ಕರಾವಳಿ

70ನೇ ಜನ್ಮದಿನವನ್ನು ಕೊಲ್ಲೂರು ಕ್ಷೇತ್ರದಲ್ಲಿ ಆಚರಿಸಿಕೊಂಡಿದ್ದರು ಎಸ್.ಪಿ. ಬಾಲಸುಬ್ರಮಣ್ಯಂ (Video)

Pinterest LinkedIn Tumblr

ಕುಂದಾಪುರ: ನಿನ್ನೆಯಷ್ಟೇ ಚೆನ್ನೈ ಆಸ್ಪತ್ರೆಯಲ್ಲಿ ನಿಧನರಾದ ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಂ ಅವರು ತಮ್ಮ70ನೇ ವರ್ಷದ ಜನ್ಮದಿನವನ್ನು ಉಡುಪಿ ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ ಆಚರಿಸಿಕೊಂಡಿದ್ದರು.

(ಸಂಗ್ರಹ ಚಿತ್ರಗಳು)

ಮತ್ತೆ ಕರ್ನಾಟಕದಲ್ಲಿ ಹುಟ್ಟುವೆ….
2016 ಜೂನ್.4 ರಂದು ಕೊಲ್ಲೂರಿಗೆ ಪತ್ನಿ, ಪುತ್ರ ಹಾಗೂ ಸೊಸೆ ಜೊತೆ ಆಗಮಿಸಿದ್ದ ಎಸ್ಪಿ ಬಾಲಸುಬ್ರಮಣ್ಯಂ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಈ ಸಂದರ್ಭ ಮಾತನಾಡಿದ್ದ ಅವರು ‘ನೀರಿನ ಕೊರತೆಯಿಂದ ಬಳಲುತ್ತಿರುವ ದಕ್ಷಿಣ ಭಾರತದಲ್ಲಿ ಉತ್ತಮ ಮಳೆಯಾಗಬೇಕು ಎಂದು ದೇವಿಯಲ್ಲಿ ಪ್ರಾರ್ಥಿಸಿದ್ದು ಪುನರ್ಜನ್ಮ ಇದ್ದರೆ, ನಾನು ಕರ್ನಾಟಕದಲ್ಲಿ ಜನಿಸಿ ಮತ್ತೆ ಎಸ್‌ಪಿಬಿ ಆಗಲು ಬಯಸುತ್ತೇನೆ. ದೇವಿಯ ಆಶೀರ್ವಾದದಿಂದಾಗಿ ನಾನು ಸ್ವಲ್ಪವೇ ಸಾಧಿಸಿದ್ದೇನೆ. ನಾನು ಕೊಲ್ಲೂರಿಗೆ ಬಂದಾಗಲೆಲ್ಲಾ ನಾನು ದೈವಿಕ ಅನುಭವಕ್ಕೆ ಒಳಗಾಗುತ್ತೇನೆ ಎಂದಿದ್ದರು.

ಆ ಸಂದರ್ಭದಲ್ಲಿ ಎಸ್‌ಪಿಬಿ ದೇವಾಲಯದ ಸರಸ್ವತಿ ಮಂಟಪದಲ್ಲಿ ಭಕ್ತಿಗೀತೆಗಳನ್ನು ಸಲ್ಲಿಸುವ ಮೂಲಕ ಸಂಗೀತ ಪ್ರಿಯರನ್ನು ಸಂತೋಷಪಡಿಸಿದ್ದರು. ಅಂದು ಆನಂದ್ ಗುರೂಜಿ ಎಸ್‌ಪಿಬಿ ದಂಪತಿಯನ್ನು ಆಶೀರ್ವದಿಸಿದ್ದರು.

Comments are closed.