ರಾಷ್ಟ್ರೀಯ

ಪಾಸ್‌ಪೋರ್ಟ್‌ನಲ್ಲಿ ಹೊಸ ಬದಲಾವಣೆ ತಂದ ವಿದೇಶ ಸಚಿವಾಲಯ

Pinterest LinkedIn Tumblr

Indian_Passport_650_generic_thinkstock

ಹೊಸದಿಲ್ಲಿ : ವಿದೇಶ ಸಚಿವಾಲಯವು ಪಾಸ್‌ಪೋರ್ಟ್‌ ನಮೂನೆಯ ನಿಯಮಗಳಲ್ಲಿ ಬದಲಾವಣೆಗಳನ್ನು ತಂದಿದೆ ಎಂದು ವೆಬ್ಪೋರ್ಟಲೊಂದು ವರದಿಮಾಡಿದೆ. ವಿದೇಶ ಸಚಿವಾಲಯ ಕಳೆದ ಸೋಮವಾರ ಪಾಸ್‌ಪೋರ್ಟ್‌ ನಮೂನೆಯಲ್ಲಿ ಕೆಲವು ಬದಲಾವಣೆ ಮಾಡಿದ್ದು, ಪಾಸ್‌ಪೋರ್ಟ್‌ಗಿ ಅರ್ಜಿ ಸಲ್ಲಿಸುವವರಲ್ಲಿ ಇನ್ನು ಕೇವಲ ಒಂಬತ್ತು ಪ್ರಶ್ನೆಗಳನ್ನುಕೇಳಲಾಗುವುದು.

ವಿದೇಶ ಸಚಿವಲಾಯದ ಹೊಸ ಫಾರ್ಮೆಟ್ ದೇಶದಾದ್ಯಂತ ಇರುವ ಪೊಲೀಸ್ ಮುಖ್ಯಕಚೇರಿಗಳ ಸಿಸ್ಟಮ್ಗಳಿಗೆ ಅಪ್ಲೋಡ್ ಮಾಡಲಾಗಿದೆ.

ಕೈಬಿಟ್ಟ ಎರಡು ಪ್ರಶ್ನೆಗಳು:
1) ಅರ್ಜಿದಾರನ ಬಳಿ ಮೊದಲು ಪಾಸುಪೋರ್ಟ್ ಇತ್ತೇ ಇಲ್ಲವೇ?
2) ಎಂದಾದರೂ ವಿದೇಶಕ್ಕೆ ಹೋಗಿದ್ದೀರಾ?
ಹೊಸ ನಮೂನೆಯಲ್ಲಿ ಈ ಎರಡು ಪ್ರಶ್ನೆಗಳನ್ನು ಕೈಬಿಡಲಾಗಿದ್ದು, ಹೊಸ ಅರ್ಜಿನಮೂನೆಗಳಲ್ಲಿ ಅರ್ಜಿದಾರ ಅರ್ಜಿಸಲ್ಲಿಸುವುದಕ್ಕಿಂತ ಒಂದು ವರ್ಷ ಹಿಂದೆ ಎಲ್ಲೆಲ್ಲ ವಾಸಿಸುತ್ತಿದ್ದ ಎಂದು ತಿಳಿಸಬೇಕಾಗುತ್ತದೆ.

ಹೊಸವ್ಯವಸ್ಥೆ ಪ್ರಕಾರ ಅರ್ಜಿದಾರ ವೈಯಕ್ತಿಕ ವಿವರಗಳಿಗೆ ಸಂಬಂಧಿಸಿದ ಎರಡು ಪ್ರಶ್ನೆಗಳನ್ನು ಒಂದೇ ಕಾಲಂನಲ್ಲಿ ಸೇರ್ಪಡೆಗೊಳಿಸಲಾಗಿದೆ. ಇದಲ್ಲದೆ ಕೇಂದ್ರ ಸರಕಾರ ಪ್ರಮುಖವಾದ ಇನ್ನೊಂದು ಬದಲಾವಣೆ ತಂದಿದ್ದುದ್ದು, ಇನ್ನು ಮುಂದೆ ಪಾಸ್‌ಪೋರ್ಟ್‌ ಆದ ಬಳಿಕವೇ ಪೊಲೀಸ್ ವೆರಿಫಿಕೇಶನ್ ನಡೆಯಲಿದೆ. ಆದರೆ ಇದಕ್ಕಾಗಿ ಪಾಸ್‌ಪೋರ್ಟ್‌ ಸೇವಾ ಕೇಂದ್ರದಲ್ಲಿ ಆಧಾರ್ ಕಾರ್ಡ್ ಯೋಜನೆಗೆ ಲಿಂಕ್ ಮಾಡುವುದು ಅತ್ಯಗತ್ಯವಾಗಿದೆ. ಈ ಪ್ರಕ್ರಿಯೆ ಈಗಾಗಲೇ ದೇಶದ ಹಲವು ಕೇಂದ್ರಗಳಲ್ಲಿ ಪ್ರಾರಂಭವಾಗಿದೆ ಎಂದು ವರದಿಯಾಗಿದೆ.

Comments are closed.