ಮನಮೋಹಕ ತಾಣಗಳು

“ದುರ್ಗ”ದ ವಿಶಿಷ್ಟತೆ ಕಂಡು ಹೃದಯ ನೂರು ಮೀ. ಓಟದ ಸ್ಪರ್ಧೆಯ ಓಟಗಾರನಂತೆ ಬಡಿಯುತ್ತೆ.

Pinterest LinkedIn Tumblr

durga_kote_mubai

ಈ ದುರ್ಗ ಅಥವಾ ಕೋಟೆಯನ್ನೊಮ್ಮೆ ನೋಡಿದರೆ ಸಾಕು, ಸಾಮಾನ್ಯವಾಗಿ ಬಡಿದುಕೊಳ್ಳುತ್ತಿರುವ ಹೃದಯ ನೂರು ಮೀ. ಓಟದ ಸ್ಪರ್ಧೆಯ ಓಟಗಾರನಂತೆ ಓಡಲು ಆರಂಭಿಸುತ್ತದೆ. ಇದರ ರಚನೆಯೆ ಆ ರೀತಿಯಲ್ಲಿರುವುದನ್ನು ಕಂಡಾಗ ಯಾರಿಗಾದರೂ ಸರಿ ಅಚ್ಚರಿಯಾಗದೆ ಇರಲಾರದು.

ಆದರೆ ನಿಮಗಿದು ಗೊತ್ತೆ, ಈ ದುರ್ಗವನ್ನು ಚಾರಣಿಗರ ಬಲು ನೆಚ್ಚಿನ ಕೋಟೆ ಎಂದೆ ಕರೆಯಲಾಗುತ್ತದೆ. ಇದು ಇತರೆ ಸಾಮಾನ್ಯವಾಗಿ ಗುಡ್ಡದ ಮೇಲಿರುವ ಕೋಟೆಯಂತಿರದೆ ಚೂಪಾದ ಗುಡ್ಡವೊಂದರ ಮೇಲೆ ನೆಲೆಸಿರುವುದೆ ವಿಶೇಷವಾಗಿದೆ.

ಈ ಕೋಟೆಯನ್ನು ಏರಲು ಕಲ್ಲುಗಲಲ್ಲಿ ಮೆಟ್ಟಿಲುಗಳನ್ನು ಕೊರೆಯಲಾಗಿದ್ದು ಏರಲು ಅನುಕೂಲಕರವಾಗಿದೆ.ಆದರೆ, ಮಳೆಗಾಲದ ಸಂದರ್ಭದಲ್ಲಿ ಈ ದುರ್ಗವನ್ನು ಏರುವುದೆಂದರೆ ಪ್ರಾಣ ಪಣಕ್ಕಿಟ್ಟು ಸಾಹಸ ಮಾಡಿದಂತೆ. ಬಲು ಮೊನಚಾದ ಬೆಟ್ಟವಾಗಿರುವುದರಿಂದ ಸ್ವಲ್ಪ ಕಾಲು ಜಾರಿತೆಂದರೂ ಮನುಷ್ಯ ಪಾತಾಳಕ್ಕೆ ಸೇರುತ್ತಾನಷ್ಟೆ. ಆದ್ದರಿಂದ ಮಳೆಗಾಲವೊಂದನ್ನು ಹೊರತು ಪಡಿಸಿ ಮಿಕ್ಕ ಸಮಯದಲ್ಲಿ ಈ ಅದ್ಭುತ ದುರ್ಗವನ್ನು ಏರಿ ಆನಂದಿಸಬಹುದು.

