Uncategorized

ಸಿದ್ದರಾಮಯ್ಯ ಹಾರಾಟಕ್ಕೆ ಅಗಸ್ಟಾ ಹೆಲಿಕಾಪ್ಟರ್‌ನ ಅಗಮನ

Pinterest LinkedIn Tumblr

helicopter

ಬೆಂಗಳೂರು,ಮೇ.07: ಅಗಸ್ಟಾ ವೆಸ್ಟ್​ಲ್ಯಾಂಡ್​ ಹೆಲಿಕಾಪ್ಟರ್ ಖರೀದಿ ಹಗರಣ ದೇಶದೆಲ್ಲೆಡೆ ಭಾರೀ ಸದ್ದು ಮಾಡುತ್ತಿದ್ದು, ಕೇಂದ್ರದಲ್ಲಿ ಕಾಂಗ್ರೆಸ್​’ನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಈಗ ರಾಜ್ಯದಲ್ಲೂ ಅಗಸ್ಟಾ ಹೆಲಿಕಾಪ್ಟರ್ ಸದ್ದು ಮಾಡುತ್ತಿದೆ. ಆಗಸ್ಟ್ ಕಂಪನಿಯ ಹೆಲಿಕಾಪ್ಟರ್’ನ್ನು ವೆಟ್ ಲೀಸ್ ಆಧಾರದ ಪಡೆದುಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ಕಾಂಗ್ರೆಸ್​ಗೆ ತೀವ್ರ ಮುಜುಗರ ತರಿಸಿರುವ ಆಗಸ್ಟಾ ಕಂಪನಿಯ ಹೆಲಿಕಾಪ್ಟರ್’​ನಲ್ಲಿ ನಮ್ಮ ಸಿಎಂ ಹಾರಾಟಕ್ಕೆ ಮುಂದಾಗಿರುವುದು ತೀವ್ರ ಕುತೂಹಲ ಮೂಡಿಸಿದೆ.

ಬರ್ತಿದೆ ಅಗಸ್ಟಾ ಹೆಲಿಕಾಪ್ಟರ್
2011 ರಿಂದ ಸ್ಥಗಿತಗೊಂಡಿರುವ ಅಗಸ್ಟಾ ಹೆಲಿಕಾಫ್ಟರ್ನ್ನು ಈಗಿನ ಕಾಂಗ್ರೆಸ್ ಸರ್ಕಾರ ವೆಟ್ ಲೀಸ್ ಆಧಾರದ ಮೇಲೆ ಪಡೆದುಕೊಳ್ಳಲು ಮುಂದಾಗಿದೆ. ಟೆಂಡರ್​’ನಲ್ಲಿ ಆಗಸ್ಟಾ ಹೆಲಿಕಾಪ್ಟರ್​ ಓಕೆ ಎನ್ನಲಾಗಿದೆ. ಓಎಸ್‌ಎಸ್ ಏರ್ ಮ್ಯಾನೇಜ್ಮೆಂಟ್ ಹೆಸರಿನ ಏಜೆನ್ಸಿ ಅಗಸ್ಟಾ ಹೆಲಿಕಾಫ್ಟರ್ ಸೇವೆ ಒದಗಿಸಲು ಮುಂದೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆಗಳು ಬಹುತೇಕ ಪೂರ್ಣಗೊಂಡಿದ್ದು, ಅಂತಿಮ ಹಂತಕ್ಕೆ ಬಂದು ನಿಂತಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ.

ಅಗಸ್ಟಾ ಕರ್ನಾಟಕಕ್ಕೆ ಹೊಸದೇನಲ್ಲ. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಕೂಡಾ ಅಗಸ್ಟಾ ಹೆಲಿಕಾಪ್ಟರ್ ಕರ್ನಾಟಕದಲ್ಲಿ ಹಾರಾಡುತ್ತಿತ್ತು. 2009ರಿಂದ 2011ರವರೆಗೆ 2 ವರ್ಷ ಅಗಸ್ಟಾ ಹೆಲಿಕಾಪ್ಟರ್ ಮುಖ್ಯಮಂತ್ರಿಗೆ ಅಧಿಕೃತವಾಗಿ ಬಳಕೆಯಾಗುತ್ತಿತ್ತು.

ವೆಟ್ ಲೀಸ್ ಅಂದ್ರೆ ಏನು?
ಇದರ ಪ್ರಕಾರ ಟೆಂಡರ್ ಆದರೆ, ಅಗಸ್ಟಾ ಹೆಲಿಕಾಪ್ಟರ್​ ಸಿಎಂಗೆ ಬೇಕು ಎಂದ ತಕ್ಷಣ ಅಗಸ್ಟಾ ಹೆಲಿಕಾಪ್ಟರ್ ತಕ್ಷಣ ಸೇವೆಗೆ ಸಿದ್ಧವಾಗಬೇಕು. ಹೆಲಿಕಾಪ್ಟರ್ ಹಾರಾಟ ನಡೆಸಲಿ, ನಡೆಸದೇ ಇರಲಿ, ಅಗಸ್ಟಾ ಹಾರಾಟಕ್ಕೆ ಸರ್ಕಾರ ದುಡ್ಡು ಕಟ್ಟಲೇಬೇಕು.

ಇಡೀ ದೇಶದಲ್ಲೇ ಚರ್ಚೆಯಾಗುತ್ತಿರುವ ಅಗಸ್ಟಾ ಹೆಲಿಕಾಪ್ಟರ್ ಕರ್ನಾಟಕಕ್ಕೂ ಬರಲು ರೆಡಿಯಾಗಿದ್ದು, ಸಿಎಂ ಅದರಲ್ಲಿ ಪ್ರಯಾಣಿಸಲಿದ್ದಾರೆ.

Write A Comment