸು ಗಳಿಸಿತು. ಬಳಿಕ ಕದ್ರಿ ಕಂಬಳದಲ್ಲಿ ಮೌರಿಷ್ಕಾ ಪ್ಯಾಲೇಸ್, ಜೈಲ್‌ರೋಡಿನಲ್ಲಿ ‘ಸಾಯಿಗ್ಯಾಂಡ್ಯೂರ್’, ಬೆಂದೂರ್‌ವೆಲ್‌ನಲ್ಲಿ ‘ಅಟ್ಲಾಂಟಿಸ್’ ಮತ್ತು ‘ರೂಪಾಲಿ’, ನಗರದ ಅತ್ಯಂತ ಎತ್ತರದ ಕಟ್ಟಡಗಳಲ್ಲೊಂದಾದ ಹ್ಯಾಟ್‌ಹಿಲ್‌ನಲ್ಲಿ ಪ್ರತಿಷ್ಠೆಯ 32 ‘ಸಾಲಟೇರ್’ನಂತಹ ಯೋಜನೆಗಳು ಲ್ಯಾಂಡ್ ಟ್ರೇಡ್ಸ್‌ಗೆ ಅಪಾರವಾದ ವಿಶ್ವಾಸಾರ್ಹತೆ ಮತ್ತು ಗ್ರಾಹಕರ ನಂಬಿಕೆಯನ್ನು ಒದಗಿಸಿಕೊಟ್ಟಿದೆ ಎಂದು ಲ್ಯಾಂಡ್ ಟ್ರೇಡ್ಸ್ ಸಿಇಒ ರಮೀತ್ ಕುಮಾರ್ ಸಿದ್ದಕಟ್ಟೆ ವಿವರಿಸಿದರು.

ಪತ್ರಕರ್ತ ಮನೋಹರ್ ಪ್ರಸಾದ್ ಪೂರಕ ಮಾಹಿತಿ ನೀಡಿದರು. ಫೋರ್ ವಿಂಡ್ಸ್ ಕಮ್ಯುನಿಕೇಶನ್ಸ್ ನ ಇ. ಫೆರ್ನಾಂಡಿಸಿ ಉಪಸ್ಥಿತರಿದ್ದರು.

Comments are closed.