ಅಂತರಾಷ್ಟ್ರೀಯ

ಮೈಮನ ಮರೆತು ಕಿಸ್ ಮಾಡುವ ವೇಳೆ ಸೇತುವೆಯಿಂದ ಕೆಳಗೆ ಬಿದ್ದ ಜೋಡಿ ! ಮುಂದೇನಾಯ್ತು? ಈ ವೀಡಿಯೊ ನೋಡಿ….

Pinterest LinkedIn Tumblr

ಲಿಮಾ: ಕಿಸ್ ಮಾಡುತ್ತಾ ಉನ್ಮಾದಕ್ಕೆ ಹೋಗಿದ್ದ ಜೋಡಿಯೊಂದು ತಾವು ಎಲ್ಲಿದ್ದೇವೆ ಎಂಬುದನ್ನು ಮರೆತು 50 ಅಡಿ ಎತ್ತರದ ಸೇತುವೆಯಿಂದ ಕೆಳಗೆ ಬಿದ್ದಿರುವ ಭೀಕರ ಘಟನೆ ನಡೆದಿದೆ.

https://youtu.be/a9StLE_cz7g

ಪೆರು ನಗರದಲ್ಲಿ ಪ್ರವಾಸಿಗರ ಗೈಡ್ ಆಗಿರುವ 34 ವರ್ಷದ ಎನ್ಟಿನೋಜ್ ಮತ್ತು 36 ವರ್ಷದ ಹೆಕ್ಟರ್ ವಿಡಾಲ್ ದಂಪತಿ ಶನಿವಾರ ತಡರಾತ್ರಿ ಬೆಥ್ಲೆಹೆಮ್ ಸೇತುವೆ ಮೇಲೆ ಏಕಾಂತದಲ್ಲಿ ಕಾಲ ಕಳೆಯಲು ನಿರ್ಧರಿಸಿ ನಿಂತಿದ್ದರು.

ನಂತರ ಪತಿ ಹೆಂಡತಿಗೆ ಕಿಸ್ ಮಾಡುತ್ತಾ ಆಕೆಯನ್ನು ಸೇತುವೆಯ ರಕ್ಷಣಾ ಕಂಬಿಗಳ ಮೇಲೆ ಕೂರಿಸಿದ್ದಾನೆ. ಈ ವೇಳೆ ಪತ್ನಿ ನಿಯಂತ್ರಣ ತಪ್ಪಿ ಕೆಳಗೆ ಬೀಳುವಾಗ ಗಂಡನ್ನು ಹತ್ತಿರಕ್ಕೆ ಎಳೆದುಕೊಳ್ಳುತ್ತಾಳೆ ಆಗ ಇಬ್ಬರು ನಿಯಂತ್ರಣ ತಪ್ಪಿ ಕೆಳಗೆ ಬೀಳುತ್ತಾರೆ.

ಕೆಳಗೆ ಬಿದ್ದಿದ್ದರಿಂದ ಇಬ್ಬರಿಗೂ ಗಂಭೀರ ಗಾಯಗಳಾಗುತ್ತವೆ. ಈ ವೇಳೆ ಮಾರ್ಗಮಧ್ಯೆ ಪತ್ನಿ ಎಸ್ಟಿನೋಜ್ ಮೃತಪಟ್ಟಿದ್ದು ಚಿಕಿತ್ಸೆ ಫಲಕಾರಿಯಾಗದೇ ಪತಿ ವಿಡಾಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ದಂಪತಿ ಸೇತುವೆಯಿಂದ ಕೆಳಗೆ ಬೀಳುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

Comments are closed.