Uncategorized

ದೀರ್ಘ ಕಾಲದ ನಂತರ ಕೊಠಡಿಯಿಂದ ಹೊರಬಂದ ಮಲೈಕಾ ಅರೋರಾ

Pinterest LinkedIn Tumblr

ಬೆಂಗಳೂರು: ದೀರ್ಘ ಕಾಲದ ನಂತರ ಕೊಠಡಿಯಿಂದ ಹೊರಗೆ ಬಂದಿರುವ ನಟಿ ಮಲೈಕಾ ಅರೋರಾ ಈಗ ತಮ್ಮ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ.

“ಕೊನೆಗೂ ನಾನು ಬಹಳ ದಿನಗಳ ಬಳಿಕ ನನ್ನ ರೂಮ್​ನಿಂದ ಹೊರಗೆ ಬಂದಿದ್ದೇನೆ. ಈಗ ನನಗೆ ಎಲ್ಲೋ ಔಟಿಂಗ್ ಹೋದಂತೆ ಅನಿಸುತ್ತಿದೆ” ಎಂದು ನಟಿ ಮಲೈಕಾ ಕಳೆದ ಕೆಲವು ದಿನಗಳ ಕುರಿತು ಅನಿಸಿಕೆ ವ್ಯಕ್ತಪಡಿಸಿದ್ದಾರೆ.

“ಅಂತೂ ಮಿನಿಮಮ್​ ಪೇನ್​ ಮತ್ತು ಡಿಸ್​ಕಂಫರ್ಟ್​ನಲ್ಲೇ ನಾನು ಈ ಕರೊನಾ ಸೋಂಕಿನಿಂದ ಹೊರಬಂದೆ. ಸುಲಭದಲ್ಲಿ ಸೋಂಕುಮುಕ್ತಳಾಗಿ ನಿರಾಳ ಆಗುವಂತೆ ಮಾಡಿದ ನನ್ನ ಎಲ್ಲ ವೈದ್ಯರಿಗೆ, ವೈದ್ಯಕೀಯ ಸಿಬ್ಬಂದಿಗೆ ಧನ್ಯವಾದಗಳು” ಎಂದು ಅವರು ಥ್ಯಾಂಕ್ಸ್ ಹೇಳಿದ್ದಾರೆ. ಜೊತೆಗೆ “ಸೋಂಕಿನಿಂದ ಹೊರಬರುವಲ್ಲಿ ಸ್ನೇಹಿತರು, ನೆರೆಹೊರೆಯವರು ಹಾಗೂ ಅಭಿಮಾನಿಗಳ ಸಹಕಾರ-ಹಾರೈಕೆಗಳೂ ನೆರವಾಗಿವೆ” ಎಂದು ಮಲೈಕಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ.

Comments are closed.