ಕರಾವಳಿ

ಮಣ್ಣಿನಲ್ಲೇ ಹುಟ್ಟಿ, ಮಣ್ಣಿನಲ್ಲೇ ಸಾಯುವುದು ಎಂಬ ಮಾತು ಹಿರಿಯರು ಯಾಕೆ ಹೇಳುತ್ತಿರುತ್ತಾರೆ ಗೋತ್ತೆ.!

Pinterest LinkedIn Tumblr

ನಮ್ಮ ದೇಹದಲ್ಲಿರುವ ಚರ್ಮ, ಮೂಳೆ, ನಾಡಿ, ಕೂದಲು ಮತ್ತು ಮಾಂಸ ಈ ಐದು ಭೂಮಿಯ ಗುಣಗಳನ್ನು ಹೊಂದಿರುತ್ತವೆ. ಜೊಲ್ಲು, ಮೂತ್ರ, ವೀರ್ಯ, ಕಣ್ಣಿರು, ಮಜ್ಜೆ ಮತ್ತು ರಕ್ತ ಇವು ನೀರಿನ ಗುಣ ಹೊಂದಿರುತ್ತವೆ. ಹಸಿವು, ಬಾಯಾರಿಕೆ, ಆಲಸ್ಯ, ನಿದ್ರೆ, ಆಪೇಕ್ಷೆ ಇವು ತೆಜಸ್ಸಿನ ಗುಣಗಳನ್ನು ಹೊಂದಿರುತ್ತವೆ. ಅದಕ್ಕೆ ಈ ಐದನ್ನು ನಾವು ನಮ್ಮ ಹದ್ದು ಬಸ್ತಿನಲ್ಲಿರುತ್ತವೆ.ಈ ದೇಹವು ಮಣ್ಣಿನಿಂದ ಸೃಷ್ಠಿಸಿದ್ದು, ಅದಕ್ಕೆ ಹೇಳೊದು ಮಣ್ಣಿನಿಂದ ಹುಟ್ಟಿದ್ದು ಕೊನೆಗೆ ಮಣ್ಣಿನಲ್ಲೇ ಹೋಗುವದು ಅಂತ ಯಾಕಂದರೆ….. ಮುಂದೆ ಓದಿ..?

ಉದಾಹರಣೆಗೆ ನಾವು ಪ್ರವಾಸ ಮಾಡುವಾಗ ನೀರನ್ನು ಹೆಚ್ಚು ಕುಡಿದರೆ ಕೆಳಗೆ ಇಳಿಯುವ ಪ್ರಸಂಗ ಬಂದಿತು ಅಂತ ಬಾಯಾರಿಕೆಯನ್ನು ತಡೆಯುತ್ತೇವೆ, ಉಪವಾಸ ವ್ರತ ಆಚರಿಸುವಾಗ ಹಸಿವನ್ನು ತಡೆಯುತ್ತೇವೆ, ಅದೇ ರೀತಿ ಎಷ್ಟೇ ಶ್ರಮವಾದಾಗಲೂ ಕೆಲಸ ಪೂರ್ಣವಾಗಲು ಆಲಸ್ಯವಿಲ್ಲದೆ ಕೆಲಸ ಮಾಡುತ್ತೇವೆ. ಅಪೆಕ್ಷೆಗಳು ಇವುಗಳನ್ನು ಭಗವಂತ ನಮ್ಮ ನಿಯಂತ್ರಣದಲ್ಲಿ ಇಟ್ಟ. ಹಾಗೆ ಇನ್ನು ಅಕುಂಚನ ಹೊಂದುವದು, ಹಿಗ್ಗುವದು, ಓಡುವದು, ಜಿಗಿಯುವದು, ವಿಸ್ತಾರವಾಗುವದು, ಚಂಚಲತೆಯಿಂದಿರುವದು ಇವು ವಾಯುವಿನ ಗುಣಗಳು, ಅದಕ್ಕೆ ನಮ್ಮ ದೇಹ ದಪ್ಪಗಾಗಲು ಹೊಟ್ಟೆ ಬರುವದು ಇವೆಲ್ಲ ವಾಯು ವಿಕಾರದಿಂದಲೇ, ಇನ್ನು ಅಂತಃಕರಣದ ಗುಣಗಳು ಯಾವವು ಎಂದರೆ ಮನಸ್ಸು, ಬುದ್ಧಿ, ಅಹಂಕಾರ ಮತ್ತು ಚಿತ್ತ ( ಹೃದಯ) ಈ ನಾಲ್ಕು ಅಂತಃಕರಣದ ಗುಣಗಳು ನಮ್ಮ ಪೂರ್ವ ಜನ್ಮದ ಅನುಸಾರವಾಗಿ ನಮ್ಮಲ್ಲಿ ಬಂದಿರುತ್ತವೆ.

