ಅಂತರಾಷ್ಟ್ರೀಯ

ಜಗತ್ತಿಗೆ ಬುದ್ಧಿಹೇಳುವ ಅಮೆರಿಕನ್ನರು ನಡೆಸಿದ ಪ್ರತಿಭಟನೆ ವೇಳೆಯ ಹಿಂಸಾಚಾರಕ್ಕೆ ಏನೆಲ್ಲಾ ಬಲಿಯಾಗಿದೆ ನೋಡಿ….

Pinterest LinkedIn Tumblr

ಅಮೇರಿಕ: ಪೊಲೀಸರ ದೌರ್ಜನ್ಯದಿಂದ ಖೋಟಾ ನೋಟು ಚಲಾವಣೆ ಆರೋಪಿಯೊಬ್ಬ ಮೃತಪಟ್ಟಿದ್ದರಿಂದ ಅಮೆರಿಕದಲ್ಲಿ ಭುಗಿಲೆದ್ದ ಕಪ್ಪುಜನರ ಪ್ರತಿಭಟನೆ ಮತ್ತಷ್ಟು ಹಿಂಸಾರೂಪ ಪಡೆದಿದ್ದು, ಆಕ್ರೋಶಿತ ಜನರು ಅಂಗಡಿ-ಮುಗ್ಗಟ್ಟು, ಮಳಿಗೆ, ಹೋಟೆಲ್, ಮಾಲ್’ಗಳನ್ನು ಧ್ವಂಸ ಮಾಡಿದ್ದು, ಸಾರ್ವಜನಿಕರ ಆಸ್ತಿಪಾಸ್ತಿಗಳು ಸಂಪೂರ್ಣ ಹಾನಿಯಾಗಿದೆ. ಈ ವೇಳೆ ಅಮೆರಿಕನ್ನರು ನಡೆಸಿದ ಹಿಂಸಾಚಾರ, ನಡೆಸಿದ ದಾಂದಲೆಗೆ ಜಗತ್ತಿನಾದ್ಯಂತ ಖಂಡನೆ ವ್ಯಕ್ತವಾಗಿದೆ.

ಇಡೀ ಜಗತ್ತಿಗೆ ಬುದ್ಧಿ ಹೇಳುವ ದೊಡ್ಡಣ್ಣ ಎಂದೇ ಹೇಳಲಾಗುವ ಅಮೇರಿಕದಲ್ಲಿ ಅಲ್ಲಿನ ಜನರು ನಡೆಸಿದ ಅಮಾನುಷ ಕೃತ್ಯಗಳು ವೈರಲ್ ಆಗಿದ್ದು, ಜಗತ್ತಿನಾದ್ಯಂತ ಜನರು ಅಮೆರಿಕನ್ನರ ವರ್ತನೆಗೆ ಕಿಡಿಕಾರಿದ್ದಾರೆ.

ಅಮೆರಿಕದ ಮಿನ್ನೆಸೋಟಾ ರಾಜ್ಯದ ಮಿನ್ನೆಪೊಲೀಸ್‌ ನಗರದಲ್ಲಿ ಖೋಟಾ ನೋಟು ಚಲಾವಣೆ ಆರೋಪದ ಮೇರೆಗೆ ಬಂಧನಕ್ಕೊಳಗಾದ ಕಪ್ಪು ವರ್ಣೀಯ ಜಾರ್ಜ್​ ಫ್ಲಾಯ್ಡ್​ ಎಂಬಾತ ಪೊಲೀಸ್‌ ದೌರ್ಜನ್ಯದಲ್ಲಿ ಮೃತಪಟ್ಟ ಬಳಿಕ ಕಪ್ಪು ವರ್ಣೀಯರಿಂದ ಭುಗಿಲೆದ್ದ ಪ್ರತಿಭಟನೆ ಅಮೆರಿಕದಾದ್ಯಂತ ವ್ಯಾಪಕ ಹಿಂಸಾಚಾರಕ್ಕೆ ಕಾರಣವಾಗಿದೆ. ಈ ಹಿಂಸಾಚಾರದ ವೇಳೆ ಅಮೆರಿಕನ್ನರು ಕೈಗೆ ಸಿಕ್ಕ ಸಿಕ್ಕ ಮಳಿಗೆ, ಅಂಗಡಿಗಳನ್ನು ಪುಡಿಗೈದಿದ್ದು, ಚಿಕಾಗೋ ಪ್ರದೇಶದಲ್ಲಿ ಧಂಸಗೈದ ವೀಡಿಯೊ ವೈರಲ್ ಆಗಿದ್ದು, ಈ ವಿಡಿಯೋ ನೋಡಿದ ಜನ ಅಮೆರಿಕನ್ನರ ವರ್ತನೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ.

ದೇಶದ ಬಹುತೇಕ ನಗರಗಳಲ್ಲಿ ಹಿಂಸಾಚಾರ ಉಲ್ಬಣಗೊಂಡಿದ್ದು, ಉದ್ರಿಕ್ತ ಕಪ್ಪುಜನರು ನಡೆಸಿದ ದಾಂಧಲೆಯಿಂದಾಗಿ ಲಕ್ಷಾಂತರ ಡಾಲರ್ ಆಸ್ತಿಪಾಸಿಗೆ ನಷ್ಟವಾಗಿದ್ದು, ಕೆಲವು ಪ್ರದೇಶಗಳು ಹೊತ್ತಿ ಉರಿದಿವೆ. ಗಲಭೆಯಲ್ಲಿ ನೂರಾರು ಕಾರುಗಳು ಧಗಧಗಿಸಿವೆ.

Comments are closed.