ಕರಾವಳಿ

ಮಹಿಳೆಯರನ್ನು ಕಾಡುವ ಋತು ಸಮಸ್ಯೆ ನಿವಾರಣೆಗೆ ಕೆಲವು ಸಲಹೆ…

Pinterest LinkedIn Tumblr

ಇಂದಿನ ದಿನಗಳಲ್ಲಿ ಬಹಳಷ್ಟು ಮಂದಿ ಮಹಿಳೆಯರು ಎದುರಿಸುತ್ತಿರುವ ಅನಾರೋಗ್ಯ ಸಮಸ್ಯೆಗಳಲ್ಲಿ ಋತುಚಕ್ರ ಸಮಸ್ಯೆಯೂ ಒಂದು. ಹಾರ್ಮೋನ್‌ಗಳ ಕೊರತೆ, ಸ್ಥೂಲಕಾಯ, ದೀರ್ಘಕಾಲದ ಅನಾರೋಗ್ಯಗಳು….ಈ ರೀತಿಯ ಎಷ್ಟೋ ಕಾರಣಗಳಿಂದ ಬಹಳಷ್ಟು ಮಂದಿ ಸ್ತ್ರೀಯರಲ್ಲಿ ಮುಟ್ಟು ಸರಿಯಾಗಿ ಆಗಲ್ಲ. ಇದರಿಂದ ಸಂತಾನ ಬಯಸುವ ಮಹಿಳೆಯರಿಗೆ ನಿರಾಸೆ ಎದುರಾಗುತ್ತದೆ. ಹಾಗಾಗಿ ಅವರು ತೀವ್ರ ಆತಂಕಕ್ಕೆ ಗುರಿಯಾಗುತ್ತಾರೆ. ಆದರೆ ಕೆಳಗೆ ಕೊಟ್ಟಿರುವ ಟಿಪ್ಸ್ ಪಾಲಿಸಿದರೆ ಅದರಿಂದ ಸ್ತ್ರೀಯರು ತಮ್ಮ ಋತು ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. ಇದರಿಂದ ತಿಂಗಳ ಸಮಸ್ಯೆ ಕಡಿಮೆಯಾಗುತ್ತದೆ. ಸಂತಾನ ಆಗಲು ಹೆಚ್ಚಿನ ಅವಕಾಶಗಳು ಇರುತ್ತವೆ. ಆ ಟಿಪ್ಸ್ ಏನೆಂದರೆ…

1. ಪಪ್ಪಾಯ ಹಣ್ಣು
ಪಪ್ಪಾಯ ಹಣ್ಣನ್ನು ಸಂಪೂರ್ಣವಾಗಿ ಹಣ್ಣಾಗುವುದಕ್ಕೂ ಮುನ್ನ ಅಂದರೆ ಸ್ವಲ್ಪ ಹಸಿಯಾಗಿದ್ದಾಗ, ದೋರೆಯಾಗಿದ್ದಾರೆ ತಿನ್ನಬೇಕು. ಆ ರೀತಿ ತಿನ್ನುವುದರಿಂದ ಋತುಚಕ್ರ ಕ್ರಮವಾಗಿ ಚೆನ್ನಾಗಿ ನಡೆಯುತ್ತದೆ. ಆದರೆ ಈ ಹಣ್ಣನ್ನು ಮುಟ್ಟಾದಾಗ ಮಾತ್ರ ತಿನ್ನಬಾರದು.

2. ಅರಿಶಿಣ
ಒಂದು ಗ್ಲಾಸ್ ಬಿಸಿ ಹಾಲಿನಲ್ಲಿ 1/4 ಟೀಸ್ಫೂನ್ ಅರಿಶಿಣ ಬೆರೆಸಿ ನಿತ್ಯ ಒಮ್ಮೆ ಯಾವಾಗಲಾದರೂ ಕುಡಿಯಬೇಕು. ಈ ರೀತಿ ಸ್ವಲ್ಪ ದಿನಗಳ ಕಾಲ ಪಾಲಿಸಿದರೆ ಮುಟ್ಟಿನ ಸಮಸ್ಯೆಗಳು ನಿವಾರಣೆಯಾಗುತ್ತವೆ. ಋತುಚಕ್ರ ಸರಿಯಾಗಿ ಆಗುತ್ತದೆ. ಅರಿಶಿಣದಲ್ಲಿರುವ ಔಷಧಿ ಗುಣಗಳು ಸ್ತ್ರೀಯರಿಗೆ ಋತುಚಕ್ರ ಸಮಸ್ಯೆಗಳನ್ನು ನಿವಾರಿಸುತ್ತವೆ.

3. ಅಲೋವೆರಾ
ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಟೇಬಲ್ ಸ್ಫೂನ್ ಪ್ರಮಾಣದಲ್ಲಿ ಅಲೋವೆರಾ (ಲೋಳೆಸರ) ತಿನ್ನಬೇಕು. ಇದರಿಂದ ಋತುಚಕ್ರ ಕ್ರಮವಾಗಿ ಆಗುತ್ತದೆ. ಮುಟ್ಟಿನ ಸಂದರ್ಭದಲ್ಲಿ ಆಗುವ ನೋವು ಕಡಿಮೆಯಾಗುತ್ತದೆ. ಆದರೆ ಮುಟ್ಟಾದಾಗ ಮಾತ್ರ ಇದನ್ನು ತಿನ್ನಬಾರದು.

