ಕುಂದಾಪುರ: ಕೆಸಿಇಟಿ(KCET) – 2025 ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಆಕಾಶ್ ಹೆಬ್ಬಾರ್ ವೆಟರ್ನರಿ ಸೈನ್ಸ್- 999, ನ್ಯಾಚುರೋಪತಿ & ಸೈನ್ಸ್- 932, ನರ್ಸಿಂಗ್- 1009ಬಿ ಫಾರ್ಮ್-1382, ಬಿ.ಎಸ್ಸಿ ಅಗ್ರಿ- 1382 ರ್ಯಾಂಕ್ ಗಳನ್ನು ಪಡೆದು ಅದ್ವಿತೀಯ ಸಾಧನೆ ಮಾಡಿದ್ದಾರೆ.
ಪರೀಕ್ಷೆ ಬರೆದ 85 ವಿದ್ಯಾರ್ಥಿಗಳಲ್ಲಿ, 25 ವಿದ್ಯಾರ್ಥಿಗಳು ಹತ್ತು ಸಾವಿರದ ಒಳಗೆ ರ್ಯಾಂಕ್ ಗಳನ್ನು ಪಡೆದು ಸಾಧನೆ ಮೆರೆದಿರುತ್ತಾರೆ. ಕ್ರಮವಾಗಿ ನಿಶ್ಚಿತ್ ಇಂಜಿನಿಯರಿಂಗ್ -1638 ನೇ Rank, ಶೋಭಿತ್ – ಬಿ.ಎಸ್ಸಿ ಅಗ್ರಿ 2006 ನೇ ರ್ಯಾಂಕ್, ಗಿರೀಶ್ ಪೈ ಇಂಜಿನಿಯರಿಂಗ್-2159 ನೇ ರ್ಯಾಂಕ್, ಚಿರಂತನ್ ಇಂಜಿನಿಯರಿಂಗ್-2219 ನೇ ರ್ಯಾಂಕ್,ಶಶಾಂಕ್ ಇಂಜಿನಿಯರಿಂಗ್-2219 ನೇ ರ್ಯಾಂಕ್ ಪಡೆಯುವುದರ ಮೂಲಕ ಅದ್ವಿತೀಯ ಸಾಧನೆ ಮಾಡಿ ರಾಜ್ಯದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶಾತಿಯನ್ನು ಪಡೆಯಲು ಅರ್ಹರಾಗಿರುದ್ದಾರೆ.
ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಜನತಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುತ್ತಮ ರೀತಿಯಲ್ಲಿ ತರಬೇತುಗೊಳಿಸಿ ಕಾಲೇಜು ಪ್ರಾರಂಭದ ತೃತೀಯ ವರ್ಷವೂ ರಾಜ್ಯಮಟ್ಟದಲ್ಲಿ ಉತ್ತಮ ಫಲಿತಾಂಶವನ್ನು ದಾಖಲಿಸಿದೆ.ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ-ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

Comments are closed.