ಮನುಷ್ಯನಿಗೆ ಮೂರುವರೆ ಕೋಟಿ ರೋಮಗಳು, ಏಳುಲಕ್ಷ ತಲೆಗೂದಲುಗಳು, ಮೂವತ್ತೆರಡು ಹಲ್ಲುಗಳು ಮತ್ತು ಇಪ್ಪತ್ತು ಉಗುರುಗಳು.

ಒಂದು ದಿನದ ಹಗಲು ರಾತ್ರಿಗಳಲ್ಲಿ ಇಪ್ಪತ್ತೊಂದು ಸಾವಿರದ ಆರುನೂರು ಸಲ ಶ್ವಾಸವು ಸೂಕ್ಷ್ಮ ಗತಿಯಲ್ಲಿ ಆಡುತ್ತದೆ, ಹ ಕಾರದಿಂದ ಶ್ವಾಸವು ಹೊರಗೆ ಹೋಗಿ ಸ ಕಾರದಿಂದ ಒಳಗೆ ಪ್ರವೇಶಿಸುತ್ತದೆ. ಈ ಬಗೆಯಾಗಿ ನಾವು ಜೀವಾತ್ಮ ಹಂಸ ಹಂಸ ಎಂಬ ಮಂತ್ರವನ್ನು ನಮ್ಮುಸಿರು ಇರುವವರೆಗೂ ಜಪಿಸುತ್ತೇವೆ ಆದ್ದರಿಂದ ಎಂಬತ್ತನಾಲ್ಕು ಕೋಟಿ ಜೀವರಾಶಿಗಳಲ್ಲಿ ಮಾನವ ಜನ್ಮ ವೇ ಶ್ರೇಷ್ಠವಾದದ್ದು, ಅದಕ್ಕೆ ವಿವೇಕಿಯಾದ ಮಾನವನು ತನ್ನ ಕೈನಡೆಯುವಾಗಲೇ ದಾನಧರ್ಮ, ಪರೋಪಕಾರ, ಒಳ್ಳೆಯ ಮಾತು, ಇಂದ್ರಿಯ ನಿಗ್ರಹಗಳನ್ನು ಕೈಗೂಡಿಸಿಕೊಳ್ಳಬೇಕು. ಒಡೆದ ಪಾತ್ರೆ ಸಣ್ಣಾಗಿ ಸೋರುವಂತೆ ಆಯುಷ್ಯವು ಕಡಿಮೆಯಾಗುತ್ತ ಸಾಗುತ್ತದೆ.

ಅದಕ್ಕಾಗಿ ನಾವು ನಮ್ಮ ಜಾತಿ ಪದ್ಧತಿ ಸಂಪ್ರದಾಯ ಗಳನುಸಾರ ಕರ್ಮಗಳನ್ನು ಅನುಸರಿಸಬೇಕು, ದೇವತಾ ಪೂಜೆ, ಪಿತೃಗಳಿಗೆ ತರ್ಪಣ ಶ್ರಾದ್ಧಕರ್ಮಗಳು ಮಾಡಬೇಕು ಯಾರು ನಾಸ್ತಿಕನೆನಿಸಿಕೊಳ್ಳುತ್ತಾನೋ ಕರ್ಮ ಧರ್ಮಗಳಲ್ಲಿ ನಂಬುಗೆ ಕಳೆದುಕೊಂಡು ಜೀವಿಸುತ್ತಾನೆಯೋ ಅಂಥವನ ಮನೆಯಲ್ಲಿ ದೇವತೆಗಳೂ, ಪಿತೃಗಳು ಪ್ರವೇಶಿಸುವದು ಒತ್ತೆಟ್ಟಿಗಿರಲಿ ಆ ಕಡೆ ತಿರುಗಿಯೂ ಕೂಡಾ ನೋಡುವದಿಲ್ಲ, ಕೊನೆಗೆ ದೇವತೆ, ಪಿತೃಗಳ ಶಾಪದಿಂದ ಅವನ ಸಂತತಿ ದುರ್ಗತಿ ಯನ್ನು ಹೊಂದುತ್ತದೆ.

ಆದ್ದರಿಂದ ಪಿತೃಶಾಪವಾಗಲಿ, ದೇವತಾ ಕ್ರೋಧವಾಗಲಿ ತಟ್ಟದಂತೆ ನಮ್ಮ ಪ್ರದಾಯಕ್ಕೆ ಬಂದ ಪದ್ದತಿಗಳನ್ನು ಆಚರಿಸುವದರಿಂದ ನಮ್ಮ ಮಕ್ಕಳ ಕುಟುಂಬದ ಏಳ್ಗೆಗೆ ಕಾರಣವಾಗುತ್ತೇವೆ.

Comments are closed.