ಕರ್ನಾಟಕ

ದೈಹಿಕ ಸ್ವಾಸ್ಥ್ಯ ಲಿಂಬೆ ಹಣ್ಣು: ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು,ಇದರ ಮಹಿಮೆ ತಿಳಿಯಿರಿ.

Pinterest LinkedIn Tumblr

ಮಂಗಳೂರು: ಲಿಂಬೆಹಣ್ಣಿನಿಂದ ಹಲವಾರು ರೀತಿಯ ಲಾಭಗಳು ಇವೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾಗಿದೆ. ಲಿಂಬೆ ಹಣ್ಣಿನ ರಸವನ್ನು ವಿವಿಧ ರೀತಿಯಲ್ಲಿ ಬಳಸಿಕೊಂಡು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ…. ಹಣ್ಣುಗಳಲ್ಲಿ ಹಲವಾರು ರೋಗಗಳನ್ನು ತಡೆಯುವ ಹಾಗೂ ನಿವಾರಿಸುವಂತ ಶಕ್ತಿ ಇದೆ. ಹಿಂದಿನಿಂದಲೂ ಭಾರತೀಯರು ಆಯುರ್ವೇದದ ಮೂಲಕ ಪ್ರಕೃತಿಯಲ್ಲಿ ಸಿಗುವಂತಹ ಗಿಡಮೂಲಿಕೆ ಹಾಗೂ ಹಣ್ಣುಗಳನ್ನು ಬಳಸಿಕೊಂಡು ಚಿಕಿತ್ಸೆ ಮಾಡುತ್ತಾ ಬಂದಿದ್ದಾರೆ.

ಕೂದಲಿನ ಆರೈಕೆಯ ರಹಸ್ಯ ಲಿಂಬೆ ಜ್ಯೂಸ್‌ನಲ್ಲಿದೆ!ಅದರಲ್ಲೂ ಲಿಂಬೆಹಣ್ಣಿನಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಇದರಲ್ಲಿರುವ ಪೋಷಕಾಂಶಗಳು ಮತ್ತು ಫ್ಲಾವನಾಯ್ಡ್ ಶಕ್ತಿಶಾಲಿ ರೋಗನಿರೋಧಕವಾಗಿ ಕೆಲಸ ಮಾಡುತ್ತದೆ. ಕ್ಯಾನ್ಸರ್ ಅನ್ನು ತಡೆಯುವುದರಿಂದ ಹಿಡಿದು ಹಲವಾರು ರೀತಿಯ ಆರೋಗ್ಯ ಲಾಭಗಳು ಲಿಂಬೆರಸದಲ್ಲಿದೆ. ಬೆಳಗಿನ ಜಾವ ಲಿಂಬೆ ರಸ ಬೆರೆಸಿದ ನೀರನ್ನು ಸೇವಿಸಲು ಮರೆಯದಿರಿ

ಜ್ವರ, ಅಧಿಕ ರಕ್ತದೊತ್ತಡ, ಅಜೀರ್ಣ, ಮಲಬದ್ಧತೆ ಮತ್ತು ಇತರ ಹಲವಾರು ರೀತಿಯ ಅನಾರೋಗ್ಯಗಳನ್ನು ನಿವಾರಣೆ ಮಾಡುತ್ತದೆ. ಕೂದಲು, ಚರ್ಮ ಮತ್ತು ಹಲ್ಲಿನ ಆರೋಗ್ಯವನ್ನೂ ಇದು ಕಾಪಾಡುತ್ತದೆ. ಲಿಂಬೆಯಿಂದ ಆಗುವಂತಹ ಆರೋಗ್ಯ ಲಾಭಗಳನ್ನು ಈ ಲೇಖನದಲ್ಲಿ ತಿಳಿದುಕೊಳ್ಳಿ…..

ತೂಕ ಕಡಿಮೆ ಮಾಡಬಹುದು ಇತ್ತೀಚೆಗೆ ನಡೆಸಿದ ಸಂಶೋಧನೆಯೊಂದರೆ ಪ್ರಕಾರ ನಿಂಬೆರಸದಲ್ಲಿ ಪೆಕ್ಟಿನ್ ಎನ್ನುವ ಅಂಶವಿದ್ದು, ಇದು ತೂಕ ಕಡಿಮೆ ಮಾಡಲು ನೆರವಾಗುವುದು. ಲಿಂಬೆರಸದಲ್ಲಿ ವಿಟಮಿನ್ ಸಿ, ಆಸ್ಕೋರ್ಬಿಕ್ ಆಮ್ಲ ಮತ್ತು ಆ್ಯಂಟಿಆಕ್ಸಿಡೆಂಟ್ ಫ್ಲಾವನೈಯ್ಡ್ ಆಗಿರುವ ಹೆಸ್ಪೆಟಿನ್ ಇದೆ. ಈ ಅಂಶಗಳು ತೂಕ ಕಳೆದುಕೊಳ್ಳಲು ನೆರವಾಗುವುದು ಮತ್ತು ಸೊಂಟದ ಸುತ್ತಳತೆಯನ್ನು ಸರಿಯಾದ ರೀತಿ ಕಾಪಾಡಲು ಸಹಕಾರಿ.

