ಕರಾವಳಿ

ಪ್ಯಾಶ್ಚರೀಕರಿಸಿದ ಹಾಲಿನ ಜೊತೆ ಯಾವ ರೀತಿಯ ಮೊಟ್ಟೆ ಸೇವಿಸಿದರೆ ಉತ್ತಮ..!

Pinterest LinkedIn Tumblr

ದಿನದ ಮೊದಲ ಆಹಾರ ಎಂದಾಕ್ಷಣ ಮೊದಲು ಹೊಳೆಯುವುದು ಒಂದು ಮೊಟ್ಟೆ ಮತ್ತು ಒಂದು ಲೋಟ ಹಾಲು. ಯಾಕೆಂದರೆ ಅತಿ ಸುಲಭವಾಗಿ ಅತೀ ಬೇಗನೆ ತಯಾರಿಸಬಹುದಾದ ಲಘು ಆಹಾರ ಇದು. ಆದರೆ ಮೊಟ್ಟೆ ಮತ್ತು ಹಾಲು ಜೊತೆಗೆ ಸೇವನೆ ಮಾಡುವುದು ಆರೋಗ್ಯಕ್ಕೆ ಎಷ್ಟು ಉತ್ತಮ? ಇದರಿಂದ ಆರೋಗ್ಯಕ್ಕೆ ಹಾನಿಯಾಗಬಹುದಾ? ಈ ಎಲ್ಲಾ ಕುತೂಹಲಗಳಿಗೆ ಉತ್ತರ ಕಂಡುಕೊಳ್ಳೋಣ ಬನ್ನಿ;

ಆಯುರ್ವೇದದ ಪ್ರಕಾರ ನಮ್ಮ ಉದರದ ಹಲವು ಸಮಸ್ಯೆಗಳಿಗೆ ಕಾರಣ ನಾವು ಜೊತೆ ಸೇರಿಸಿ ತಿನ್ನುವ ಆಹಾರಗಳು, ಯಾವುದನ್ನು ಯಾವುದರ ಜೊತೆಗೆ ತಿನ್ನಬೇಕು ಎಂಬ ಅರಿವಿಲ್ಲದೆ ಇರುವುದು. ಈ ರೀತಿಯ ಸೇವನೆಯಿಂದ ಅಜೀರ್ಣದ ಸಮಸ್ಯೆ, ಹೊಟ್ಟೆಯಲ್ಲಿ ವಾಯು ಉತ್ಪಾದನೆ ಮುಂತಾದ ಸಮಸ್ಯೆಗಳು ಉಂಟಾಗುತ್ತವೆ. ಇವುಗಳಿಗೆ ಕಾರಣವಾಗುವ ಪ್ರಮುಖ ಆಹಾರ ಸಂಯೋಜನೆ ‘ಹಾಲು ಮತ್ತು ಮೊಟ್ಟೆ’.

ಮೊಟ್ಟೆಯಲ್ಲಿ ಪ್ರೋಟೀನ್, ಅಮೈನೋ ಆಮ್ಲಗಳು ಮತ್ತು ಒಳ್ಳೆಯ ಕೊಬ್ಬು ಹೇರಳವಾಗಿದ್ದರೆ ಹಾಲಿನಲ್ಲಿ ಪ್ರೋಟೀನ್ ಮತ್ತು ಕ್ಯಾಲ್ಶಿಯಂ ಶ್ರೀಮಂತವಾಗಿದೆ. ಹಾಗಾಗಿ ಮೊಟ್ಟೆ ಮತ್ತು ಹಾಲು ದೇಹಕ್ಕೆ ಅಗತ್ಯವಾದ ಪ್ರೋಟೀನ್ ಗಳನ್ನು ಒದಗಿಸುತ್ತದೆ. ಹಸಿ ಮೊಟ್ಟೆಯನ್ನು ನೇರವಾಗಿ ಸೇವಿಸುವುದರಿಂದ ಬ್ಯಾಕ್ಟೀರಿಯಾ ಸೋಂಕು, ಆಹಾರ ನಂಜಾಗುವುದು ಮತ್ತು ಮೊಟ್ಟೆಯಿಂದ ಸಿಗುವ ವಿಟಮಿನ್ ‘ಬಿ’ ಪೋಷಕಾಂಶಗಳ ಕೊರತೆ ಉಂಟಾಗಬಹುದು. ಪ್ಯಾಶ್ಚರೀಕರಿಸಿದ ಹಾಲಿನ ಜೊತೆ ಹಸಿ ಮೊಟ್ಟೆಯನ್ನು ಸೇರಿಸಿ ಕುಡಿಯುವುದು ಸುರಕ್ಷಿತ ವಿಧಾನ.

