ಮೈತ್ರಿ ಸರ್ಕಾರದ ವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ಹಾಜರಾಗದ ಹಿನ್ನೆಲೆ ಬಿಎಸ್‍ಪಿ ಹೈಕಮಾಂಡ್ ಮಾಯಾವತಿ ಅವರು ಬಿಎಸ್‍ಪಿ ಶಾಸಕ ಎನ್. ಮಹೇಶ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಗರದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಎನ್ ಮಹೇಶ್ ನಾನು ಎಲ್ಲೂ ಹೋಗಲ್ಲ. ಬಿಎಸ್‍ಪಿ ಯಲ್ಲೇ ಇರ್ತೇನೆ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಹೈಕಮಾಂಡ್ ಆದೇಶ ಹಾಗೂ ಇತರ ವಿಷ್ಯಗಳು ಕಮ್ಯೂನಿಕೇಟ್ ಆಗಲಿಲ್ಲ. ತಟಸ್ಥವಾಗಿರಲು ಸೂಚಿಸಿದ್ದರಿಂದ ನಾನು ನಿನ್ನೆ ಕಲಾಪಕ್ಕೆ ಗೈರಾಗಿದ್ದೆ ಎಂದು ಬಿಎಸ್‍ಪಿ ಶಾಸಕ ಎಸನ್ ಮಹೇಶ ಸ್ಪಷ್ಟಿಕರಣ ನೀಡಿದ್ದಾರೆ.
ನನಗೆ ಸರ್ಕಾರವನ್ನು ಹಾಗೂ CM ಬೆಂಬಲಿಸಲು ಹೈಕಮಾಂಡ್ ಮಾಡಿದ್ದ ಟ್ವೀಟ್ ಬಗ್ಗೆ ಗೊತ್ತಾಗಲಿಲ್ಲ. ಜುಲೈ 16ರ ಬಳಿಕ ನಾನು ಕ್ಷೇತ್ರದಿಂದ ಹೊರ ಹೋಗಿದ್ದೆ, ಈ ಸಂದರ್ಭದಲ್ಲಿ ನನ್ನ ಮೊಬೈಲ್ ಸ್ವಿಚ್ ಆಫ್ ಆಗಿತ್ತು, ಅಲ್ಲದೆ ನಾನು ಟ್ವೀಟ್ ಎಲ್ಲಾ ನೋಡೋದಿಲ್ಲ. ಹೀಗಾಗಿ ಮಾಹಿತಿ ಇರಲಿಲ್ಲ. ನಿನ್ನೆ ರಾತ್ರಿ CMಗೆ ಬೆಂಬಲಿಸಲು ಟ್ವೀಟ್ ಮಾಡಿದ್ದು ತಿಳಿಯಿತು. ಇಂದು ಬೆಳಗ್ಗೆ ನನ್ನನ್ನು ವಜಾ ಮಾಡಿರೋದ್ರ ಬಗ್ಗೆ ಗೊತ್ತಾಯಿತು. ಇದು ಕಮ್ಯುನಿಕೇಷನ್ ತೊಂದರೆಯಿಂದ ಆಗಿರುವ ಸಮಸ್ಯೆ ಮುಂದಿನ ದಿನಗಳಲ್ಲಿ ಎಲ್ಲಾ ಸಮಸ್ಯೆ ಸರಿಯಾಗೋ ವಿಶ್ವಾಸವಿದೆ ಎಂದು ಪ್ರೆಸ್ಮೀಟ್ ನಲ್ಲಿ ತಿಳಿಸಿದ್ದಾರೆ.
ಅಲ್ಲದೆ ನಾನು ಆಪರೇಷನ್ ಕಮಲಕ್ಕೆ ಒಳಗಾಗಿದ್ದೇನೆ ಎಂಬುವುದು ನಾನ್ ಸೆನ್ಸ್, ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗದೇ ತಟಸ್ಥನಾಗಿರುವೆ. ನನಗೂ ಖಾಸಗಿ ಜೀವನ ಇರುತ್ತೆ. ಆ ಹಿನ್ನೆಲೆಯಲ್ಲಿ ಮಾಹಿತಿಯ ಕೊರತೆ ಆಗಿದೆ. ಮುಂದಿನ ಸಮಯದಲ್ಲಿ ಪಕ್ಷದ ನಾಯಕರೊಂದಿಗೆ ಮಾತನಾಡುತ್ತೇನೆ. ಎಲ್ಲವೂ ಸರಿಹೋಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Comments are closed.