ಚರ್ಮದ ಕಾಯಿಲೆಗಳನ್ನು ತಡೆಯುವುದು ಆ್ಯಂಟಿ ಆಕ್ಸಿಡೆಂಟ್ ನಿಂದ ಸಮೃದ್ಧವಾಗಿರುವ ಲಿಂಬೆರಸವು ಕಲೆ, ಕಂದುವೃತ್ತ, ವಯಸ್ಸಾಗುವ ಲಕ್ಷಣ ಮತ್ತು ನೆರಿಗೆಯನ್ನು ನಿವಾರಿಸುತ್ತದೆ. ಲಿಂಬೆರಸವು ರಕ್ತವನ್ನು ಶುದ್ಧೀಕರಿಸಿ ಅದರ ಗುಣಮಟ್ಟವನ್ನು ಉತ್ತಮಪಡಿಸುತ್ತದೆ. ಕರುಳಿನ ಚಟುವಟಿಕೆ ಸುಧಾರಣೆ ನಿಂಬೆರಸದಲ್ಲಿರುವ ನಾರಿನಾಂಶವು ಕರುಳಿನ ಚಟುವಟಿಕೆಯನ್ನು ದ್ವಿಗುಣಗೊಳಿಸುತ್ತದೆ. ಇದರಲ್ಲಿರುವ ಪೆಕ್ಟಿನ್ ಪ್ರಬಲ ನಂಜು ನಿರೋಧಕವಾಗಿರುವ ಕಾರಣ ಕರುಳನ್ನು ಸ್ವಚ್ಛವಾಗಿಡುತ್ತದೆ. ನಿರ್ವಿಷಗೊಳಿಸಲು ಲಿಂಬೆರಸದಲ್ಲಿ ಧನಾತ್ಮಕ ಆಯಾನುಗಳಿಗಿಂತ ಹೆಚ್ಚಿಗೆ ನಕಾರಾತ್ಮಕ ಆಯಾನುಗಳು ಇರುವ ಕಾರಣದಿಂದ ಇದು ಪ್ರತೀ ದಿನ ದೇಹದಲ್ಲಿರುವ ವಿಷವನ್ನು ಹೊರಹಾಕುತ್ತದೆ.

ಲಿಂಬೆರಸವು ಯಕೃತ್ ಅನ್ನು ಕೂಡ ಶುದ್ಧೀಕರಿಸುತ್ತದೆ. ಇದರಲ್ಲಿರುವ ನೈಸರ್ಗಿಕ ಶುದ್ಧೀಕರಿಸುವ ಅಂಶಗಳು ದೇಹದಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾವನ್ನು ಹೊರಹಾಕುತ್ತದೆ. ಅಜೀರ್ಣ ಸಮಸ್ಯೆಗೆ ಪಿತ್ತರಸದ ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ ಲಿಂಬೆರಸವು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮಪಡಿಸುವುದು. ಇದು ಕರುಳಿನ ಕ್ರಿಯೆಯನ್ನು ಸರಾಗವಾಗಿಸಿ ಮಲಬದ್ಧತೆ ಮತ್ತು ಅತಿಸಾರದ ಸಮಸ್ಯೆಯನ್ನು ನಿವಾರಿಸುತ್ತದೆ.

ಉರಿಯೂತ ಮತ್ತು ನೋವು ಯೂರಿಕ್ ಆಮ್ಲವನ್ನು ತೆಗೆದುಹಾಕುವ ಗುಣ ಹೊಂದಿರುವ ನಿಂಬೆ ರಸವು ಗಂಟುಗಳಲ್ಲಿ ಉರಿಯೂತದಿಂದ ಉಂಟಾಗುವ ನೋವನ್ನು ನಿವಾರಿಸುತ್ತದೆ. ಬ್ಯಾಕ್ಟೀರಿಯಾದ ಅತಿಬೆಳವಣಿಗೆ ತಡೆಯುವುದು ಲಿಂಬೆರಸವು ಬ್ಯಾಕ್ಟೀರಿಯಾದ ಅತಿಬೆಳವಣಿಗೆಯನ್ನು ತಡೆಯುವುದು. ಇದರಿಂದಾಗಿ ಹೆಚ್ಚು ಕಾಲ ಪೊಟ್ಟಣಗಳಲ್ಲಿ ತುಂಬಿಡುವ ಆಹಾರಗಳಲ್ಲಿ ಲಿಂಬೆರಸವನ್ನು ಬಳಸಲಾಗುತ್ತದೆ ಎಂದು ಹೇಳಲಾಗುತ್ತದೆ. ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ಪಡೆಯಿರಿ.

ಮಾಹಿತಿ :ಸಂಗ್ರಹ

Comments are closed.