ಕರಾವಳಿ

ಹೈಡ್ರೋಜನ್ ಗಾಳಿ ತುಂಬಿದ ಬಲೂನ್ಸ್‌ನಿಂದ ಅಪಾಯ ಕಟ್ಟಿಟ ಬುತ್ತಿ….ಗೋತ್ತೆ..?

Pinterest LinkedIn Tumblr

ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಎಂದರೆ ಯಾರಿಗೇ ಆಗಲಿ ಖುಷಿಯಾಗುತ್ತದೆ. ಮುಖ್ಯವಾಗಿ ಸ್ನೇಹಿತರು ಒಂದು ಕಡೆ ಸೇರಿದಾಗ ಯಾರ ಹುಟ್ಟುಹಬ್ಬವಾದರೂ ಬಂದರೆ ಸೆಲೆಬ್ರೇಟ್ ಮಾಡಿಕೊಳ್ಳದೆ ಇರಲ್ಲ ಅಲ್ಲವೇ. ಮೊದಲು ಒಂದು ಪ್ಲೇಸ್ ಆಯ್ಕೆ ಮಾಡಿಕೊಳ್ಳುತ್ತಾರೆ. ಡೆಕೋರೇಷನ್ ಮಾಡುತ್ತಾರೆ. ಕೇಕ್ ಕಟ್ ಮಾಡುತ್ತಾರೆ. ಕೊನೆಗೆ ಪಾರ್ಟಿ ಊಟ ಮಾಡುತ್ತಾರೆ. ಡ್ಯಾನ್ಸ್‌‍ಗಳನ್ನು ಮಾಡುತ್ತಾ ಬರ್ತ್ ಡೇ ಸಂಭ್ರಮ ಆಚರಿಸಿಕೊಳ್ಳುತ್ತಾರೆ. ಅದೆಲ್ಲಾ ಚೆನ್ನಾಗಿಯೇ ಇರುತ್ತದೆ. ಆದರೆ ಹುಟ್ಟುಹಬ್ಬದ ಪಾರ್ಟಿಯಲ್ಲಿ ಏನಾದರೂ ಅಚಾನಕ್ ಘಟನೆ ನಡೆದರೆ..? ಆಗ ಸಂಭ್ರಮ ಹೋಗಿ ವಿಷಾದನೀಯ ಘಟನೆ ನಡೆಯುತ್ತದೆ.

https://www.youtube.com/watch?v=_OVAWIWWbn8

ಮೇಲಿನ ವಿಡಿಯೋ ನೋಡಿದಿರಲ್ಲವೇ. ಇದರಲ್ಲಿ ಓರ್ವ ಯುವತಿ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡಳು. ಸ್ನೇಹಿತರ ನಡುವೆ ಹ್ಯಾಪಿಯಾಗಿ ಕೇಟ್ ಕಟ್ ಮಾಡಿದಳು. ಆದರೆ ಅಷ್ಟರಲ್ಲೇ ಅಗ್ನಿ ಅವಘಡ ಸಂಭವಿಸಿತು. ಆಕೆ ಕ್ಯಾಂಡಲ್ ಹೊತ್ತಿಸಿದ ಕೂಡಲೆ ಆ ಉರಿಯ ಮೇಲೇ ಇರುವ ಬಲೂನ್ಸ್‌ಗೆ ತಾಕಿತು. ಇದರಿಂದ ಬಲೂನ್ಸ್ ಹೊಡೆದುಹೋದವು. ಆದರೆ ಅವು ಸಾಮಾನ್ಯ ಬಲೂನ್ಸ್ ಆದರೆ ಏನೂ ಆಗಲ್ಲ. ಆದರೆ ಅವು ಹೈಡ್ರೋಜನ್ ಗಾಳಿ ತುಂಬಿದ ಬಲೂನ್ಸ್. ಇದರಿಂದ ಅವುಗಳಲ್ಲಿ ಇರುವ ಗಾಳಿ ಬೆಂಕಿಗೆ ತಾಕಿ ಆ ಬೆಂಕಿ ಇನ್ನಷ್ಟು ಹೆಚ್ಚಾಯಿತು. ಒಮ್ಮೆಲೆ ಬಲೂನ್ ಹೊಡೆದ ಕಾರಣ ಭಾರಿ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿತು.

ಆ ರೀತಿ ಬೆಂಕಿ ಬರುವ ಹೊತ್ತಿಗೆ ಬರ್ತ್ ಡೇ ಆಚರಿಸಿಕೊಳ್ಳುತ್ತಿರುವ ಆ ಯುವತಿ ಗಾಯಗಳ ಪಾಲಾದರು. ಫೋಟೋಗಳಲ್ಲಿ ಆಕೆಯನ್ನು ನೋಡಬಹುದು. ಆದಕಾರಣ ಯಾರೇ ಆಗಲಿ ಬರ್ತ್ ಡೇ ಆಚರಿಸಿಕೊಳ್ಳಿ. ಆದರೆ ಹೈಡ್ರೋಜನ್ ಬಲೂನ್ಸನ್ನು ಬಳಸುವ ಮೊದಲು ಎಚ್ಚರ ವಹಿಸಿ. ಇಲ್ಲದಿದ್ದರೆ ಜೀವಕ್ಕೇ ಅಪಾಯ ತಪ್ಪಿದ್ದಲ್ಲ. ಅದೇ ರೀತಿ ಹುಟ್ಟುಹಬ್ಬ ಸಂದರ್ಭದಲ್ಲಿ ಒಬ್ಬರ ಮೇಲೆ ಒಬ್ಬರು ಹಾಕಿಕೊಳ್ಳುವ ಸ್ಪ್ರೇಗಳಿಂದ ಸಹ ಬೆಂಕಿಯಿಂದ ದೂರ ಇಡಿ. ಇಲ್ಲದಿದ್ದರೆ ಅವು ಸಹ ಬೆಂಕಿಯನ್ನು ಶೀಘ್ರವಾಗಿ ಗ್ರಹಿಸಿ ಅಗ್ನಿ ಅವಘಡಕ್ಕೆ ಕಾರಣವಾಗುತ್ತದೆ. ಆದಕಾರಣ ಈ ಎರಡು ವಸ್ತುಗಳ ಬಗ್ಗೆ ಎಚ್ಚರದಿಂದ ಇರಿ..!

Comments are closed.