ಕರ್ನಾಟಕ

​ಪ್ರಯಾಣಿಕನ ಜತೆ ಬಸ್ ಹತ್ತಿದ ಕೋಳಿಗೂ ಹಾಫ್ ಟಿಕೆಟ್​ ಕೊಟ್ಟ ಕೆ.ಎಸ್.ಆರ್.ಟಿ.ಸಿ ಬಸ್ ಕಂಡಕ್ಟರ್..!

Pinterest LinkedIn Tumblr

ಚಿಕ್ಕಬಳ್ಳಾಪುರ: ನಾಟಿ ಕೋಳಿ ಹಿಡಿದು ಕೆಎಸ್​ಆರ್ಟಿಸಿ ಬಸ್​ ಹತ್ತಿದ ಪ್ರಯಾಣಿಕನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.

ಚಿಕ್ಕಬಳ್ಳಾಪುರ ತಾಲೂಕಿನ ಸೋಮೇಶ್ವರದ ವ್ಯಕ್ತಿಯೊಬ್ಬ ಶ್ರಾವಣ ಮಾಸದ ಪ್ರಯುಕ್ತ ಪೆರೇಸಂದ್ರದಲ್ಲಿ ನಾಟಿ ಕೋಳಿಯೊಂದನ್ನು ಖರೀದಿಸಿ ವಾಪಸ್​ ಮನೆಗೆ ಹೋಗಲೆಂದು ಕೆಎಸ್​ಆರ್​ಟಿಸಿ ಬಸ್ ಹತ್ತಿದ್ದರು. ಸೋಮೇಶ್ವರಕ್ಕೆ ಒಂದು ಟಿಕೆಟ್​ ಕೊಡಿ ಎಂದು ಪ್ರಯಾಣಿಕ ಕೇಳಿದಾಗ ಬಸ್‌ ಕಂಡಕ್ಟರ್ ಒಂದೂವರೆ ಟಿಕೆಟ್​ ನೀಡಿದ್ದಾರೆ. ಅದರಲ್ಲಿ‌ 10 ರೂ. ಪ್ರಯಾಣಿಕನಿಗೆ ಫುಲ್ ಟಿಕೆಟ್, ಅವರ ಜತೆ ಇದ್ದ ನಾಟಿಕೋಳಿಗೂ 5 ರೂ. ಅರ್ಧ ಟಿಕೆಟ್ ಕೊಟ್ಟಿದ್ದಾರೆ.

ಕೋಳಿಗೂ ಟಿಕೆಟ್​ ಕೊಟ್ಟಿದ್ದಕ್ಕೆ ಪ್ರಯಾಣಿಕ ತನ್ನ ಪಕ್ಕದ ಸೀಟ್​ನಲ್ಲೇ ಕೋಳಿಯನ್ನೂ ಕೂರಿಸಿಕೊಂಡು ಪ್ರಯಾಣಿಸಿದ್ದಾನೆ. ಸದ್ಯ ಈ ಫೋಟೋ ವೈರಲ್​ ಆಗಿದೆ.

Comments are closed.