ಕರಾವಳಿ

ಸಣ್ಣ ಮಗುವಿಗೆ ಪ್ರತಿನಿತ್ಯ ಸ್ನಾನ ಮಾಡಿಸುವುದು ಒಳ್ಳೆದೋ,ಕೆಟ್ಟದೋ..?

Pinterest LinkedIn Tumblr

ಅವಾಗ ತಾನೇ ಸ್ನಾನ ಮಾಡಿಸಿ, ತಾಜಾತನದಿಂದ ಕೂಡಿದ ಮಗುವಿಗಿಂತ ಮಧುರ ಸುಗಂಧ ಸೂಸುವ ಮತ್ತೊಂದು ವಸ್ತುವಿಲ್ಲ. ಸ್ನಾನ ಮಾಡಿಸಿದ ನಂತರವೂ, ಮಗುವು ಟವೆಲ್ ಒಳಗೆ ಅವಿತು ಮಲಗಿಕೊಂಡಾಗ, ತಬ್ಬಿ ಮುದ್ದಾಡಬೇಕು ಎಂದು ಅನಿಸದೇ ಇರದು. ಇದು ಅಮ್ಮ-ಮಗುವಿನ ಸಂಬಂಧವನ್ನ ಗಟ್ಟಿ ಮಾಡಿಸಲಿಕ್ಕೆ ತುಂಬಾ ಸಹಕಾರಿ ಆಗುವಂತದ್ದು. ಆದರೆ, ಇಲ್ಲಾಗುವ ಒಂದು ತೊಂದರೆ ಎಂದರೆ, ಅದು ಕೆಲವೊಮ್ಮೆ ನಿಮ್ಮ ಮಗುವಿಗೆ ಪ್ರತಿನಿತ್ಯ ಸ್ನಾನ ಮಾಡಿಸುವುದು ಒಳಿತನ್ನ ಮಾಡುವುದಿಲ್ಲ. ಹಾಗಿದ್ದರೆ, ನಿಮ್ಮ ಮಗುವಿಗೆ ಕಡಿಮೆ ಸ್ನಾನ ಮಾಡಬೇಕು ಎಂದು ಸೂಚಿಸುವ ಲಕ್ಷಣಗಳು ಯಾವುದು?

ಹೌದು, ಬಹುತೇಕ ಪ್ರಕರಣಗಳಲ್ಲಿ ಸ್ನಾನ ಮಾಡಿಸುವುದು ಯಾವುದೇ ತೊಂದರೆಯನ್ನ ಉಂಟು ಮಾಡುವುದಿಲ್ಲ. ಆದರೆ ನೀವು ಕೆಲವೊಂದು ಲಕ್ಷಣಗಳ ಮೇಲೆ ಕಣ್ಣಿಡಲೇ ಬೇಕು. ಒಂದು ವೇಳೆ ಇಲ್ಲಿ ನಾವು ತಿಳಿಸಿರುವ ಈ ಲಕ್ಷಣಗಳು ನಿಮಗೆ ಕಾಣಿಸಿಕೊಂಡರೆ, ನೀವು ಸ್ನಾನ ಮಾಡಿಸುವುದನ್ನ ಕಡಿಮೆ ಮಾಡಬೇಕು.

೧. ಅವರ ದೇಹದ ಮೇಲೆ ರಾಷೆಸ್ ಉಂಟಾದರೆ
ಕೆಲವೊಮ್ಮೆ ಮಗುವಿಗೆ ಬಳಸುವ ಸೋಪ್ ಅಥವಾ ಲೋಷನ್ ಅಲ್ಲಿರುವ ರಾಸಾಯನಿಕಗಳು ಮಗುವಿನ ದೇಹದ ಮೇಲೆ ರಾಷೆಸ್ ಅನ್ನು ಮೂಡಿಸಬಹುದು. ಇದನ್ನು ಡೆರ್ಮಟೈಟಿಸ್ ಎನ್ನುವರು. ಇದರಿಂದ ಪಾರಾಗಲು ಒಂದು ದಾರಿ ಎಂದರೆ, ಅದು ಮಗುವಿಗೆ ಮಾಡಿಸುವ ಸ್ನಾನವನ್ನ ಕಡಿಮೆ ಮಾಡುವುದು. ಇದರೊಂದಿಗೆ ನೀವು ನಿಮ್ಮ ಮಗುವಿನ ಮೇಲೆ ಬಳಸುವ ಉತ್ಪನ್ನಗಳು ಯಾವುದರಿಂದ ತಯಾರಾಗಿದೆ ಎಂಬುದರ ಮೇಲೆ ಕೂಡ ಗಮನವಿಡಿ. ಸುಗಂಧಭರಿತ ಉತ್ಪನ್ನಗಳನ್ನ ಬಳಸಬೇಡಿ. ಈ ಸೋಪ್ ಅಥವಾ ಲೋಷನ್ ಅಲ್ಲಿ ಸುಗಂಧ ತರಿಸಲು ಬಳಸುವ ರಾಸಾಯನಿಕಗಳು ನಿಮ್ಮ ಮಗುವಿನ ಚರ್ಮದ ಮೇಲಿರುವ ನೈಸರ್ಗಿಕ ಎಣ್ಣೆಯನ್ನು ತೆಗೆದು ಹಾಕಿ, ಡೆರ್ಮಟೈಟಿಸ್ ಉಂಟು ಮಾಡುತ್ತವೆ.

