ಕರಾವಳಿ

ಕರಾವಳಿಯಲ್ಲಿ ಹೆಚ್ಚುತ್ತಿರುವ ಗೋಕಳ್ಳತನ: ಬೈಂದೂರಿನಲ್ಲಿ ಭಜರಂಗದಳ, ವಿ.ಹಿಂ.ಪ. ಪ್ರತಿಭಟನೆ (Video)

Pinterest LinkedIn Tumblr

ಕುಂದಾಪುರ: ಕರಾವಳಿ ಭಾಗದಲ್ಲಿ ನಿರಂತರವಾಗಿ ನಡೆಯುತ್ತಿರುವ ಗೋಕಳ್ಳತನ ಹಾಗೂ ಸಾಗಾಟಕ್ಕೆ ಕಡಿವಾಣ ಬೀಳಬೇಕು, ಅಕ್ರಮ ಕಸಾಯಿಕಾನೆಗಳನ್ನು ಮುಚ್ಚಬೇಕು ಮೊದಲಾದ ಬೇಡಿಕೆಗಳನ್ನು ಇಟ್ಟುಕೊಂಡು ವಿಶ್ವಹಿಂದೂ  ಪರಿಷತ್ ಹಾಗೂ ಭಜರಂಗದಳದ ವತಿಯಿಂದ ಶುಕ್ರವಾರ ಮಧ್ಯಾಹ್ನ ಬೈಂದೂರಿನಲ್ಲಿ ಪ್ರತಿಭಟನಾ ಸಭೆ ನಡೆಯಿತು.

ಸಭೆಯನ್ನುದ್ದೇಶಿಸಿ ಪ್ರಾಂತ ಸಹ ಗೋರಕ್ಷಾ ಪ್ರಮುಖ್ ಜಗದೀಶ್ ಶೇಣವ ಮಾತನಾಡಿ, ಹಿಂದೂಗಳ ಒಗ್ಗಟ್ಟಿನ ಕೊರತೆಯಿಂದಾಗ ಸಮಸ್ಯೆಗಳು ಜಾಸ್ಥಿಯಾಗುತ್ತಿದೆ. ವಿವಿಧ ರೀತಿಯಲ್ಲಿ ಉಪಯೋಗ ಪಡೆದುಕೊಳ್ಳುವ ಅತ್ಯಮೂಲ್ಯ ಗೋಮಾತೆಯನ್ನು ಹೆತ್ತ ತಾಯಿಯಂತೆ ಪೂಜಿಸುವ ಕಾರ್ಯವಾಗಬೇಕು ಮತ್ತು ಗೋವಿನ ರಕ್ಷಣೆಯ ಕಾರ್ಯವಾಗಬೇಕು. ಹಿಂದೂಗಳ ಭಾವನೆಗಳಿಗೆ ಹಾಗೂ ಧಾರ್ಮಿಕತೆಗೆ ಘಾಸಿ ಮಾಡುವ ಉದ್ದೇಶದಿಂದ ಮತಾಂದರು ಗೋವಧೆ ಮಾಡುತ್ತಿದ್ದಾರೆ. ಗೋ ಅಕ್ರಮ ಸಾಗಾಟದಲ್ಲಿ ಹಿಂದೂ ದಲ್ಲಾಳಿಗಳು ಕೂಡ ಶಾಮೀಲಾಗಿರುವುದು ಇತ್ತೀಚೆಗೆ ಕಂಡುಬರುತ್ತಿರುವ ದುರಂತವಾಗಿದೆ. ಭಾವನೆಗಳಿಗೆ ಧಕ್ಕೆ ಮಾಡಿದಲ್ಲಿ ಸಂಘಟನೆ ತಕ್ಕ ಉತ್ತರ ನೀಡಲಿದೆ. ಹಿಂದೂ ಸಂಘಟನೆಗಾಗಿ ಯಾವುದೇ ಪ್ರಕರಣವನ್ನು ಹಾಕಿಸಿಕೊಳ್ಳಲು ಸಿದ್ಧರಿಸಿದ್ದೇವೆ ಎಂದರು.

