ಕರಾವಳಿ

ಎರಡು ಹೊತ್ತು ಬ್ರಶ್ ಮಾಡಿದ ಮೇಲು ಬಾಯಿ ದುರ್ವಾಸನೆ ಬರಲು ಕಾರಣ ಬಲ್ಲಿರಾ….?

Pinterest LinkedIn Tumblr

ನಾವು ತಿನ್ನುವ ಪ್ರತಿ ಆಹಾರ ಕಣಗಳು ಉಸಿರಿನ ವಾಸನೆಗೆ ಕಾರಣವಾಗುತ್ತವೆ. ಮುಖ್ಯವಾಗಿ ಹಲ್ಲಿನ ಸ್ವಚ್ಛತೆಯಷ್ಟೆ ನಾಲಿಗೆಯನ್ನೂ ಸ್ವಚ್ಛ ಮಾಡಬೇಕು. ಬಹಳಷ್ಟು ಜನರಿಗೆ ಇದರ ಬಗ್ಗೆ ತಿಳಿವಳಿಕೆ ಇಲ್ಲ. ನಾಲಿಗೆ ಮತ್ತು ಹಲ್ಲಿನ ಮೇಲ್ಪದರದಲ್ಲಿ ಜೊಲ್ಲು ಮತ್ತು ಆಹಾರ ಕಣದ ಮಿಶ್ರಣದ ಉಳಿಕೆಯಿಂದ ಬ್ಯಾಕ್ಟೀರಿಯದಂತಹ ಜೀವಕಣಗಳು ಬಿಳಿಯ ಪದರವನ್ನು ಸೃಷ್ಟಿಸುತ್ತವೆ. ಇದನ್ನು ‘ಪ್ಲ್ಯಾಕ್’ ಎನ್ನುತ್ತೇವೆ.ಈ ಪ್ಲ್ಯಾಕ್‌ನ ಪದರ ಹೆಚ್ಚಾದಷ್ಟೂ ತೊಂದರೆ. ಲಾಲಾರಸದ ಕೊರತೆ ಇದ್ದಾಗ ಇದು ಮತ್ತಷ್ಟು ವೇಗವಾಗಿ ಹಲ್ಲುಗಳ ಮಧ್ಯೆ ಸಂಗ್ರಹವಾಗಿ ಗಂಧಕಾಂಶ (ಸಲ್ಫರ್) ಅನಿಲ ಬಿಡುಗಡೆಯಾಗಿ ದುರ್ವಾಸನೆಗೆ ಕಾರಣವಾಗುತ್ತದೆ.

ಮುಖ್ಯವಾಗಿ ಸರಿಯಾದ ಸಮಯಕ್ಕೆ ಬ್ರಷ್ ಮಾಡದಿರುವುದು.8-10 ಗಂಟೆಗಳ ಕಾಲ ಉಪವಾಸ ಇರುವುದು.ಲಾಲಾರಸದ ಸ್ರವಿಸುವಿಕೆ ಕಡಿಮೆ ಇರುವುದು.ಸತತವಾಗಿ ಮಾತನಾಡುವುದು.3-4 ಗಂಟೆಗಳವರೆಗೂ ನೀರು ಸೇವಿಸದಿರುವುದು.ಧೂಮಪಾನ, ಮದ್ಯಪಾನ, ಪಾನ್ ಗುಟ್ಕಾ, ತಂಬಾಕು ಸೇವನೆ,ಹುಳುಕು ಹಲ್ಲುಗಳು,ವಸಡಿನಲ್ಲಿ ರಕ್ತಸ್ರಾವ, ಹಲ್ಲಿನ ಸುತ್ತ ಕಟ್ಟಿರುವ ಕೊಳೆ, ಗಾರೆ.ಗ್ಯಾಸ್ಟ್ರಿಕ್ ಸಮಸ್ಯೆ, ಕರುಳಿನ ಸೋಂಕು, ಶ್ವಾಸಮಾರ್ಗದ ಸೋಂಕು, ಸತತ ಔಷಧ ಸೇವನೆ, ಮಧುಮೇಹ.ಬೆರಳಿನಿಂದ ಹಲ್ಲು ಉಜ್ಜುವುದು, ರಂಗೋಲೆ ಹಿಟ್ಟು, ಇದ್ದಿಲು ಪುಡಿಗಳಿಂದ ಹಲ್ಲುಜ್ಜುವುದು

