ಕರಾವಳಿ

ಮಕ್ಕಳ ಉತ್ತಮ ಬೆಳವಣಿಗೆಗಾಗಿ ಅವರು ಮಾಡುವ ಈ ಕೆಲಸವನ್ನು ತಡೆಯಬೇಡಿ….!

Pinterest LinkedIn Tumblr

ಕೆಲವು ವರ್ಷಗಳ ಹಿಂದೆ ಮಕ್ಕಳಿಗೆ ಆಟದ ಮೈದಾನದಿಂದ ಅಥವಾ ಗೆಳೆಯರ ಜೊತೆ ಆಟ ಆಡುವಾಗ ಮನೆಗೆ ಕರೆದುಕೊಂಡು ಬರುವುದು ಕಷ್ಟವಾಗಿತ್ತು. ಆದರೆ ಈಗ ಮಕ್ಕಳಿಗೆ ಆಟ ಆಡಲು ಮನೆಯಿಂದ ಹೊರಗೆ ಕಳಿಸುವುದೇ ಕಷ್ಟದ ಕೆಲಸವಾಗಿದೆ. ಎಲ್ಲಾ ಆಧುನಿಕ ಟೆಕ್ನಾಲಜಿಯ ಪರಿಣಾಮದಿಂದಾಗಿ. ಕೈಯಲ್ಲಿ ಮೊಬೈಲ್​​ ಫೋನ್​​ ಅಥವ ಟಿವಿ ಇದ್ದರೆ ಸಾಕು ಅದೇ ಪ್ರಪಂಚವೆಂಬಂತೆ ಬಾವಿಯೊಳಗಿನ ಕಪ್ಪೆಯ ಹಾಗೆ ಮಕ್ಕಳು ಇಷ್ಟಕ್ಕೆ ಸೀಮಿತವಾಗಿದ್ದಾರೆ.

ಹಿಂದಿನ ದಿನಗಳಲ್ಲಿ ಪೋಷಕರು ಮಕ್ಕಳ ಮೇಲೆ ಅಷ್ಟೊಂದು ನಿರ್ಬಂಧಗಳನ್ನು ಹೇರುತ್ತಿರಲಿಲ್ಲ, ಮೊಬೈಲ್​​ ಇರಲಿಲ್ಲ, ಟಿವಿ ಇರಲಿಲ್ಲ ಆದರೆ ಇತ್ತೀಚಿನ ದಿನಗಳಲ್ಲಿ ತಂದೆ ತಾಯಂದಿರು ಮಕ್ಕಳನ್ನು ತುಂಬಾ ಕಾಳಜಿಯಿಂದ ನೋಡಿಕೊಳ್ಳುತ್ತರಾದರು ಮಕ್ಕಳ ಉತ್ತಮ ಬೆಳವಣಿಗೆಗೆ ಬೇಕಾದ ಆಟಗಳ ಬಗ್ಗೆಯೂ ಗಮನ ಹರಿಸುವುದು ಪ್ರಮುಖವಾಗಿದೆ.

1. ಆಟದ ಸಮಯವೆಂಬುದು ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ಮನರಂಜನೆಯ ಮೂಲವಾಗಿದೆ. ಇದು ದಟ್ಟಗಾಲಿಡುವ ಮಕ್ಕಳಿಗೆ ಸಾಮಾಜಿಕ ಕೌಶಲ್ಯಗಳನ್ನು, ಗಮನ ಕೇಂದ್ರಿಕರಿಸುವುದನ್ನು ಮತ್ತು ಕಲ್ಪನೆಯನ್ನು ಮಾಡಿಕೊಳ್ಳುವುದು ಹೇಗೆ ಎಂದು ಕಲಿಸುತ್ತದೆ.
2. ನಿಮ್ಮ ಮಗುವಿನ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲು ಆಟದ ಸಮಯದ ಜೊತೆಗೆ ಉತ್ತಮ ಆಟಿಕೆಗಳನ್ನು ಒದಗಿಸುವುದು ಮುಖ್ಯವಾಗಿದೆ.
3. ನಿಮ್ಮ ಮಗುವು ಮುಕ್ತವಾಗಿ, ಯಾವುದೇ ಅಪಾಯವಾಗದಂತೆ ಆಟವಾಡಲು ಮತ್ತು ನೀವು ಸುಲಭವಾಗಿ ನಿಮ್ಮ ಮಗುವಿನ ಮೇಲೆ ಕಣ್ಣಿಡಲು ಸಾಧ್ಯವಾಗುವಂತಹ ಸುರಕ್ಷಿತವಾದ ಜಾಗವನ್ನು ರಚಿಸಿ.
4. ಸರಳ ಆಟಿಕೆಗಳು ಸಹ ನಿಮ್ಮ ಮಗುವಿನ ಕಲ್ಪನೆ ಹೆಚ್ಚಿಸಿ ಅದ್ಭುತವನ್ನು ಮಾಡುತ್ತವೆ. ಉದಾಹರಣೆಗೆ: ಬ್ಲಾಕ್​​​ಗಳು, ಕ್ರೆಯೋನ್ಸ್​​​​​​​ಗಳು, ಛಾಯಚಿತ್ರ ಫಲಕಗಳು, ಚಿಕ್ಕ ಮಡಕೆಗಳು ಮತ್ತು ಪ್ಯಾನ್​​​ಗಳು.
5. ಹಾಗೆಯೇ ಮಕ್ಕಳ ಜೊತೆಗೆ ಗ್ರಂಥಾಲಯಕ್ಕೆ ಹೋಗಿ ಕಥೆ ಓದುವ ಹಾಗೂ ಪ್ರವಾಸ ಹೋಗುವಂತಹ ಮೆಯ ಹೊರಗಿನ ಚಟುವಟಿಕೆಗಳನ್ನೂ ಮರೆಯಬೇಡಿ.

Comments are closed.