ಅಂತರಾಷ್ಟ್ರೀಯ

ಸಮುದ್ರದಲ್ಲಿ ಪತನಗೊಂಡ ಜಕಾರ್ತ ಲಯನ್ ಏರ್’ಲೈನ್ಸ್ ವಿಮಾನದ ಪೈಲಟ್ ಆಗಿದ್ದವರು ಭಾರತದ ಭಾವ್ಯೇ ಸುನೆಜಾ!

Pinterest LinkedIn Tumblr

ಜಕಾರ್ತಾ: 189 ಮಂದಿ ಪ್ರಯಾಣಿಕರಿದ್ದ ಇಂಡೋನೇಷ್ಯಾ ಲಯನ್ ಏರ್’ಲೈನ್ಸ್ ಪ್ರಯಾಣಿಕ ವಿಮಾನ ಸಮುದ್ರದಲ್ಲಿ ಪತನಗೊಂಡಿದ್ದು, ಈ ವಿಮಾನದ ಕ್ಯಾಪ್ಟನ್ ಆಗಿದ್ದವರು ಈ ವಿಮಾನದ ಪೈಲಟ್ ಭಾರತೀಯ ಮೂಲದ ಭಾವೇ ಸುನ್ಯೆಜ್ ಎಂದು ತಿಳಿದುಬಂದಿದೆ.

ಅಲ್ಲಿನ ಮಾಧ್ಯಮ ವರದಿಗಳ ಪ್ರಕಾರ ವಿಮಾನದ ಪೈಲಟ್ ನ್ನು ದೆಹಲಿ ಮೂಲದ ಭಾವ್ಯೆ ಸುನೆಜಾ ಎಂದು ಹೇಳಲಾಗುತ್ತಿದ್ದು, ಮಾರ್ಚ್​ 2011 ರಿಂದ ಲಯನ್ ಏರ್​ಲೈನ್ಸ್​ ಗೆ ಕ್ಯಾಪ್ಟನ್ ಸೇವೆ ಸಲ್ಲಿಸುತ್ತಿದ್ದರು ಎಂದು ಪತ್ರಿಕಾ ವರದಿ ಹೇಳಿದೆ. “ವಿಮಾನದ ಅವಶೇಷಗಳನ್ನು ಹುಡುಕಲಾಗುತ್ತಿದೆ. ವಿಮಾನದಲ್ಲಿದ್ದ ಪ್ರಯಾಣಿಕರ ಗತಿ ಏನಾಗಿದೆ ಎಂಬುದು ನಮಗೆ ಗೊತ್ತಿಲ್ಲ. ನಾವು ಅವರಿಗಾಗಿ ಪ್ರಾರ್ಥಿಸುತ್ತೇವೆ” ಎಂದು ರಕ್ಷಣಾ ಎಜೆನ್ಸಿಯ ವಕ್ತಾರ ಯೂಸುಫ್ ಲತೀಫ್ ತಿಳಿಸಿದ್ದಾರೆ.

ಭಾವ್ಯೇ ಸುನೆಜಾ, 2009 ರಲ್ಲಿ ಬೆಲ್ ಆರ್ ಇಂಟರ್ ನ್ಯಾಷನಲ್ ನಿಂದ ಪೈಲಟ್ ಪರವಾನಗಿ ಪಡೆದಿದ್ದರು. ಈ ಬಳಿಕ ಕೆಲವು ಕಾಲ ಎಮೆರೇಟ್ಸ್ ವಿಮಾನ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದರು. ಲೈಯನ್ ಏರ್ ಹೇಳಿಕೆಯ ಪ್ರಕಾರ ಭಾವ್ಯೆ ಸುನೇಜಾ ಒಟ್ಟಾರೆ 6,000 ವಿಮಾನ ಚಾಲನೆ ಗಂಟೆಗಳನ್ನು ಕಳೆದಿದ್ದಾರೆ.

Comments are closed.