ಮುಂಬೈ

ಹೆಲ್ಮೆಟ್​​ ಧರಿಸದೆ ಸ್ಕೂಟರ್ ಚಲಾಯಿಸುತ್ತಿದ್ದವನನ್ನು ನಿಲ್ಲಿಸಲು ಹೋದ ಪೊಲೀಸಪ್ಪ ಏನಾದ ನೋಡಿ….! ವೀಡಿಯೊ

Pinterest LinkedIn Tumblr

​ಹೆಲ್ಮೆಟ್​ ಧರಿಸದ ವ್ಯಕ್ತಿಯೋರ್ವನ ವಾಹನ ಚಾಲನೆಯನ್ನು ತಡೆಯಲು ಯತ್ನಸಿದ ಪೊಲೀಸ್​​ ಪೇದೆಯ ಮೇಲೆ ಸ್ಕೂಟರ್​ ಓಡಿಸಿದ ಘಟನೆ ಮುಂಬೈ ನಗರದಲ್ಲಿ ನಡೆದಿದೆ. ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡುತ್ತಿರುವ ದ್ವಿಚಕ್ರ ವಾಹನ ಸವಾರರನ್ನು ಹಿಡಿಯುತ್ತಿರುವ ವೇಳೆ ಈ ಘಟನೆ ನಡೆದಿದ್ದು, ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ದ್ವಿಚಕ್ರ ಸವಾರನ ಈ ಕೃತ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

https://youtu.be/QaWR_Xni-1s

ಮುಂಬೈ ಟ್ರಾಫಿಕ್​ ಪೊಲೀಸರು ನಗರದಲ್ಲಿ ಹೆಲ್ಮೆಟ್​ ಧರಿಸದ ವಾಹನ ಸವಾರರನ್ನು ಹಿಡಿಯುತ್ತಿದ್ದರು. ಈ ವೇಳೆ ಸ್ಕೂಟರ್​ನಲ್ಲಿ ಬರುತ್ತಿದ್ದ ಸವಾರನೋರ್ವ ಸಂಚಾರಿ ಪೊಲೀಸರನ್ನು ನೋಡಿ ವಾಹನವನ್ನು ವೇಗವಾಗಿ ಚಲಾಯಿಸಿದ್ದಾನೆ. ಅತ್ತ ತಡೆಯಲು ಬಂದ ಪೊಲೀಸ್​​​ ಪೇದೆಯ ಮೇಲೆ ಸ್ಕೂಟರ್​ ಓಡಿಸಿದ್ದಾನೆ. ಘಟನೆಯಿಂದ ಪೊಲೀಸ್​ ಪೇದೆಗೆ ಗಾಯವಾಗಿದ್ದು, ದ್ವಿಚಕ್ರ ಸವಾರನ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ.

Comments are closed.