
ಮುಂಬಯಿ : ಕೇಂದ್ರ ಸೆನ್ಸಾರ್ ಮಂಡಳಿಯಿಂದ ಹೆಸರು ಬದಲಿಸಲ್ಪಟ್ಟು ಯು/ಎ ಸರ್ಟಿಫಿಕೇಟ್ ಪಡೆದಿರುವ ವಿವಾದಿತ ಪದ್ಮಾವತ್ (ಹಿಂದಿನ ಹೆಸರು ಪದ್ಮಾವತಿ) ಚಿತ್ರವನ್ನು ತಮ್ಮ ರಾಜ್ಯದಲ್ಲಿ ಪ್ರದರ್ಶಿಸಲು ಬಿಡುವುದಿಲ್ಲ ಎಂದು ರಾಜಸ್ಥಾನ ಮುಖ್ಯಮಂತ್ರಿ ಹೇಳಿದ ತರುವಾಯ ಈಗ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಕೂಡ ಪದ್ಮಾವತ್‌ಗೆ ತಮ್ಮ ರಾಜ್ಯದಲ್ಲಿ ಪ್ರದರ್ಶನಾವಕಾಶ ನೀಡೆವು ಎಂದು ಹೇಳಿದ್ದಾರೆ.
ಕೇಂದ್ರ ಸೆನ್ಸಾರ್ ಮಂಡಳಿಯ ಸರ್ಟಿಫಿಕೇಟ್ ಪಡೆದಿರುವ ಪದ್ಮಾವತ್ ಚಿತ್ರ ಇದೇ ಜನವರಿ 25ರಂದು ಬಿಡುಗಡೆಯಾಗಲಿದೆ.
ಇಂದು ಇಲ್ಲಿನಿ ಸಿಬಿಎಫ್ಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ 70ಕ್ಕೂ ಅಧಿಕ ರಾಜಸ್ಥಾನದ ಕರ್ಣಿ ಸೇನೆಯ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಹಾಜಿ ಅಲಿ ಎದುರು ನಡೆದಿದ್ದ ಇನ್ನೊಂದು ಪ್ರತಿಭಟನೆಯಲ್ಲಿ 30ಕ್ಕೂ ಅಧಿಕ ಕರ್ಣಿ ಸೇನಾ ಬೆಂಬಲಿಗರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.
-ಉದಯವಾಣಿ
Comments are closed.