ಕರ್ನಾಟಕ

ಸಿದ್ದರಾಮಯ್ಯರನ್ನು ಸೋಲಿಸಿದ್ದಕ್ಕೆ ಕೊಡಗಿನಲ್ಲಿ ಜಲಪ್ರಳಯವಾಗಿದೆ: ನಿರಂಜನಾನಂದಪುರಿ ಶ್ರೀ

Pinterest LinkedIn Tumblr

ಮೈಸೂರು: ಜನರಿಗೆ ವಿವಿಧ ಭಾಗ್ಯಗಳನ್ನು ನೀಡಿ, ಉತ್ತಮ ಆಡಳಿತ ಕೊಟ್ಟಿದ್ದ ಸಿದ್ದರಾಮಯ್ಯ ಅವರನ್ನು ಮೈಸೂರಿನಲ್ಲಿ ಒಂದು ಕೋಮಿನ ಮಂದಿ ಸೋಲಿಸಿದ್ದಾರೆ. ಸಿದ್ದರಾಮಯ್ಯನವರಿಗೆ ಅನ್ಯಾಯ ಮಾಡಿದ್ದಕ್ಕೆ ಕೊಡಗಿನಲ್ಲಿ ಜಲಪ್ರಳಯ ಆಯಿತು ಎಂದು ಕನಕ ಪೀಠದ ನಿರಂಜನಾನಂದಪುರಿ ಶ್ರೀ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮೈಸೂರಿನಲ್ಲಿ ಕನಕ ಭವನ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿಯೇ ಶ್ರೀಗಳು ಈ ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯನವರು ಒಳ್ಳೆಯ ಆಡಳಿತ ಕೊಟ್ಟಿದ್ದರು. ಒಂದು ಕೋಮಿನವರು(ಒಕ್ಕಲಿಗ) ಉದ್ದೇಶಪೂರ್ವಕವಾಗಿ ಸೋಲಿಸಿದ್ದಾರೆ. ಒಂದು ವೇಳೆ ಸಿದ್ದರಾಮಯ್ಯನವರು ಜಿದ್ದು ಇಟ್ಟುಕೊಂಡಿದ್ದರೆ, ಇವತ್ತು ರಾಜ್ಯ ಸರ್ಕಾರವನ್ನು ಏನು ಬೇಕಾದರು ಮಾಡಬಹುದಿತ್ತು.

ನೀರು ಕೇಳಿದವರಿಗೆ ಹಾಲು ಕೊಡುವ ಹಾಲುಮತ ಜನಾಂಗದಲ್ಲಿ ಸಿದ್ದರಾಮಯ್ಯ ಹುಟ್ಟಿದ್ದಾರೆ. ಆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರಿಗೆ ಅನ್ಯಾಯ ಮಾಡಿದ್ದಕ್ಕೆ ಕೊಡಗಿನಲ್ಲಿ ಜಲಪ್ರಳಯ ಆಗುವಂತಾಗಿದೆ. ಈ ಹಿಂದೆ ಉಡುಪಿಯಲ್ಲಿಯೂ ಕನಕದಾಸರಿಗೆ ಶ್ರೀಕೃಷ್ಣನ ದರ್ಶನ ಮಾಡಲು ಬಿಡದಿದ್ದಾಗ, ಅಂದು ಭೂಕಂಪನವಾಗಿತ್ತು. ಹಾಲುಮತದವರನ್ನು ಸೋಲಿಸಿದರೆ ಪ್ರಕೃತಿ ಕೂಡಾ ಸಹಿಸಲ್ಲ ಎಂದು ಕಾಗಿನೆಲೆಶ್ರೀಗಳು ವಿವಾದಾತ್ಮಕವಾಗಿ ವಾಗ್ದಾಳಿ ನಡೆಸಿದ್ದಾರೆ.

Comments are closed.