ಕ್ರೆಡಿಟ್ ಕಾರ್ಡ್ ನೀಡುತ್ತಿರುವ ಲಾಭದ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಕೆಲವೊಂದು ಬ್ಯಾಂಕು ಗಳು ವಾರ್ಷಿಕ ಶುಲ್ಕವಿಲ್ಲದೆಯೇ ಕ್ರೆಡಿಟ್ ಕಾರ್ಡ್ ನೀಡುತ್ತಿವೆ. ಆದರೆ ಕ್ರೆಡಿಟ್ ಕಾರ್ಡ್ ಇತರೆ ಕೆಲವು ಶುಲ್ಕ ಗಳನ್ನು ಒಳಗೊಂಡಿರುತ್ತದೆ. ಅವು ಯಾವವು ಎಂಬುದನ್ನು ನೀವು ತಿಳಿದುಕೊಳ್ಳಬೇಕಾಗುತ್ತದೆ.
ಕ್ರೆಡಿಟ್ ರ್ಡ್ ನಿಮಗೆ ಅನೇಕ ಲಾಭಗಳನ್ನು ತಂದುಕೊಡುತ್ತದೆ. ಡಿಸ್ಕೌಂಟ್ ಮತ್ತು ಬಗೆಬಗೆಯ ಆಫರ್ ಗಳನ್ನು ಪಡೆದುಕೊಳ್ಳಲು ಸಾಧ್ಯ. ನಿಮ್ಮ ಹವ್ಯಾಸಗಳು ಮತ್ತು ಆದಾಯದ ಮಿತಿ ಲೆಕ್ಕಾಚಾರದಲ್ಲಿ ಕ್ರೆಡಿಟ್ ಕಾರ್ಡ್ ಪಡೆದುಕೊಂಡು ಅದನ್ನು ಸರಿಯಾದ ಸ್ಥಳದಲ್ಲಿ ಬಳಕೆ ಮಾಡಿಕೊಂಡರೆ ಮತ್ತು ಕೊಳ್ಳುಬಾಕತನಕ್ಕೆ ಸಿಗದೆ ಬಳಕೆ ಮಾಡಿಕೊಂಡರೆ ಯಾವ ನಷ್ಟವೂ ಇಲ್ಲ. ಹಾಗಾದರೆ ಕ್ರೆಡಿಟ್ ಕಾರ್ಡ್ ಒಳಗೊಳ್ಳುವ ಇತರ ಶುಲ್ಕಗಳು ಯಾವವು ಎಂಬುದನ್ನು ತಿಳಿದುಕೊಂಡು ಬರೋಣ…(ಗುಡ್ ರಿಟರ್ನ್ಸ್.ಇನ್)
1.ಟ್ರಾನ್ಸಾಕ್ಷನ್ ಫೀಸ್ ಕೆಲವೊಂದು ಬ್ಯಾಂಕ್ ಗಳು ನಿಮ್ಮ ಖಾತೆಯಲ್ಲಿ ಇರುವುದಕ್ಕಿಂತ ಹೆಚ್ಚಿನ ಮೊತ್ತದ ಹಣ ಡ್ರಾ ಮಾಡಿದಾಗ ಹಣ ರವಾನೆ ಶುಲ್ಕವನ್ನು ಕತ್ತರಿಸಿಕೊಳ್ಳುತ್ತವೆ. ಆದರೆ ಇನ್ನು ಕೆಲವು ಬ್ಯಾಂಕ್ ಗಳು ರಿಯಾಯಿತಿ ತೋರಿಸುತ್ತವೆ.
2.ಓವರ್ ಡ್ರಾಫ್ಟ್ ನಿಮ್ಮ ಕ್ರೆಡಿಟ್ ಲಿಮಿಟ್ ಮೀರಿ ವ್ಯವಹಾರ ಮಾಡಿದರೆ ಓವರ್ ಡ್ರಾಫ್ಟ್ ಶುಲ್ಕವನ್ನು ಪಡೆದುಕೊಳ್ಳಲು ಬ್ಯಾಂಕಿಗೆ ಹಕ್ಕಿರುತ್ತದೆ.
3.ಪಾವತಿ ವಿಳಂಬ ಲೇಟ್ ಫೇಮೆಂಟ್ ಚಾರ್ಜ್ ನ್ನು ಕೆಲ ಬ್ಯಾಂಕ್ ಗಳು ಮೊದಲೇ ನಿರ್ಧರಿಸಿರುತ್ತವೆ. ಕೆಲ ಬ್ಯಾಂಕ್ ಗಳು ನಂತರ ಮುರಿದುಕೊಳ್ಳುತ್ತವೆ. ನಿಗದಿತ ಅವಧಿ ಒಳಗೆ ಹಣ ಮರುಪಪಾವತಿ ಮಾಡದೇ ಇದ್ದರೆ ನೀವು ವಿಳಂಬಕ್ಕೆ ದಂಡ ತೆರಲೇಬೇಕಾಗುತ್ತದೆ.
4.ಡುಪ್ಲಿಕೇಟ್ ಸ್ಟೇಟ್ ಮೆಂಟ್ ಮೂರು ತಿಂಗಳ ಅವಧಿಗೆ ಕ್ರೆಡಿಟ್ ಕಾರ್ಡ್ ಪಡೆದುಕೊಂಡರೆ ಅಥವಾ ಇನ್ನಿತರ ಸಂದರ್ಭದಲ್ಲಿಯೂ ಶುಲ್ಕ ನೀಡಬೇಕಾಗುತ್ತದೆ.
5.ವಿದೇಶಿ ಹಣ ರವಾನೆ ಅಂತಾರಾಷ್ಟ್ರೀಯ ಕರೆನ್ಸಿಯಲ್ಲಿ ವ್ಯವಹಾರ ನಡೆಸಿದರೆ ಶುಲ್ಕ ನೀಡಬೇಕು. ಕನಿಷ್ಟ 250 ರು. ಅಥವಾ ಹಣ ರವಾನೆಯ ಶೇ. 3.5 ನ್ನು ಶುಲ್ಕವಾಗಿ ನೀಡಬೇಕಾಗುತ್ತದೆ.
6.ಇಂಧನ ಮತ್ತು ರೈಲ್ವೆ ಬುಕಿಂಗ್ ವಾಹನಕ್ಕೆ ಇಂಧನ ತುಂಬಿಸುವ ವೇಳೆ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿದರೆ ನಿರ್ದಿಷ್ಟ ಶುಲ್ಕ ನೀಡಬೇಕಾಗುತ್ತದೆ. ಪ್ರತಿಯೊಂದು ಬ್ಯಾಂಕ್ ಗಳು ನಿರ್ದಿಷ್ಟ ಮಾನದಂಡವನ್ನು ಹೊಂದಿರುತ್ತವೆ.