ಈ ಮೇಲಿನ ವಿಡಿಯೋದಲ್ಲಿ ಮಗುವೊಂದು ದೆವ್ವದಂತೆ ವಿಶೇಷ ಬಟ್ಟೆ ತೊಟ್ಟು ಓಡಾಡುತ್ತಿದೆ. ಇದು ಅಲ್ಲಿ ನಡೆಯುವ ಆಚರಣೆಯ ಒಂದು ಝಲಕ್ ಅಷ್ಟೇ.
ವಿದೇಶದಲ್ಲಿ ಹ್ಯಾಲೋವೀನ್ ಎಂಬ ಆಚರಣೆಯೊಂದಿದೆ. ಈ ತಿಂಗಳಾಂತ್ಯದಲ್ಲಿ ನಡೆಯುವ ಆಚರಣೆ ಇದು. ಆದರೆ, ಈ ಹ್ಯಾಲೋವೀನ್ ದಿನದ ಸಿದ್ಧತೆಗಳು ಈಗಿನಿಂದಲೇ ಗರಿಗೆದರಿದೆ. ಆ ದಿನಕ್ಕೆ ಕಾಯುತ್ತಿರುವ ಜನರೆಲ್ಲಾ ಅಂದು ಹೇಗೆ ಕಾಣಿಸಿಕೊಳ್ಳಬೇಕು ಎಂಬ ಬಗ್ಗೆ ಈಗಿನಿಂದಲೇ ಪ್ಲಾನ್ ಮಾಡುತ್ತಿದ್ದಾರೆ. ಹ್ಯಾಲೋವೀನ್‌ನಂದು ಜನರೆಲ್ಲಾ ಚಿತ್ರವಿಚಿತ್ರ ಧಿರಿಸುಗಳನ್ನು ತೊಟ್ಟು ಓಡಾಡುತ್ತಾರೆ. ಕೆಲವೊಂದು ವೇಷಗಳು ಎಷ್ಟು ಭಯಾನಕವಾಗಿರುತ್ತವೆ ಎಂದರೆ, ನಾವು ದೆವ್ವಗಳ ಲೋಕಕ್ಕೆ ಕಾಲಿಟ್ಟಿದ್ದೇವಾ ಎಂದು ಅನುಮಾನ ಮೂಡುವಷ್ಟು ಚಿತ್ರವಿಚಿತ್ರವಾಗಿ ಮತ್ತು ಅಷ್ಟೇ ಭಯಾನಕ ಧಿರಿಸು ತೊಟ್ಟು ಜನರು ಬಂದಿರುತ್ತಾರೆ. ಹೀಗೆ ದೆವ್ವಗಳಂತೆ ಬಟ್ಟೆ ತೊಟ್ಟು ಓಡಾಡುವುದು ಇವರಿಗೊಂದು ಖುಷಿ, ಸಡಗರದ ಕ್ಷಣ.
ಕೆಲವರು ಅಂದಿನ ವಿಶೇಷ ವೇಷಭೂಷಣಗಳನ್ನು ಈಗಲೇ ತೊಟ್ಟು ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇವೆಲ್ಲದರ ನಡುವೆ ಮುದ್ದಾದ ಮಗು ವಿಚಿತ್ರ ಡ್ರೆಸ್ ತೊಟ್ಟು ರಾತ್ರಿ ಓಡಾಡುವ ವಿಡಿಯೋವೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿದೆ. ದೂರದಲ್ಲಿ ನೋಡಿದಾಗ ವ್ಯಕ್ತಿಯೊಬ್ಬರ ಪಕ್ಕದಲ್ಲಿ ಭಯಾನಕವಾಗಿ ಹೊಳೆಯುವ ಕೆಂಪು ಆಕೃತಿ ನಡೆದುಕೊಂಡು ಹೋಗುತ್ತಿದೆ ಎನ್ನುವಷ್ಟರ ಮಟ್ಟಿಗೆ ಭಯ ಹುಟ್ಟಿಸುವ ದೃಶ್ಯವಿದು. ಆದರೆ, ಹತ್ತಿರ ಬಂದಾಗ ವ್ಯಕ್ತಿಯೊಬ್ಬರ ಕೈ ಹಿಡಿದು ನಡೆಯುವ ಮಗುವಿನ ದೃಶ್ಯ ಕಣ್ಣಿಗೆ ಗೋಚರವಾಗುತ್ತದೆ. ಹೀಗೆ ದೀಪಗಳಿಂದ ಬೆಳಗುವ ಡ್ರೆಸ್ ತೊಟ್ಟ ಈ ಕಂದಮ್ಮ ಖುಷಿಯಿಂದ ಕುಣಿಯುವ ದೃಶ್ಯವೂ ಇಲ್ಲಿದೆ. ಈ ಕಂದನ ಖುಷಿಯೇ ಮನಸ್ಸಿಗೆ ಹಿತ ನೀಡುತ್ತದೆ.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆದಿದೆ. ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಆದ ಈ ವಿಡಿಯೋ ಈಗಾಗಲೇ ಹತ್ತು ಲಕ್ಷಕ್ಕೂ ಅಧಿಕ ವೀಕ್ಷಣೆ ಗಳಿಸುವಲ್ಲಿ ಯಶಸ್ವಿಯಾಗಿದೆ. ಎಲ್ಲರೂ ಈ ಕ್ರಿಯೇಟಿವಿಟಿಗೆ ಫಿದಾ ಆಗಿದ್ದಾರೆ.