ಕರಾವಳಿ

ಮರಳು ಸಮಸ್ಯೆ ಪರಿಹಾರವಾಗದಿದ್ರೆ ನಾವು ಈ ಬಾರಿ ಮತದಾನ ಮಾಡಲ್ಲ!

Pinterest LinkedIn Tumblr

ಕುಂದಾಪುರ: ಕೆಲವಾರು ವರ್ಷಗಳಿಂದ ಜಿಲ್ಲಾದ್ಯಂತ ತಲೆದೋರಿರುವ ಮರಳು ಸಮಸ್ಯೆ ಶೀಘ್ರವಾಗಿ ಇತ್ಯರ್ಥಗೊಳಿಸಬೇಕು ಇಲ್ಲವಾದಲ್ಲಿ ಲೋಕಸಭಾ ಚುನಾವಣೆ ಬಹಿಷ್ಕಾರ ಮಾಡುತ್ತೇವೆಂದು ಸಾಸ್ತಾನದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದವರು ಸಾಸ್ತಾನ ಪೇಟೆಯಲ್ಲಿ ಭಾನುವಾರ ಬೆಳಿಗ್ಗೆ ಪ್ರತಿಭಟಿಸಿ ಆಕ್ರೋಷ ಹೊರಹಾಕಿದ್ದಾರೆ.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಐರೋಡಿ ವಿಠ್ಠಲ ಪೂಜಾರಿ, ಜಿಲ್ಲೆಯಲ್ಲಿ ಮರಳು ಸಮಸ್ಯೆಯಿಂದ ಬಡ ಕೂಲಿ ಕಾರ್ಮಿಕರು ಕೆಲಸವಿಲ್ಲದೇ ಬೀದಿಗೆ ಬರುವಂತಾಗಿದೆ. ಇಷ್ಟೆಲ್ಲಾ ಸಮಸ್ಯೆಗಳಾದರೂ ಕೂಡ ಜನಪ್ರತಿನಿಧಿಗಳು ಇದನ್ನು ಬಗೆಹರಿಸುವಲ್ಲಿ ಇಚ್ಚಾಶಕ್ತಿ ತೋರುತ್ತಿಲ್ಲ. ಅಧಿಕಾರಿಗಳು ಕೂಡ ಈ ಬಗ್ಗೆ ಮುತುವರ್ಜಿ ವಹಿಸುತ್ತಿಲ್ಲ. ಜಿಲ್ಲಾಡಳಿತ ಮತ್ತು ಸರಕಾರ ಜನರ ಸಮಸ್ಯೆ ಮನಗಂಡು ಶೀಘ್ರ ಮರಳು ನೀಡಬೇಕು. ಇಲ್ಲವಾದಲ್ಲಿ ಕಟ್ಟಡ ಕಾರ್ಮಿಕರು ಯಾವುದೇ ಪಕ್ಷದ ಪರವಾಗಿಯೂ ಕೆಲಸ ಮಾಡುವುದಿಲ್ಲ. ಅಲ್ಲದೇ ಇಡೀ ಜಿಲ್ಲಾದ್ಯಂತ ಚುನಾವಣ ಬಹಿಷ್ಕಾರ ಮಾಡಲಿದ್ದೇವೆ ಇದಕ್ಕೆ ಸಾಸ್ತಾನದಿಂದವೇ ಚಾಲನೆ ಸಿಕ್ಕಿದೆ ಎಂದರು.

ಸಾಸ್ತಾನ ಪೇಟೆಯಲ್ಲಿ ಚುನಾವಣ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದು ಇದಕ್ಕೆ ಅನುಮತಿಯಿಲ್ಲದ ಹಿನ್ನೆಲೆ ಐರೋಡಿ ಗ್ರಾಮಪಂಚಾಯತ್ ಪಿಡಿಒ ಸ್ಥಳಕ್ಕಾಗಮಿಸಿ ಬ್ಯಾನರ್ ವಶಕ್ಕೆ ಪಡೆದರು.

Comments are closed.