ಕರಾವಳಿ

ಉರಿ ಮೂತ್ರ ಮತ್ತು ಅಲ್ಪ ಅಂಶ ಮೂತ್ರ ಸಮಸ್ಯೆ ನಿವಾರಣೆಗೆ ಈ ಹಣ್ಣು ಸಹಕಾರಿ

Pinterest LinkedIn Tumblr

ಅನಾನಸ್ ಹಣ್ಣಿನಿಂದ ತಯಾರಿಸಿದ ಶರಬತ್ತು, ಸಾರು, ಗೊಜ್ಜು ನಾಲಿಗೆಗೆ ರುಚಿಯಾಗಿರುವುದು, ಚೆನ್ನಾಗಿ ಮಾಗಿದ ಹಣ್ಣು ಸತ್ವಶಾಲಿ ಮತ್ತು ಆರೋಗ್ಯವರ್ಧಕ, ಈ ಹಣ್ಣಿನ ರಸ ದೇಹಕ್ಕೆ ತಂಪನ್ನು ನೀಡುತ್ತದೆ, ಉತ್ತಮ ಜೀರ್ಣಕಾರಿ, ಹೊಟ್ಟೆಯಲ್ಲಾಗುವ ಉರಿ ಮತ್ತು ಸಂಕಟವನ್ನು ಶಮನ ಗೊಳಿಸುವುದು.

ಅನಾನಸ್ ಹಣ್ಣಿನ ರಸ ಗಂಟಲಿನ ರೋಗಗಳಿಗೆ ವಿಶೇಷ ಗುಣಕಾರಿ, ಬೀದಿ ಸಿಗರೇಟ್ ಸೇದುವ ದುರಭ್ಯಾಸದವರು ಈ ಹಣ್ಣನ್ನು ಕ್ರಮವಾಗಿ ಉಪಯೋಗಿಸಿದರೆ ಧೂಮಪಾನದ ದುಷ್ಪರಿಣಾಮಗಳಿಂದ ಪಾರಾಗುವ ಸಾಧ್ಯತೆಉಂಟು.

ಉರಿ ಮೂತ್ರ ಮತ್ತು ಅಲ್ಪ ಅಂಶ ಮೂತ್ರ ವಿಸರ್ಜನೆಯಾಗುವ ಸಂಧರ್ಭಗಳಲ್ಲಿ ಈ ಹಣ್ಣಿನ ರಸ ಸೇವನೆ ಇಂದ ಗುಣ ಕಂಡುಬರುವುದು.

ಕಾಮಾಲೆ ರೋಗದಿಂದ ನರಳುವವರಿಗೆ ಈ ಹಣ್ಣು ದಿವ್ಯಔಷದ, ಹಣ್ಣಿನ ಸಣ್ಣ ಸಣ್ಣ ಹೋಳುಗಳನ್ನು ಅಪ್ಪಟ ಜೇನುತುಪ್ಪದಲ್ಲಿ ನಾಲ್ಕೈದು ದಿನಗಳ ಕಾಲ ನೆನಸಿ ನಂತರ ದಿನಕ್ಕೆ ಎರಡು ಸಲಿ ಬೆಳಿಗ್ಗೆ ಮತ್ತು ಸಂಜೆ ಹೋಳುಗಳನ್ನು ಸೇವಿಸುತ್ತಿರಬೇಕು ಈಗೆ ಮಾಡಿದರೆ ಕೆಲವೇ ದಿನದಲ್ಲಿ ಗುಣ ಕಂಡುಬರುತ್ತದೆ.

ಮಕ್ಕಳಿಗೆ ಅನಾನಸ್ ಹಣ್ಣಿನ ರಸವನ್ನ ಕೊಡುವುದರಿಂದ ಜೀರ್ಣ ಶಕ್ತಿ ಹೆಚ್ಚಿ ಬಾಲವೃದ್ದಿಯಾಗುವುದು.

ಅಡುಗೆ ಉಪ್ಪು, ಕರಿಮೆಣಸು ಪುಡಿ ಸೇರಿಸಿ ಪ್ರತಿದಿನವೂ ಒಂದು ಬಟ್ಟಲು ಅನಾನಸ್ ಹಣ್ಣಿನ ರಸ ಸೇವನೆಯಿಂದ ಹೊಟ್ಟೆ ತೊಳಸುವಿಕೆ, ತಲೆಸುತ್ತು, ನೆಗಡಿ, ರಕ್ತ ಹೀನತೆ, ಮೂಲವ್ಯಾದಿ ಈ ರೋಗಗಳಲ್ಲಿ ಉತ್ತಮ ಗುಣ ಕಂಡುಬರುವುದು.

ತುರಿಕಜ್ಜಿ, ಇಸಬು, ಗಜಕರ್ಣ ಇನ್ನಿತರ ಚರ್ಮ ರೋಗಗಳಲ್ಲಿ ಈ ಹಣ್ಣಿನ ರಸವನ್ನು ಚರ್ಮ ಮೇಲೆ ಹಚ್ಚುತ್ತಾ ಬಂದರೆ ಸಾಕಷ್ಟು ಗುಣ ಕಂಡುಬರುವುದು.

ಅನಾನಸ್ ಹಣ್ಣಿನ ರಸವನ್ನು ಊಟಕ್ಕೆ ಮೊದಲು ಸೇವಿಸುವುದು ಉತ್ತಮ, ಯಾವುದೇ ಹಣ್ಣಿನ ರಸವನ್ನು ಬೆಳಗಿನ ಹೊತ್ತು ಬರಿ ಹೊಟ್ಟೆಯಲ್ಲಿ ಸೇವಿಸಿದರೆ ಅತ್ಯಧಿಕ ಪ್ರಯೋಜನ ಉಂಟು, ಆದರೆ ಚೆನ್ನಾಗಿ ಮಾಗಿದ ಹಣ್ಣಿನ ರಸ ಸೇವಿಸುದರಿಂದ ಅನಾರೋಗ್ಯ ಹೆಚ್ಚು ಎಂಬುದು ನೆನಪಿಡಿ, ಮಾಗಿದ ಹಣ್ಣಿನ ರಸ ಸೇವನೆಯಿಂದ ಗರ್ಭಿಣಿಯರಿಗೆ ಗರ್ಭಪಾತವಾಗುವುದು ಉಂಟು.

Comments are closed.