ಕರ್ನಾಟಕ

ಇದು ಹನಿಟ್ರ್ಯಾಪ್ ಅಲ್ಲ, ನನಗೆ ಯಾರೂ ಮನವೊಲಿಸಿಲ್ಲ: ಸಿಡಿ ಪ್ರಕರಣದ ಸಂತ್ರಸ್ತೆ ಹೇಳೋದೇನು? (Video)

Pinterest LinkedIn Tumblr

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣದಲ್ಲಿ ಸಂತ್ರಸ್ತೆ ಉಲ್ಟಾ ಹೊಡೆದೆಉ ಎಂಬ ಮಾತುಗಳಿಂದ ಇಡೀ ಪ್ರಕರಣ ಕುತೂಹಲಕ್ಕೆ ನಿನ್ನೆ ಕಾರಣವಾಗಿತ್ತು. ಇದೀಗ ಸಂತ್ರಸ್ತೆ ನಿನ್ನೆಯ ಗೊಂದಲಗಳಿಗೆ ವೀಡಿಯೋ ಬಿಡುಗಡೆಗೊಳಿಸಿ ಸ್ಪಷ್ಟನೆ ನೀಡಿದ್ದಾರೆ.

ಸಿಡಿ‌ ಪ್ರಕರಣದ ಯುವತಿ ಉಲ್ಟಾ ಹೊಡೆದಿದ್ದಾರೆ ಮತ್ತು ಇದೊಂದು ಹನಿಟ್ರ್ಯಾಪ್ ಅಂತ ಸುದ್ದಿಗಳು ಬಿತ್ತರವಾಗಿರೋದನ್ನು ನೋಡಿದೆ. ಆದ್ರೆ ಇದೆಲ್ಲ ಶುದ್ಧ ಸುಳ್ಳು. ಕೆಲ ಸಾಕ್ಷ್ಯಗಳನ್ನ ನೀಡುವದರಿಂದ ಎಸ್‍ಐಟಿ ಅಧಿಕಾರಿಗಳ ಬಳಿ ಹೋಗಿದ್ದೆ. ಆದ್ರೆ ಆಚೆ ಬರುವಷ್ಟರಲ್ಲಿ ಇದು ಮಗದೊಂದು ರೂಪ ಪಡೆದುಕೊಂಡಿತ್ತು. ನಾನು ಅಧಿಕಾರಿಗಳಿಗೆ ಎವಿಡೆನ್ಸ್ ನೀಡಿದ್ದೇನೆ ಹೊರತಾಗಿಯೇ ಯಾವುದೇ ಪೇಪರ್ ಗಳಿಗೆ ಸಹಿ ಮಾಡಿಲ್ಲ. ತಂದೆ-ತಾಯಿ ಜೊತೆ ಮಾತನಾಡಿದ್ದೇನೆ. ಆದ್ರೆ ಅವರು ನನ್ನ ಮನವೊಲಿಸಿಲ್ಲ. ಮನವೊಲಿಸಿದ್ರೂ ಅಲ್ಲಿ ಸತ್ಯವನ್ನೇ ಹೇಳಬೇಕು. ನ್ಯಾಯಾಧೀಶರ ಮುಂದೆ ದಾಖಲಿಸಿರುವ ನನ್ನ ಹೇಳಿಕೆಗೆ ನಾನು ಬದ್ಧಳಾಗಿದ್ದೇನೆ.

ನನ್ನ ಕುಟುಂಬ ಮತ್ತು ಗೆಳೆಯ ಆಕಾಶ್ ನನ್ನು ಸಹ ಕರೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಇದರ ಜೊತೆಗೆ ನಮ್ಮ ಸಂಬಂಧಿಗಳಿಗೂ ನೋಟಿಸ್ ನೀಡಲಾಗುತ್ತಿದೆ. ಈ ಪ್ರಕರಣದ ಆರೋಪಿಯನ್ನು ಕೋವಿಡ್ ನೆಪ ಹೇಳಿ ವಿಚಾರಣೆ ಮಾಡೋದರಿಂದ ಹಿಂದೆ ಸರಿದಿದ್ದಾರೆ. ಮೊದಲು ಆರೋಪಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಿ. ಅವರ ಮನೆಯವರಿಗೂ ಎಸ್‍ಐಟಿ ನೋಟಿಸ್ ನೀಡಲಿ ಎಂದು ಸಂತ್ರಸ್ತೆ ಒತ್ತಾಯಿಸಿದಾರೆ.

Comments are closed.