ರಾಷ್ಟ್ರೀಯ

ಮೆಟ್ರೋ ನಿಲ್ದಾಣದ ಲಿಫ್ಟ್‌ನಲ್ಲಿ ಮೈಮರೆತು ಯುವ ಜೋಡಿಗಳಿಂದ ಕಿಸ್ ! ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್!

Pinterest LinkedIn Tumblr

ಹೈದರಾಬಾದ್: ಮೆಟ್ರೋ ನಿಲ್ದಾಣದ ಲಿಫ್ಟ್‌ನಲ್ಲಿ ಯುವ ಪ್ರೇಮಿ ಜೋಡಿಗಳು ಮೈಮರೆತು ಚುಂಬಿಸುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮೆಟ್ರೋದ ಯಾವ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಹೀಗಾಗಿ ಸ್ಥಳಪತ್ತೆ ಮಾಡಿದ ಬಳಿಕ ಪೊಲೀಸರು ಸೂಕ್ತ ತನಿಖೆ ನಡೆಸಲಿದ್ದಾರೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಹೈದರಬಾದ್ ಮೆಟ್ರೋ ನಿಲ್ದಾಣದಲ್ಲಿ ಈ ರೀತಿಯ ಅಸಹ್ಯಕರ ಘಟನೆ ನಡೆದಿರುವುದು ಇದೇ ಮೊದಲು. ಇಂತಹ ಘಟನೆಯಲ್ಲಿ ಭಾಗಿಯಾಗಿರುವ ಯುವ ಜೋಡಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವುದಾಗಿ ಹೈದರಾಬಾದ್ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಎನ್ ವಿಎಸ್ ರೆಡ್ಡಿ ತಿಳಿಸಿದ್ದಾರೆ.

Comments are closed.