ಉಡುಪಿ: ರಂಗದಲ್ಲೇ ಕುಸಿದು ಬಿದ್ದು ಯಕ್ಷಗಾನ ಕಲಾವಿದರೊಬ್ಬರು ಸಾವನ್ನಾಪ್ಪಿದ ಘಟನೆ ಬೈಂದೂರುರಿನ ಜೋಗಿಬೆಟ್ಟು ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ. ಹುಡಗೋಡು ಚಂದ್ರಹಾಸ(52) ಎನ್ನುವವರೇ ಮೃತ ಕಲಾವಿದರಾಗಿದ್ದಾರೆ. ಜಲವಳ್ಳಿ ಮೇಳದ ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ.
ಪ್ರದರ್ಶನದಲ್ಲಿ ಚಂದ್ರಹಾಸ ಸಾಲ್ವನ ಪಾತ್ರ ಮಾಡುತ್ತಿದ್ದರು. ಸಂಭಾಷಣೆ ಮುಗಿಸಿ ಕುಣಿತ ಆರಂಭಿಸುತ್ತಿದ್ದಂತೆ ಹಾರ್ಟ್ ಅಟ್ಯಾಕ್ ಸಂಭವಿಸಿ ರಂಗಸ್ಥಳದಲ್ಲೇ ಕುಸಿದು ಸಾವನ್ನಾಪ್ಪಿದ್ದಾರೆ.
ಇವರು ಉತ್ತರ ಕನ್ನಡ ಮೂಲದ ಬಡಗುತಿಟ್ಟು ಯಕ್ಷಗಾನದ ಪ್ರಸಿದ್ದ ಕಲಾವಿದರಾಗಿದ್ದರು.
Comments are closed.