೨. ಅವರ ಚರ್ಮ ಒಣಗಿದ್ದರೆ
ಸೋಪುಗಳು ನಿಮ್ಮ ಮಗುವಿನ ಚರ್ಮವನ್ನ ಒಣಗಿಸಿಬಿಡುತ್ತವೆ. ಹೀಗಾಗಿ ನೀವು ನಿಮ್ಮ ಮಗುವಿನ ಮೈ ಅನ್ನು ಟವೆಲ್ ಅಲ್ಲಿ ಉಜ್ಜಿ ಒರೆಸಬೇಡಿ. ಟವೆಲ್ ಅಲ್ಲಿ ಮೆಲ್ಲನೆ ಒತ್ತುತ್ತಾ ಮಗುವಿನ ಮೈಯನ್ನು ಒಣಗಿಸಿ. ಅದಾದ ನಂತರ ಯಾವುದೇ ಸುಗಂಧದ್ರವ್ಯ ಇಲ್ಲದ, ಮೊಯಿಶ್ಚರೈಸಿಂಗ್ ಕ್ರೀಮ್ ಅನ್ನು ಮಗುವಿನ ಮೈ ಮೇಲೆ ಲೇಪಿಸಿ. ಇದು ನಿಮ್ಮ ಮಗುವಿನ ಚರ್ಮ ಒಣಗದಂತೆ ಮತ್ತು ಎಕ್ಸೆಮಾ ಅಂತಹ ಚರ್ಮದ ಅಸ್ವಸ್ಥತೆ ಉಂಟಾಗುವುದರಿಂದ ತಡೆಯುತ್ತದೆ. ಒಂದು ವೇಳೆ ನೀವು ವಾಸಿಸುವ ಪ್ರದೇಶದಲ್ಲಿ ಹಾರ್ಡ್ ವಾಟರ್ ಅಥವಾ ಉಪ್ಪು ನೀರು ಇದ್ದರೆ, ಮಗುವಿನ ಮೈ ಚರ್ಮ ಮತ್ತಷ್ಟು ಒಣಗುತ್ತದೆ. ಈ ಎಲ್ಲಾ ಕಾರಣಗಳಿಂದ, ಮಗುವಿಗೆ ಪ್ರತಿದಿನ ಸ್ನಾನ ಮಾಡಿಸುವುದನ್ನು ಕಡಿಮೆ ಮಾಡುವುದೇ ಒಳಿತು.

೩. ಮಗುವಿಗೆ ಅಲರ್ಜಿಗಳು ಇದ್ದರೆ
ತುಂಬಾ ಸ್ನಾನ ಮಾಡಿಸಿಕೊಳ್ಳುವ ಮಕ್ಕಳು ಅಲರ್ಜಿ ಪೀಡಿತರಾಗುವ ಸಾಧ್ಯತೆಗಳು ಇರುತ್ತವೆ. ನೀವು ಈ ಅಲರ್ಜಿಗಳು ಅವರಲ್ಲಿ ಕಾಣುವಷ್ಟರಲ್ಲಿ ಸಮಯ ಮೀರಿ ಹೋಗಿರುತ್ತದೆ. ಬಹುತೇಕ ಪೋಷಕರು ತಮ್ಮ ಮಗುವಿಗೆ ಹೆಚ್ಚು ಸ್ನಾನ ಮಾಡಿಸುವುದರಿಂದ ಹೆಚ್ಚೆಚ್ಚು ಕೀಟಾಣುಗಳನ್ನ ಕೊಲ್ಲುತ್ತಿದ್ದೇವೆ ಎಂದು ತಪ್ಪಾಗಿ ಭಾವಿಸಿ, ತಮ್ಮ ಮಕ್ಕಳ ಇಮ್ಮ್ಯೂನಿಟಿ ಕಡಿಮೆ ಮಾಡಿ, ಅಲರ್ಜಿಗಳಿಗೆ ತುತ್ತಾಗುವಂತೆ ಮಾಡಿ, ತಮ್ಮ ಮಕ್ಕಳಿಗೆ ಒಳಿತಿಗಿಂತ ಹೆಚ್ಚು ತೊಂದರೆಯನ್ನೇ ಉಂಟು ಮಾಡುತ್ತಾರೆ.

ಹೀಗಾಗಿ ಒಂದು ವೇಳೆ ನಿಮ್ಮ ಮಗುವಿನ ಚರ್ಮವು ಪ್ರತಿಕೂಲ ರೀತಿಯಲ್ಲಿ ವರ್ತಿಸುತ್ತಿದ್ದರೆ ಅಥವಾ ನಿಮ್ಮ ಮಗುವು ಅಗತ್ಯಕ್ಕಿಂತ ಹೆಚ್ಚು ಸಮಯವನ್ನ ನೀರಿನಲ್ಲಿ ಕಳೆಯುತ್ತಿದೆ ಎಂದರೆ, ಅದನ್ನು ವೈದ್ಯರ ಗಮನಕ್ಕೆ ತನ್ನಿ.

Comments are closed.