‘ಬೇಯಿಸಿದ ಮೊಟ್ಟೆ ಮತ್ತು ಹಾಲು ಜೊತೆಗೆ ಸೇವನೆ ಮಾಡುವುದರಿಂದ ಯಾವುದೇ ಸಮಸ್ಯೆಯಿಲ್ಲ, ಇದನ್ನು ದಿನದ ಯಾವ ಸಮಯದಲ್ಲಿ ಬೇಕಾದರೂ ತಿನ್ನಬಹುದು. ಆದರೆ ಹಸಿ ಮೊಟ್ಟೆ ಸೇವನೆ ಅಷ್ಟು ಒಳ್ಳೆಯದಲ್ಲ. ದೈಹಿಕ ಕಸರತ್ತು ಮಾಡುವವರು, ಬಾಡಿ ಬಿಲ್ಡರ್ಸ್ ಗಳು ತಮ್ಮ ಮಾಂಸಖಂಡಗಳನ್ನು ಬೆಳೆಸಲು ದಿನಕ್ಕೆ 4 – 5 ಹಸಿ ಮೊಟ್ಟೆಗಳನ್ನು ತಿನ್ನುತ್ತಾರೆ. ಆದರೆ ಅವರು ಬೇರೆ ವಿಧಾನದಲ್ಲಿ ಆಹಾರದ ಸಮತೋಲನವನ್ನೂ ಮಾಡುತ್ತಾರೆ.

ಯಾಕೆಂದರೆ ಹಸಿ ಮೊಟ್ಟೆಯಲ್ಲಿ ಅಧಿಕ ಪ್ರಮಾಣದಲ್ಲಿರುವ ಕೊಬ್ಬು ಹೃದಯದ ಸಮಸ್ಯೆಗಳನ್ನು ತಂದೊಡ್ಡುತ್ತದೆ ಎನ್ನುವ ಅರಿವೂ ಅವರಿಗಿರುತ್ತದೆ. ಬೇಯಿಸಿದ ಮೊಟ್ಟೆ ಮತ್ತು ಹಾಲಿನಲ್ಲಿ ಸಿಗುವ ಪ್ರೋಟೀನ್ ನಮ್ಮ ದೇಹಕ್ಕೆ ಇಡೀ ದಿನಕ್ಕೆ ಬೇಕಾಗಿರುವ ಶಕ್ತಿಯನ್ನು ಒದಗಿಸುತ್ತದೆ. ಹಾಗೆಯೇ ಬೇಯಿಸಿದ ಮೊಟ್ಟೆಯಿಂದ ಬ್ಯಾಕ್ಟೀರಿಯಾ ಸೋಕು ಅಥವಾ ಇನ್ನಿತರ ಸಮಸ್ಯೆಗಳು ಬರುವ ಸಾಧ್ಯತೆ ಬಹಳಷ್ಟು ಕಡಿಮೆ’.

ಆದರೆ ಮೊಟ್ಟೆ ಮತ್ತು ಹಾಲು ಜೊತೆ ಸೇರಿಸಿ ತಿಂದ ನಂತರ ನಿಮಗೇನಾದರೂ ಹೊಟ್ಟೆಯಲ್ಲಿ ಸಮಸ್ಯೆ ಕಂಡುಬಂದರೆ ತಕ್ಷಣ ಇದನ್ನು ತಿನ್ನುವುದನ್ನು ನಿಲ್ಲಿಸಿಬಿಡಿ. ನಿಮ್ಮ ದೇಹ ಪ್ರಕೃತಿಗೆ ಯಾವ ಆಹಾರ ಸಂಯೋಜನೆ ಉತ್ತಮ ಎಂದು ಅರಿತುಕೊಳ್ಳುವುದು ಅತ್ಯಗತ್ಯ.

Comments are closed.