Uncategorized

ಮೋದಿಯವರ ಅಶ್ವಮೇಧಯಾಗದ ಕುದುರೆ ಕಟ್ಟಿಹಾಕಿದ್ದೇನೆ ಎನ್ನುವ ಕುಮಾರಸ್ವಾಮಿ ಜಯಗಳಿಸಿದ ಸ್ಥಾನಗಳೆಷ್ಟು?: ಯಡಿಯೂರಪ್ಪ

Pinterest LinkedIn Tumblr


ಬೆಂಗಳೂರು: ಪ್ರಧಾನಿ ಮೋದಿಯವರ ಅಶ್ವಮೇಧಯಾಗದ ಕುದುರೆ ಕಟ್ಟಿಹಾಕಿದ್ದೇನೆ ಎಂದು ಹೇಳುತ್ತಿರುವ ಸಿಎಂ ಎಚ್‌.ಡಿ.ಕುಮಾರಸ್ವಾಮಿಯವರ ಜೆಡಿಎಸ್‌ ಪಕ್ಷ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿರುವುದು ಕೇವಲ 37 ಎಂಬುದನ್ನು ಮರೆಯಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಡಾಲರ್ ಕಾಲೋನಿ ನಿವಾಸದ ಬಳಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕುಮಾರಸ್ವಾಮಿಯವರೇ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನ 140 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿರುವುದು ಗೊತ್ತಾ ಎಂದು ಪ್ರಶ್ನಿಸಿದರು.

ಜನಾದೇಶಕ್ಕೆ ವಿರುದ್ಧವಾಗಿ ಅಪವಿತ್ರ ಮೈತ್ರಿಕೊಂಡು ಅಧಿಕಾರಕ್ಕೆ ಬಂದು, ಮೋದಿ- ಅಮಿತ್‌ ಶಾ ಬಗ್ಗೆ ಮಾತನಾಡಲು ಬರಬೇಡಿ. ನಿಮ್ಮ ಸರ್ಕಾರ ಎಷ್ಟು ದಿನ ಆಡಳಿತದಲ್ಲಿರುತ್ತೋ ನೋಡೋಣ ಎಂದು ಹೇಳಿದರು.
ಕಾಂಗ್ರೆಸ್‌ ಬೆಂಬಲ ನೀಡಿದ್ದಕ್ಕೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ, ಆದರೆ, ಆ ಪಕ್ಷದ ಸಿದ್ದರಾಮಯ್ಯ ಅವರನ್ನೇ ಮೂಲೆಗುಂಪು ಮಾಡಲಾಗಿದೆ. ನಿನ್ನೆ ಪ್ರಮಾಣ ವಚನ ಸಮಾರಂಭದಲ್ಲಿ ಅವರನ್ನು ಮಾತನಾಡಿಸುವ ಸೌಜನ್ಯವೂ ಕುಮಾರಸ್ವಾಮಿ ತೋರಲಿಲ್ಲ. ಇದು ಅವರ ಸಮುದಾಯಕ್ಕೆ ಮಾಡಿದ ಅಪಮಾನ. ಜತೆಗೆ ಸ್ವಾಮೀಜಿಗಳನ್ನು ರಾಜಕೀಯಕ್ಕೆ ಬನ್ನಿ ಎಂದು ಹೇಳಿಕೆ ನೀಡಿ ಮಠಾಧಿಪತಿಗಳಿಗೂ ಅಪಮಾನ ಮಾಡಿದ್ದಾರೆ ಎಂದರು.

ನಾವು ಕಾಂಗ್ರೆಸ್‌- ಜೆಡಿಎಸ್‌ ಶಾಸಕರನ್ನು ಸೆಳೆಯಲು ಹೋಗುವುದಿಲ್ಲ. ಆದರೆ, ಜೆಡಿಎಸ್‌-ಕಾಂಗ್ರೆಸ್‌ನಲ್ಲೇ ಸಮಸ್ಯೆಯಾದರೆ ನಾವು ಕಾರಣರಲ್ಲ. ತಮ್ಮ ಶಾಸಕರ ಬಗ್ಗೆ ವಿಶ್ವಾಸ ಇಲ್ಲದ ಕಾರಣ ಕೂಡಿ ಹಾಕಲಾಗಿದೆ. ಕುಟುಂಬದವರನ್ನು ನೋಡಲು ಬಿಟ್ಟಿಲ್ಲ. ಅವರು ಹೊರಗೆ ಬಂದ ನಂತರ ಗೊತ್ತಾಗುತ್ತದೆ.
– ಶೋಭಾ ಕರಂದ್ಲಾಜೆ, ಸಂಸದೆ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ

Comments are closed.