ಕರಾವಳಿ

ಆರೋಗ್ಯಕರ ಕಣ್ಣಿಗಾಗಿ ಕೆಲವೊಂದು ಆಹಾರ ಪದಾರ್ಥ ಸರಳ ಟಿಪ್ಸ್.

Pinterest LinkedIn Tumblr

ಇಡೀ ದೇಹದ ಆರೋಗ್ಯ ಕಣ್ಣಿನ ಮೂಲಕ ತಿಳಿಯುತ್ತದೆ ಎಂದು ವೈದ್ಯರು ಹೇಳುತ್ತಾರೆ. ಇದೇ ಕಾರಣಕ್ಕೆ ಅನಾರೋಗ್ಯದ ಕಾರಣಕ್ಕೆ ಆಸ್ಪತ್ರೆಗೆ ಹೋದಾಗ ವೈದ್ಯರು ನಾಲಿಗೆ, ಕಣ್ಣಿನ ಕೆಳಭಾಗವನ್ನು ಪರೀಕ್ಷಿಸುತ್ತಾರೆ. ನಮ್ಮ ಆರೋಗ್ಯದ ಪರಿಸ್ಥಿತಿಗಳು ಕಣ್ಣು ಹಾಗೂ ನಾಲಿಗೆಯಲ್ಲಿ ವ್ಯಕ್ತವಾಗುತ್ತದೆ ಎನ್ನುತ್ತಾರೆ ವಿಜ್ಞಾನಿಗಳು. ಕಣ್ಣು ಆರೋಗ್ಯಕರವಾಗಿರಬೇಕು ಎಂದರೆ ನಾವು ಸೇವಿಸುವ ಆಹಾರ ಪದಾರ್ಥಗಳಲ್ಲಿ ಹೆಚ್ಚಿನ ನಿಗಾವಹಿಸಬೇಕು. ದೇಹದ ಆರೋಗ್ಯದ ಕನ್ನಡಿಯಂತಿರುವ ಕಣ್ಣಿನ ಆರೋಗ್ಯವೂ ಕೂಡ ಪ್ರಮುಖ. ಹೊಳಪು ಕಣ್ಣುಗಳನ್ನು ಪಡೆಯಬೇಕು ಎಂಬುದು ಪ್ರತಿಯೊಬ್ಬರ ಬಯಕೆ. ಹೀಗಾಗಿ ಆರೋಗ್ಯಕರ ಕಣ್ಣು ಪಡೆಯಲು ಇಲ್ಲಿದೆ ಕೆಲವೊಂದು ಸರಳ ಟಿಪ್ಸ್.

ಆರೋಗ್ಯಕರ ಕಣ್ಣಿಗಾಗಿ ಆಹಾರ ಪದಾರ್ಥಗಳು
ಮಾನವರ ದೇಹಕ್ಕೆ ಹೆಚ್ಚಿನ ನೀರಿನ ಅವಶ್ಯಕತೆ ಇದೆ. ಯಥೇಚ್ಛ ನೀರು ಕುಡಿಯುವುದರಿಂದ ದೇಹ ಮಾತ್ರವಲ್ಲ ಕಣ್ಣು ಕೂಡ ಆರೋಗ್ಯಕರವಾಗಿ ಇರುತ್ತದೆ. ಇದರಿಂದ ಡಾರ್ಕ್ ಸರ್ಕಲ್ ಕೂಡ ದೂರವಾಗುತ್ತದೆ. ಹೀಗಾಗಿ ಜ್ಯೂಸ್, ಎಳೆನೀರು ಹಾಗೂ ದೇಹವನ್ನು ತಂಪಾಗಿಸುವ ಆಹಾರ ಪದಾರ್ಥಗಳನ್ನು ಸೇವಿಸುವುದು ಉತ್ತಮ.ಕ್ಯಾರೆಟ್ ಸೇವನೆ ಕೂಡ ಕಣ್ಣಿನ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.ಚರ್ಮ ಹಾಗೂ ತ್ವಜೆಯ ಆರೋಗ್ಯ ಕಾಪಾಡುವಲ್ಲಿ ಕ್ಯಾರೆಟ್ ಅತ್ಯುತ್ತಮ ಎನ್ನುತ್ತಾರೆ ವೈದ್ಯರು.

ಕಣ್ಣು ನವೆಯಾದಂತೆ ಅಥವ ಉರಿಯುತ್ತಿದೆ ಎಂದು ಭಾಸವಾದರೆ, ಶುದ್ಧವಾದ ತಣ್ಣೀರಿನಿಂದ ಕಣ್ಣನ್ನು ಸ್ವಚ್ಛ ಮಾಡಿ, ಐದು ನಿಮಿಷಗಳಕಾಲ ಕಣ್ಣು ಮುಚ್ಚಿ ರಿಲ್ಯಾಕ್ಸ್ ಆಗಿ. ಇದರಿಂದ ಕಣ್ಣಿಗೆ ವಿಶ್ರಾಂತಿ ದೊರೆಯುತ್ತದೆ.ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ ಗಳಾಗಿದ್ದರೆ, ಆಲೂಗಡ್ಡೆ ಅಥವ ಸೌತೆಕಾಯಿಯನ್ನು ಕಣ್ಣಿನ ಮೇಲೆ ಇಟ್ಟು 20 ನಿಮಿಷಗಳ ಬಳಿಕ ತೆಗೆಯಿರಿ. ಇದರಿಂದ ಕಣ್ಣಿನ ಆಯಾಸ ಕಡಿಮೆಯಾಗಿ, ಆರಾಮವಾಗುತ್ತದೆ. ಇದು ಡಾರ್ಕ್ ಸರ್ಕಲ್ ನಿಂದ ಮುಕ್ತಿ ನೀಡುತ್ತದೆ.

ರಾತ್ರಿ ಮಲಗುವ ಮುನ್ನ ಕಣ್ಣಿನ ಸುತ್ತ ಬಾದಾಮ್ ಎಣ್ಣೆ ಅಥವ ಹರಳೆಣ್ಣೆಯನ್ನು ನಿಧಾನಕ್ಕೆ ಮಸಾಜ್ ಮಾಡಿಕೊಳ್ಳಿ. ಇದು ಕಣ್ಣಿನ ರೆಪ್ಪೆಗೂ ಉತ್ತಮ ಹಾಗೂ ಕಣ್ಣಿನ ಸುತ್ತಲಿನ ನರವ್ಯೂಹಗಳು ರಿಲ್ಯಾಕ್ಸ್ ಆಗಲು ಅನುಕೂಲವಾಗುತ್ತದೆ.

Comments are closed.