4. ಶುಂಠಿ
ಸಣ್ಣ ಶುಂಠಿ ಚೂರನ್ನು ನೀರಿನಲ್ಲಿ ಹಾಕಿ 5 ನಿಮಿಷಗಳ ಕಾಲ ಚೆನ್ನಾಗಿ ಕುದಿಸಬೇಕು. ಆ ಬಳಿಕ ಬರುವ ದ್ರವದಲ್ಲಿ ಸಕ್ಕರೆ ಅಥವಾ ಜೇನು ಬೆರೆಸಿ ಕುಡಿಯಬೇಕು. ಹೀಗೆ ನಿತ್ಯ 3 ಹೊತ್ತು ಊಟ ಮಾಡಿದ ಬಳಿಕ ಕುಡಿಯಬೇಕು. ಇದರಿಂದ ಋತು ಸಮಸ್ಯೆಗಳು ಬರಲ್ಲ. ಋತುಚಕ್ರ ಸರಿಯಾದ ಕಾಲಕ್ಕೆ ಆಗುತ್ತದೆ. ಹಾರ್ಮೋನ್‌ಗಳು ಬ್ಯಾಲೆನ್ಸ್ ಆಗುತ್ತವೆ. ಆ ಮೂಲಕ ಸಂತಾನ ಉಂಟಾಗಲು ಹೆಚ್ಚಿನ ಅವಕಾಶಗಳು ಇರುತ್ತವೆ.

5. ಜೀರಿಗೆ
ಎರಡು ಟೀಸ್ಫೂನ್ ಜೀರಿಗೆ ತೆಗೆದುಕೊಂಡು ಒಂದು ಗ್ಲಾಸ್ ನೀರಿನಲ್ಲಿ ಹಾಕಿ ರಾತ್ರಿಯಲ್ಲಾ ನೆನೆಸಬೇಕು. ಬೆಳಗ್ಗೆ ಜೀರಿಗೆಯನ್ನು ತೆಗೆದು ಆ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಇದರಿಂದ ಋತು ಸಮಸ್ಯೆಗಳು ನಿವಾರಣೆಯಾಗುತ್ತವೆ. ಹೀಗೆ ನಿಯಮಿತವಾಗಿ ಕುಡಿದರೆ ಫಲಿತಾಂಶ ಸಿಗುತ್ತದೆ.

6. ದಾಲ್ಚಿನಿ ಚಕ್ಕೆ
ಒಂದು ಗ್ಲಾಸ್ ಬಿಸಿ ಹಾಲಿನಲ್ಲಿ 1 ಟೀಸ್ಫೂನ್ ದಾಲ್ಚಿನಿ ಚಕ್ಕೆಯನ್ನು ಪುಡಿ ಮಾಡಿಕೊಂಡು ಚೆನ್ನಾಗಿ ಕಲೆಸಬೇಕು. ಹೀಗೆ ನಿತ್ಯ ಕುಡಿಯುತ್ತಿದ್ದರೆ ಸ್ವಲ್ಪ ದಿನಗಳ ಕಾಲ ಪೀರಿಯಡ್ಸ್ ಕ್ರಮವಾಗಿ ನಡೆಯುತ್ತದೆ. ಋತು ಸಮಸ್ಯೆಗಳು ನಿವಾರಣೆಯಾಗುತ್ತವೆ.

7. ಪ್ರಾಣಾಯಾಮ
ಮೇಲೆ ಹೇಳಿದ ಸಲಹೆಗಳೊಂದಿಗೆ ಕಪಾಲಭಾತಿ ಪ್ರಾಣಾಯಾಮ ಪದ್ಧತಿಯನ್ನು ಪಾಲಿಸಿದರೆ ಋತು ಸಮಸ್ಯೆಗಳು ನಿವಾರಣೆಯಾಗುತ್ತವೆ. ಪೀರಿಯಡ್ಸ್ ಸೂಕ್ತವಾಗಿ ಆಗುತ್ತವೆ. ಇದನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಗಾಳಿಯನ್ನು ಜೋರಾಗಿ ಒಳಗೆ ಎಳೆದುಕೊಳ್ಳುತ್ತಾ ಬಿಡುತ್ತಾ 5 ನಿಮಿಷಗಳ ಕಾಲ ಮಾಡಬೇಕು. ಇದನ್ನು ಆವೃತ್ತಿಯಂತೆ ಮಾಡಬೇಕು. ಆ ರೀತಿಯ ವೃತ್ತಗಳನ್ನು 3 ಮಾಡಿದರೆ ಸಾಕು. ಎಂದರೆ 15 ನಿಮಿಷಗಳ ಕಾಲ ನಿತ್ಯ ಮಾಡಬೇಕು. 5 ನಿಮಿಷಗಳಿಗೆ ಒಮ್ಮೆ ಗ್ಯಾಪ್ ನೀಡಬೇಕು. ಈ ಕಪಾಲಭಾತಿ ಪ್ರಾಣಾಯಾಮ ಮಾಡಿದರೆ ಋತು ಸಮಸ್ಯೆಗಳಷ್ಟೇ ಅಲ್ಲ, ಇನ್ನೂ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ

Comments are closed.