ಅಂತರಾಷ್ಟ್ರೀಯ

ಈಕೆ ಜೀವಂತ ಆಕ್ಟೋಪಸ್ ಅನ್ನು ತಿನ್ನಲು ಹೋಗಿ ಏನು ಮಾಡಿಕೊಂಡಿದ್ದಾಳೆ ನೋಡಿ….

Pinterest LinkedIn Tumblr

ಮನುಷ್ಯನ ರಾಕ್ಷಸಿ ಸ್ವಭಾವ ನಿಸ್ಸಾಹಾಯಕ ಪ್ರಾಣಿಗಳ ಮುಂದೆ ನಡೆಯುತ್ತದೆ. ಅದೇ ರೀತಿ ಜೀವಂತ ಆಕ್ಟೋಪಸ್ ಅನ್ನು ತಿನ್ನಲು ಹೋಗಿ ಯುವತಿಯೋರ್ವಳು ಮುಖಕ್ಕೆ ಗಾಯಗೊಂಡಿದ್ದು ಯುವತಿ ಪಜೀತಿ ವಿಡಿಯೋ ಇದೀಗ ವೈರಲ್ ಆಗಿದೆ.

https://youtu.be/XDdTuVUtdnI

ಚೀನಾದಲ್ಲಿ ಜೀವಂತವಾಗಿ ಪ್ರಾಣಿಗಳನ್ನು ತಿನ್ನುತ್ತಾರೆ. ಅದೇ ರೀತಿ ಯೂಟ್ಯೂಬ್ ವ್ಲಾಗರ್ ಒಬ್ಬಳು ಲೈವ್ ವಿಡಿಯೋದಲ್ಲಿ ಜೀವಂತ ಆಕ್ಟೋಪಸ್ ತಿನ್ನಲು ಮುಂದಾಗುತ್ತಾಳೆ. ಆದರೆ ಆಕ್ಟೋಪಸ್ ಆಕೆಯ ಮುಖವನ್ನು ಸುತ್ತಿಕೊಂಡಿದ್ದು ಕೊನೆಗೆ ಆಕೆಯ ಕೆನ್ನೆಗೆ ಕಚ್ಚಿ ಗಾಯ ಮಾಡಿದೆ. ಈ ವೇಳೆ ನೋವಿನಿಂದ ಕಿರುಚಿಕೊಂಡ ಆಕೆ ಅದನ್ನು ಮುಖದಿಂದ ಕೀಳಲು ಎಷ್ಟು ಪ್ರಯತ್ನಿಸಿದರೂ ಆಗುವುದಿಲ್ಲ.

ಸತತ ಪ್ರಯತ್ನದ ನಂತರ ಯುವತಿ ಆಕ್ಟೋಪಸ್ ನನ್ನು ಕಿತ್ತು ಹಾಕಿದಳು. ಇಷ್ಟಕ್ಕೆ ಸುಮ್ಮನಾಗದ ಯುವತಿ. ನನ್ನ ಮುಖವನ್ನು ವಿಕಾರಗೊಳಿಸಿದೆ. ನಾನು ಈ ಆಕ್ಟೋಪಸ್ ಅನ್ನು ಸುಮ್ಮನೆ ಬಿಡುವುದಿಲ್ಲ. ಮುಂದಿನ ವಿಡಿಯೋದಲ್ಲಿ ಇದನ್ನು ತಿಂದೇ ತಿನ್ನುತ್ತೇನೆ ಎಂದಿದ್ದಾಳೆ.

Comments are closed.