ಕೆಟ್ಟುಹೋದ ಕೊಳೆತ ಹಣ್ಣಿನ ವಾಸನೆ -ಮಧುಮೇಹಿಗಳಲ್ಲಿ
ಕೊಳೆತ ಮೊಟ್ಟೆ ವಾಸನೆ -ಸರಿಯಾಗಿ ಸ್ವಚ್ಛತೆ ಇರದಿದ್ದಲ್ಲಿ
ಕೊಳೆತ ಮೀನಿನ ವಾಸನೆ -ಕಿಡ್ನಿ ಸೋಂಕಿತರಲ್ಲಿ
ಸತ್ತ ಇಲಿಯ ವಾಸನೆ -ಶ್ವಾಸ ಮಾರ್ಗದ ಸೋಂಕು
ಮಲದ ವಾಸನೆ -ದೀರ್ಘಕಾಲದ ದುರ್ವಾಸನೆ

ನಿಯಮಿತವಾಗಿ ದಂತ ವೈದ್ಯರಿಂದ ಕ್ರಮಬದ್ಧವಾಗಿ ಹಲ್ಲಿನ ಸ್ವಚ್ಛತೆ ಮಾಡಿಸಿಕೊಳ್ಳುವುದು.ದಿನಕ್ಕೆರಡು ಬಾರಿ ಹಲ್ಲು, ನಾಲಿಗೆ ಸ್ವಚ್ಛತೆ,ದಂತ ದಾರದಿಂದ ಹಲ್ಲಿನ ಸ್ವಚ್ಛತೆ.ಜೊಲ್ಲು ರಸದ ಕೊರತೆಗೆ ಚಿಕಿತ್ಸೆ ಕಾಫಿ, ಟೀ, ಸೇವನೆ ನಂತರ ಬಾಯನ್ನು ನೀರಿನಿಂದ ಮುಕ್ಕಳಿಸಬೇಕು. ಆಗಾಗ ನೀರು ಕುಡಿಯುತ್ತಿರಬೇಕು.ಮೂರು ತಿಂಗಳಿಗೊಮ್ಮೆ ಟೂಥ್ ಬ್ರಷ್ ಬದಲಿಸಬೇಕು.

ಗ್ಯಾಸ್ಟ್ರಿಕ್ ಸಮಸ್ಯೆಗೆ ವೈದ್ಯರಿಂದ ಪರಿಹಾರ ಪಡೆಯಬೇಕು.ನಾಲಿಗೆಯನ್ನು ಬೆರಳಿನಿಂದ, ಬ್ರಷ್‌ನಿಂದ ಸ್ವಚ್ಛಗೊಳಿಸಬೇಕು.ಚಟಗಳಿಗೆ ವಿದಾಯ ಹೇಳಬೇಕು.ಈರುಳ್ಳಿ, ಬೆಳ್ಳುಳ್ಳಿಯಂತಹ ವಸ್ತುಗಳನ್ನು ಹಸಿಯಾಗಿ ಸೇವಿಸಿದಲ್ಲಿ ಹಲ್ಲುಜ್ಜಬೇಕು.

ಊಟದ ನಂತರ ಏಲಕ್ಕಿಚೂರು, ಲವಂಗ, ತುಳಸಿ ಎಲೆ ತಿನ್ನಬೇಕು.ನಿಮ್ಮ ಕೈ ಅಥವಾ ಒಂದು ಬಟ್ಟೆ ನಿಮ್ಮ ಬಾಯಿ ಮುಂದೆ ಇಟ್ಟು ಜೋರಾಗಿ ಉಸಿರಾಡಿ ನಿಮ್ಮ ಕೈಹಿಂಭಾಗಕ್ಕೆ (ಅಂಗೈ ಹಿಂಬದಿ) ಜೊಲ್ಲು ಹಚ್ಚಿ, 1-2 ನಿಮಿಷ ಬಿಟ್ಟು ನಂತರ ಮೂಸಿನೋಡಿ.

ವಾಸನೆ ಬಂದರೆ ದುರ್ವಾಸನೆ ಇದೆ ಎಂದು ಅರ್ಥ.ಅಡಿಕೆ ಚೀಟಿ, ಮಿಂಟ್, ಮೌತ್‌ವಾಶ್, ಬಳಸದಿರಿ, ಬಳಸಿದರೂ ಅದರ ಪರಿಹಾರ ತಾತ್ಕಾಲಿಕವಷ್ಟೆ.ಹಳದಿ ಹಲ್ಲುಗಳಿಗೂ ವಾಸನೆಗೂ ಸಂಬಂಧವಿಲ್ಲ, ಬಿಳಿಯ ಹಲ್ಲುಗಳೇ ಕೊಳೆ ಕಟ್ಟಿಕೊಂಡು ಹಳದಿಯಾಗಿರುತ್ತದೆ. ಇದಕ್ಕೆ ವೈದ್ಯರಿಂದ ಚಿಕಿತ್ಸೆ ಪಡೆಯಬೇಕು.
ದುರ್ವಾಸನೆಗೆ ಸ್ವಯಂ ಚಿಕಿತ್ಸೆ ಮಾಡದಿರಿ.

Comments are closed.