durga_kote_mubai_1

ಈ ದುರ್ಗದ ಸುತ್ತಮುತ್ತಲಿನ ಜಾಗವೆಲ್ಲ ಸಾಕಷ್ಟು ನಯನಮನೋಹರವಾಗಿದ್ದು ಅದ್ಭುತ ಅನುಭವ ನೀಡುತ್ತದೆ. ಒಮ್ಮೆಯಾದರೂ ಈ ದುರ್ಗಕ್ಕೆ ಚಾರಣ ಮಾಡಲೇಬೇಕು ಅನ್ನುವಂತಿದೆ ಈ ಕಲವಂತಿನ್ ದುರ್ಗ. ಹೌದು ಇದನ್ನು ಕಲವಂತಿನ್ ದುರ್ಗ ಇಲ್ಲವೆ ಹೆಚಾಗಿ ಪ್ರಬಾಲಗಡ್ ಕೋಟೆ ಎಂದು ಕರೆಯುತ್ತಾರೆ. ಮಹಾರಾಷ್ಟ್ರದಲ್ಲಿ ಆವರಿಸಿರುವ ಮನಮೋಹಕ ಪಶ್ಚಿಮಘಟ್ಟಗಳ ಜಾಡಿನಲ್ಲಿ ಈ ಅದ್ಭುತ ದುರ್ಗ ಸ್ಥಿತವಿರುವುದನ್ನು ಕಾಣಬಹುದು. ಮಹಾರಾಷ್ಟ್ರದ ಅದ್ಭುತ ಗಿರಿಧಾಮ ಪ್ರದೇಶವಾದ ಮಾಥೇರಾನ್ ಹಾಗೂ ಮುಂಬೈ ಬಳಿಯ ಪನ್ವೇಲ್ ಮಧ್ಯದ ಪ್ರದೇಶದಲ್ಲಿ ಪ್ರಬಾಲ್ಗಡ್ ಕೋಟೆಯಿದೆ.

ಹಿಂದೆ ಮಹಾರಾಷ್ಟ್ರದ ಉತ್ತರ ಕೊಂಕಣ ಪ್ರದೇಶದಲ್ಲಿ ಪನ್ವೇಲ್ ಹಾಗೂ ಕಲ್ಯಾಣ ಕೋಟೆಗಳು ಭದ್ರವಾಗಿ ನೆಲೆಯೂರಿದ್ದವು. ಬಹುಮನಿ ಸುಲ್ತಾನರು ಈ ಎರಡೂ ಕೋಟೆಗಳ ಮೇಲೆ ಕಣ್ಣಿಡಲು ಅನುಕೂಲವಾಗುವಂತೆ ಈ ಕಲವಂತಿನ್ ಕೋಟೆಯನ್ನು ನಿರ್ಮಿಸಿದ್ದರು ಎಂಬುದು ಇತಿಹಾಸದಿಂದ ತಿಳಿದುಬರುತ್ತದೆ.

durga_kote_mubai_2

ಪ್ರಸ್ತುತ ಈ ದುರ್ಗವು ಪ್ರವಾಸಿಗರ ಬಲು ನೆಚ್ಚಿನ ತಾಣವಾಗಿದೆ ಹಾಗೂ ವಾರಾಂತ್ಯದ ರಜೆಗಳಲ್ಲಿ ಸಾಕಷ್ಟು ಹದಿಹರೆಯದ ಯುವ ಜನರು ಈ ತಾಣಕ್ಕೆ ಚಾರಣ ಮಾಡಲೆಂದು ಬರುತ್ತಾರೆ. 2300 ಅಡಿಗಳಷ್ಟು ಎತ್ತರದಲ್ಲಿ ನೆಲೆಸಿರುವ ಈ ಅದ್ಭುತ ತಾಣ ಸಾಕಷ್ಟು ರಮಣೀಯ ನೋಟಗಳನ್ನು ಕರುಣೀಸುತ್ತದೆ.

ಇದು ರೋಮಾಂಚನಗೊಳಿಸುವ ಅದ್ಭುತ ಚಾರಣ ಅಥವಾ ಏರುವ ಪ್ರವಾಸಿ ತಾಣವಾಗಿದ್ದು ಮುಂಜಾಗೃತೆಯಾಗಿ ಎಲ್ಲ ವಸ್ತುಗಳನ್ನು ತೆಗೆದುಕೊಂಡು ಏರುವುದು ಉತ್ತಮ. ಅಕ್ಟೋಬರ್ ನಿಂದ ಮಾರ್ಚ ವರೆಗಿನ ಸಮಯವು ಟ್ರೆಕ್ ಮಾಡಲು ಪ್ರಶಸ್ತ ಸಮಯವಾಗಿದೆ. ಮಾರ್ಗದರ್ಶಿಗಳ/ಪರಿಣಿತರ ಸಲಹೆಗಳಿದ್ದಲ್ಲಿ ಉತ್ತಮ.

ಪನ್ವೇಲ್ ರೈಲು ನಿಲ್ದಾಣದಿಂದ ಠಕೂರ್ ವಾಡಾ ಹಳ್ಳಿಗೆ ತಲುಪಿ ಅಲ್ಲಿಂದ ಚಾರಣ ಪ್ರಾರಂಭಿಸಬಹುದು.

Comments are closed.