ಗೋವಿನ ವಿಚಾರದಲ್ಲಿ ಈ ಹಿಂದೆಯೇ ಹಲವು ಅಹಿತಕರ ಘಟನೆಗಳು ನಡೆದಿದ್ದು ಇನ್ನಾದರೂ ಸಂಬಂದಪಟ್ಟವರು ಸೂಕ್ತ ಕ್ರಮಕೈಗೊಂಡು ಸಂಭವ್ಯ ಸಮಸ್ಯೆಗಳನ್ನು ತಪ್ಪಿಸಬೇಕು. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಅಧಿಕ್ರತವಾಗಿ ೧ ಕಸಾಯಿಕಾನೆಯಿದ್ದರೂ ಕೂಡ ಅನಧೀಕ್ರತವಾಗಿ ಸಾವಿರಾರು ಕಸಾಯಿಕಾನೆಗಳು ತಲೆಯೆತ್ತಿದೆ. ಇಲಾಖೆ ಇಂತಹುದರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ಗೋ ರಕ್ಷಕರಾಗಿ ಕೆಲಸ ಮಾಡುವ ಸಂಘಟನೆಯ ಯುವಕರ ಮೇಲೆ ಸುಳ್ಳು ಪ್ರಕರಣ ದಾಖಲು ಮಾಡುವ ಹುನ್ನಾರ ಕೈಬಿಡಬೇಕು. ಉಭಯ ಜಿಲ್ಲೆಗಳಲ್ಲಿ ಬಿಜೆಪಿ ಶಾಸಕರೇ ಇದ್ದು, ಸಂಸದರು, ಜಿ.ಪಂ. ತಾಪಂ ಸದಯರು ಕೂಡ ಬಹುತೇಕ ಬಿಜೆಪಿಗರೇ ಇದ್ದು ಇದು ಹಿಂದುತ್ವದ ಅಲೆಯಾಗಿದೆ. ಹಿಂದುತ್ವ, ಗೋ ಮಾತೆಗೆ ಸಮಸ್ಯೆ ಆದಾಗ ಜನಪ್ರತಿನಿಧಿಗಳು ಸೂಕ್ತ ಕ್ರಮಕೈಗೊಳ್ಳಬೇಕು. ಸ್ಥಳಿಯ ಶಾಸಕ ಹಾಗೂ ಜನಪ್ರತಿನಿಧಿಗಳು ಹಿಂದೂ ಸಮಾಜ ಕಟ್ಟುವ ಕಾರ್ಯಕ್ಕೆ ಇನ್ನಷ್ಟು ತೊಡಗಿಸಿಕೊಳ್ಳಬೇಕು ಎಂದರು.

ಇದೇ ಸಂದರ್ಭ ಪ್ರತಿಭಟನಾ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ಸಾಗಿದ ಪ್ರತಿಭಟನಕಾರರು ತಹಶಿಲ್ದಾರ್ ಹಾಗೂ ಬೈಂದೂರು ಸಿಪಿಐ ಅವರಿಗೆ ಮನವಿ ನೀಡಿ ಸೂಕ್ತಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.

ಈ ಸಂದರ್ಭ ಮಾತನಾಡಿದ ವಿಶ್ವಹಿಂದೂ ಪರಿಷದ್ ಬೈಂದೂರು ಪ್ರಖಂಡ ಅಧ್ಯಕ್ಷ ಶ್ರೀಧರ್ ಬಿಜೂರು, ಇತ್ತೀಚೆಗೆ ಕರಾವಳಿಯಲ್ಲಿ ಹೆಚ್ಚುತ್ತಿರುವ ಗೋಕಳ್ಳತನ ಮತ್ತು ಸಾಗಾಟದ ವಿರುದ್ಧ ಧ್ವನಿಯೆತ್ತುವ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು ಮಾಡಲಾಗುತ್ತೆ, ಆದರೆ ಸಾಮಾಜಿಕ ಭಂಗ ಮಾಡುವ ಗೋ ಕಳ್ಳರ ಮೇಲೆ ಯಾವುದೇ ಪ್ರಕರಣ ದಾಖಲು ಮಾಡುತ್ತಿಲ್ಲ. ಬೈಂದೂರು ಯಳಜಿತ್ ಪ್ರಕರಣದಲ್ಲಿ ಕಳವಾದ ಎರಡು ದನಗಳ ಪತ್ತೆಯಾಗಬೇಕು, ಆರೋಪಿಗಳನ್ನು ಶೀಘ್ರಪತ್ತೆ ಮಾಡಿ ಕಾನೂನು ಚೌಕಟ್ಟಿನಡಿ ಶಿಕ್ಷೆಗೊಳಪಡಿಸಬೇಕು. ಹಿಂದುತ್ವವನ್ನು ಕಾಪಾಡಲು ನಾವು ಮತಹಾಕಿ ಗೆಲ್ಲಿಸಿದ ಜನಪ್ರತಿನಿಧಿಗಳು ಕಠಿಬದ್ಧರಾಗಬೇಕು ಎಂದರು.

ವಿಶ್ವಹಿಂದೂ ಪರಿಷದ್ ಉಡುಪಿ ಜಿಲ್ಲಾ ಕಾರ್ಯದರ್ಶಿ ಪ್ರಮೋದ್ ಮಂದರ್ತಿ, ಸಹಕಾರ್ಯದರ್ಶಿ ಗಿರೀಶ್ ಕುಂದಾಪುರ, ಉಡುಪಿ ಜಿಲ್ಲಾ ಗೋ ರಕ್ಷಾ ಪ್ರಮುಖ್ ದಿನೇಶ್ ಶೆಟ್ಟಿ ಹೆಬ್ರಿ, ವಿಶ್ವಹಿಂದೂ ಪರಿಷದ್ ಬೈಂದೂರು ಪ್ರಖಂಡ ಅಧ್ಯಕ್ಷ ಶ್ರೀಧರ್ ಬಿಜೂರು, ಸುಧಾಕರ ಶೆಟ್ಟಿ ಉಪ್ಪುಂದ, ಬಜರಂಗದಳ ಸಂಚಾಲಕ ಜಗದೀಶ್ ಕೊಲ್ಲೂರು, ಗೋ ಕಳೆದುಕೊಂಡ ಕುಟುಂಬದ ರಿಷಿಕಾ ಇದ್ದರು.

ವರದಿ- ಯೋಗೀಶ್ ಕುಂಭಾಸಿ

Comments are closed.