ಉಡುಪಿ: ಹಿಂದಿಯ ಸೋನಿ ಟಿವಿಯಲ್ಲಿ ನಡೆಯುವ ಜನಪ್ರಿಯ ಕ್ವಿಝ್ ಕಾರ್ಯಕ್ರಮ ಕೌನ್ ಬನೇಗಾ ಕರೋಡ್ಪತಿಯ ಸ್ಟುಡೆಂಟ್ ಸ್ಪೆಷಲ್ನಲ್ಲಿ ಉಡುಪಿ ವಿದ್ಯೋದಯ ಪಬ್ಲಿಕ್ ಸ್ಕೂಲ್ನ ಏಳನೇ ತರಗತಿ ವಿದ್ಯಾರ್ಥಿ ಅನಮಯ ಯೋಗೇಶ್ ದಿವಾಕರ್ 50 ಲಕ್ಷ ರೂ. ಗಳನ್ನು ಗೆದ್ದಿದ್ದಾನೆ. ಬಾಲಿವುಡ್ನ ಸೂಪರ್ಸ್ಟಾರ್ ಅಮಿತಾಬ್ ಬಚ್ಚನ್ ಈ ಕಾರ್ಯಕ್ರಮ ನಡೆಸಿಕೊಡುತ್ತಾರೆ.
ಮೊದಲಿಗೆ ಎರಡು ಪ್ರಶ್ನೆಗಳಿಗೆ ಸರಿಯುತ್ತರ ನೀಡಿ 2,000 ರೂ. ಗೆದ್ದಿದ್ದ ಅನಮಯ ಅವರ ಆಟವನ್ನು ಮಾರನೇ ದಿನಕ್ಕೆ ಕಾದಿರಿಸಲಾಗಿತ್ತು. ಬುಧವಾರದಂದು 50 ಲಕ್ಷ ರೂ. ಗಳ ವರೆಗೆ ಗೆದ್ದ ಅನಾಮಯ ಬಳಿಕ ಕುರುಕ್ಷೇತ್ರ ಯುದ್ದದ ಬಗ್ಗೆ ಕೇಳಿಕ ಪ್ರಶ್ನೆಗೆ ಉತ್ತರಿಸದೆ ಗೊಂದಲವಿದ್ದ ಹಿನ್ನೆಲೆ ಆಟ ತ್ಯಜಿಸಿದ್ದಾನೆ.
ಕೊನೆಯ ಹಂತದಲ್ಲಿ ನಾಲ್ಕು ಮಂದಿ ಸ್ವರ್ದಿಗಳಲ್ಲಿ ವೇಗವಾಗಿ ಸರಿಯುತ್ತರ ನೀಡಿ ಹಾಟ್ಸೀಟ್ನಲ್ಲಿ ಕುಳಿತುಕೊಳ್ಳಲು ಅರ್ಹತೆ ಪಡೆದ ಅನಾಮಯ ಆರಂಭಿಕ ಸುತ್ತಿನ ಕೆಲ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಿಸಿದ್ದ.