ಕರ್ನಾಟಕ

ವಧುವರರಿಗೆ ಮಂಗಳಸ್ನಾನಕ್ಕೂ ಮೊದಲು ಅರಿಶಿಣ ಏಕೆ ಹಚ್ಚುತ್ತಾರೆ ?

Pinterest LinkedIn Tumblr

ಅರಿಶಿಣವನ್ನು ನಾವು ನಿತ್ಯ ಅಡುಗೆಯಲ್ಲಿ ಹೆಚ್ಚಾಗಿ ಬಳಸುತ್ತೇವೆ. ಅವುಗಳಷ್ಟೇ ಅಲ್ಲ ಅರಿಶಿಣವನ್ನು ಶುಭಕಾರ್ಯಗಳಲ್ಲಿ ಹೆಚ್ಚಾಗಿ ಬಳಸುತ್ತೇವೆ. ಮುಖ್ಯವಾಗಿ ಮದುವೆ ವಿಚಾರಕ್ಕೆ ಬಂದರೆ ಅರಿಶಿಣ ಇಲ್ಲದೆ ಆ ಶುಭಕಾರ್ಯ ನಡೆಯಲ್ಲ. ಆ ಸಂಭ್ರಮದಲ್ಲಿ ಪ್ರತಿ ಸಂದರ್ಭದಲ್ಲೂ ಅರಿಶಿಣ ಬಳಕೆ ಜಾಸ್ತಿಯೇ ಇರುತ್ತದೆ. ಮುಖ್ಯವಾಗಿ ವಧುವರರಿಗೆ ಮಾಡುವ ಮಂಗಳಸ್ನಾನಕ್ಕೂ ಮೊದಲು ಅವರಿಗೆ ಅರಿಶಿಣ ಚೆನ್ನಾಗಿ ಹಚ್ಚುತ್ತಾರೆ. ಆದರೆ ಹಿರಿಯರು ಹೀಗೆ ಏಕೆ ಮಾಡುತ್ತಾರೆ ಗೊತ್ತಾ..? ಅದರ ಬಗ್ಗೆ ಈಗ ನೋಡೋಣ..!

1. ಮುಖದ ಮೇಲೆ ಉಂಟಾಗುವ ಮೊಡವೆಗಳು, ಮಚ್ಚಗಳಂತಹವನ್ನು ತೊಲಗಿಸಲು ಅರಿಶಿಣ ಚೆನ್ನಾಗಿ ಕೆಲಸ ಮಾಡುತ್ತದೆ. ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವಧು ವರರು ಇನ್ನಷ್ಟು ಹೊಳಪಿನಿಂದ ಕಾಣಬೇಕೆಂಬ ಉದ್ದೇಶದಿಂದ ಅರಿಶಿಣವನ್ನು ಹಚ್ಚಿ ಸ್ನಾನ ಮಾಡಿಸುತ್ತಾರೆ.
2. ಅರಿಶಿಣದಲ್ಲಿ ಕರ್ಕ್ಯುಮಿನ್ ಎಂಬ ಒಂದು ಪವರ್‌ಫುಲ್ ಆಕ್ಸಿಡೆಂಟ್ ಇರುತ್ತದೆ. ಇದು ಆಂಟಿ ಡಿಪ್ರೆಸೆಂಟ್ ಆಗಿ ಕೆಲಸ ಮಾಡುತ್ತದೆ. ಎಂದರೆ ಮಾನಸಿಕ ಒತ್ತಡ, ಆತಂಕವನ್ನು ಕಡಿಮೆ ಮಾಡುತ್ತದೆ. ತಲೆನೋವನ್ನೂ ನಿವಾರಿಸುತ್ತದೆ. ಇವೆಲ್ಲಾ ಇಲ್ಲದಿದ್ದರೆ ಅಲ್ಲವೇ ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ. ಹಾಗಾಗಿಯೇ ವಧುವರರಿಗೆ ಅರಿಶಿಣ ಹಚ್ಚುತ್ತಾರೆ.
3. ಆಂಟಿ ಸೆಪ್ಟಿಕ್ ಗುಣಗಳು ಅರಿಶಿಣದಲ್ಲಿ ಹೇರಳವಾಗಿ ಇವೆ. ಇವು ದೇಹದ ಮೇಲೆ ಆದ ಗಾಯ, ಹೊಡೆತಗಳನ್ನು ಶೀಘ್ರವಾಗಿ ಗುಣವಾಗುವಂತೆ ಮಾಡುತ್ತೆ. ಅವುಗಳ ಸ್ಥಾನದಲ್ಲಿ ಏರ್ಪಡುವ ಮಚ್ಚೆಗಳನ್ನು ಸಹ ತೊಲಗಿಸುತ್ತದೆ. ಆದಕಾರಣ ವಧುವರರಿಗೆ ಹಚ್ಚಲು ಆದ್ಯತೆ ನೀಡುತ್ತಾರೆ.
4. ಹಿಂದೂ ಸಂಪ್ರದಾಯ ಪ್ರಕಾರ ಅರಿಶಿಣ ಎಂಬುದು ಶುಭಕಾರ್ಯಕ್ಕೆ ಚಿನ್ಹೆ. ಆರೋಗ್ಯವನ್ನು ಉಂಟು ಮಾಡುವ ಔಷಧಿ. ಸಂಪತ್ತನ್ನು ಕೊಡುವ ಕಲ್ಪವೃಕ್ಷ. ಹಾಗಾಗಿ ಇದನ್ನು ವಧೂವರರಿಗೆ ಹಚ್ಚುತ್ತಾರೆ.
5. ದೇಹದಲ್ಲಿ ಸೇರಿಕೊಂಡಿರುವ ದುಷ್ಟ ಶಕ್ತಿಗಳನ್ನು ಹೊರಗೆ ಓಡಿಸುವ ಪವರ್ ಅರಿಶಿಣಕ್ಕೆ ಇದೆಯಂತೆ. ಹಾಗಾಗಿ ವಧೂವರರ ಮೇಲೆ ಯಾವುದೇ ಗಾಳಿ, ಧೂಳು ಇಲ್ಲದಿರಲಿ ಎಂಬ ಉದ್ದೇಶದಿಂದ ಅರಿಶಿಣ ಹಚ್ಚುತ್ತಾರೆ.
6. ಅರಿಶಿಣದ ಜತೆಗೆ, ಚಂದನ, ರೋಜ್ ವಾಟರ್‌ನಂತಹ ಪದಾರ್ಥಗಳನ್ನು ಬೆರೆಸಿ ವಧೂವರರಿಗೆ ಹಚ್ಚಿ ಮಂಗಳ ಸ್ನಾನ ಮಾಡಿಸುತ್ತಾರೆ. ಇದರಿಂದ ಅವರಲ್ಲಿ ಮದುವೆ ಕಳೆ ಇನ್ನಷ್ಟು ಹೆಚ್ಚುತ್ತದೆ ಎಂದು ಹಲವರು ಭಾವಿಸುತ್ತಾರೆ.

Comments are closed.